spot_img
Monday, March 2, 2026
spot_img

ಆರ್ಡಿ ಕೆರ್ಜಾಡಿಯಲ್ಲಿ ಯಕ್ಷಗಾನ ಕಲಾವಿದರಿಗೆ ಸನ್ಮಾನ

kundapura: ಆರ್ಡಿ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ಸಪರಿವಾರ ದೇವಸ್ಥಾನದ ಅಭಿವೃದ್ಧಿ ಸಹಾಯಾರ್ಥವಾಗಿ ಫೆಬ್ರವರಿ 28ರಂದು ಕೆರ್ಜಾಡಿ ದೇವಸ್ಥಾನದ ಸಮೀಪ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ದುರ್ಗಾ ಭಜನಾ ಮಂಡಳಿ ಕೊಂಜಾಡಿ, ಯಕ್ಷಗಾನ ಕಲಾವಿದರಾದ ಚಂದ್ರಶೇಖರ ಶೆಟ್ಟಿ ಅರಳಿಸುರಳಿ, ಮಧುಕರ ಹೆಗ್ಡೆ ಮಡಾಮಕ್ಕಿ, ಅಕ್ಷಯ ಆಚಾರ್ಯ ಮಡಾಮಕ್ಕಿ ಮತ್ತು ಸಾಲಿಗ್ರಾಮ ಮೇಳದ ಟೆಂಟ್ ನಿರ್ಮಾಣ ಕಾರ್ಮಿಕರಾದ ಅಮಕುಸ ಯಾನೆ ಅಂಕುಶ ಗೌಡರನ್ನು ಅಭಿನಂದಿಸಲಾಯಿತು.

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಬಹುಮೇಳಗಳ ಯಜಮಾನರಾದ ಪಿ.ಕಿಶನ್ ಹೆಗ್ಡೆ, ಶ್ರೀ ಗಣೇಶ ಕ್ಯಾಶೂಸ್ ಸಮೂಹ ಸಂಸ್ಥೆಗಳ ಮಾಲಕರಾದ ಗಣೇಶ ಕಿಣಿ ಬೆಳ್ವೆ, ಬಿ.ಚಂದ್ರಶೇಖರ್ ಶೆಟ್ಟಿ ಮೂಡ್ ಬೈಲ್, ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷರಾದ ವೈ.ವಿಜಯ ಕುಮಾರ ಶೆಟ್ಟಿ ಯಳಂತೂರು, ಸೂರ್ಯ ಶೆಟ್ಟಿ ಆರ್ಡಿ ಕೆರ್ಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಯತಿರಾಜ ಶೆಟ್ಟಿ ಜಗಲ್ ಗುಡ್ಡೆ, ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಹಾಗೂ ಸದಸ್ಯರುಗಳು, ಪ್ರಸಂಗಕರ್ತ ನಂದೀಶ ಶೆಟ್ಟಿ ಬಿಲ್ಲಾಡಿ, ಶ್ರೀ ದುರ್ಗಾ ಸೇವಾ ಬಳಗದ ಚಂದ್ರ, ದಯಾನಂದ ಶೆಟ್ಟಿ ಹೆಬ್ರಿ, ಪ್ರಶಾಂತ್ ಹೆಗ್ಡೆ, ಪ್ರವೀಣ್ ಹೆಗ್ಡೆ ಉಪಸ್ಥಿತರಿದ್ದರು.

ಸುದರ್ಶನ್ ಶೆಟ್ಟಿ (ಮಾಣಿ) ಆರ್ಡಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!