spot_img
Monday, March 2, 2026
spot_img

ವಂಡ್ಸೆ: ಕಟೀಲು ಮೇಳದ ಯಕ್ಷಗಾನದಲ್ಲಿ ಗೌರವ ಸಮರ್ಪಣೆ, ಸನ್ಮಾನ

ಕುಂದಾಪುರ: ವಂಡ್ಸೆ ಸಮೀಪದ ಜಡ್ಡು ಶ್ರೀಮತಿ ಲಕ್ಷ್ಮಿ ಮತ್ತು ಮುತ್ತ ಪೂಜಾರಿ ಶ್ರೀ ತಾಯಿ ನಿಲಯದ ವಠಾರದಲ್ಲಿ ಶ್ರೀಮತಿ ಆಶಾ ಮತ್ತು ಮಂಜುನಾಥ್ ಪೂಜಾರಿ ಹಾಗೂ ಮಕ್ಕಳ ಹರಕೆಯಾಗಿ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಬಯಲಾಟದಲ್ಲಿ ಸೇವಾಕರ್ತರ ಪರವಾಗಿ ಪ್ರಸನ್ನ ಅಸ್ರಣ್ಣ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.

ಕಟೀಲು ಮೇಳದಲ್ಲಿ ಹಲವಾರು ವರ್ಷಗಳ ಕಲಾವಿದರಾಗಿ, ಪ್ರಸ್ತುತ ಮೇಳದ ಪ್ರಬಂಧಕರಾದ ಜನಾರ್ಧನ್ ಕೊಕ್ಕಡ, ಹಾಗೂ ದೈವದ ಪಾತ್ರಿಗಳು, ಹಲವಾರು ವರ್ಷಗಳಿಂದ ಶ್ರೀ ಸ್ವಾಮಿ ಮೂಡುರ ಹಾಗುಳಿ, ಮಾಸ್ತಿ, ಪಂಜುರ್ಲಿ, ಚಿಕ್ಕು ಗರಡಿ ದೈವಸ್ಥಾನ ಕುಂಟನೇರ್ಲು ದೈವಗಳ ಸೇವೆ ಸಲ್ಲಿಸುತ್ತಿರುವ ಸೀನ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

ಪ್ರಸನ್ನ ಅಸ್ರಣ್ಣ ಆಶೀರ್ವಚನ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಸೇವಾರ್ಥಿಗಳು ಉಪಸ್ಥಿತರಿದ್ದರು. ನಂತರ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಸಹಸ್ರಾರು ಜನರ ಪ್ರೇಕ್ಷಕರ ಮುಂದೆ ವಿಜೃಂಭಣೆಯಿಂದ ನೆರವೇರಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!