spot_img
Tuesday, March 3, 2026
spot_img

ತೇಜಸ್ವಿ ಸೂರ್ಯ ಎನ್ನುವ ಅಡ್ಕಸುಬಿ ವ್ಯಕ್ತಿ ಹೇಳುವ ಸುಳ್ಳನ್ನು ಕೇಳಿದರೆ ಸತ್ಯ ಹೋಗಿ ಸೂಸೈಡ್ ಮಾಡಿಕೊಳ್ಳುತ್ತದೆ! : ಕಾಂಗ್ರೆಸ್‌ ವ್ಯಂಗ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಈ ಸುಳ್ಳು ಅನ್ನತಕ್ಕಂತಹದ್ದೇನಿದೆ ಅದು ಬಿಜೆಪಿಯವರ DNA ಯಲ್ಲೇ ಅಡಕವಾಗಿದೆ! ಎಂದು ರಾಜ್ಯ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಅಣಕವಾಡಿದೆ.

ಕೇಂದ್ರದಿಂದ ರಾಜ್ಯಕ್ಕೆ ಸಲ್ಲಬೇಕಾಗಿರುವ ತೆರಿಗೆ ಹಣ ಸಿಗುತ್ತಿಲ್ಲ ಕರ್ನಾಟಕಕ್ಕೆ ಅನ್ಯಾವಾಗಿದೆ ಎಂದು ವಿರೋಧಿ ರಾಜ್ಯ ಕಾಂಗ್ರೆಸ್‌ ದೆಹಲಿಯ ಜಂತರ್‌ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿರುವುದನ್ನು ವಿರೋಧಿಸಿ ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದೆ.    

ಈ ಬಗ್ಗೆ ತನ್ನ ಅಧಿಕೃತ ಮೈಕ್ರೋಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯಲ್ಲಿ ಬಿಜೆಪಿಯನ್ನು ಟೀಕಿಸಿದ ಕಾಂಗ್ರೆಸ್, ಸಾರ್ವಜನಿಕ ಲಜ್ಜೆ ಎನ್ನುವುದನ್ನು ಸಂಪೂರ್ಣ ಕೈಬಿಟ್ಟಿರುವ ಬಿಜೆಪಿ ಸುಳ್ಳು ಹೇಳಿದರೆ ಜನರೆದುರು ಮುಖಭಂಗಕ್ಕೆ ಒಳಗಾಗುತ್ತೇವೆ ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲದೆ ಸುಳ್ಳು ಹೇಳುತ್ತಾರೆ ಎಂದು ಹೇಳಿದೆ.

ಬಿಜೆಪಿಯವರು, ಅದರಲ್ಲೂ ತೇಜಸ್ವಿ ಸೂರ್ಯ ಎನ್ನುವ ಅಡ್ಕಸುಬಿ ವ್ಯಕ್ತಿ ಹೇಳುವ ಸುಳ್ಳನ್ನು ಕೇಳಿದರೆ ಸತ್ಯ ಹೋಗಿ ಸೂಸೈಡ್ ಮಾಡಿಕೊಳ್ಳುತ್ತದೆ! ಎಂದು ವ್ಯಂಗ್ಯವಾಡಿದೆ.

15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನಯಾಪೈಸೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಯೇ ಇಲ್ಲ ಎಂದು ಸತ್ಯದ ತಲೆ ಮೇಲೆ ಹೋದಂತಹ ಸುಳ್ಳು ಹೇಳಿದ ತೇಜಸ್ವಿ ಸೂರ್ಯ ಎನ್ನುವ ಎಳೆ ಕೂಸು ಆಯೋಗದ ವರದಿಯನ್ನು ಓದಿಲ್ಲವೇ ಅಥವಾ ಸತ್ಯವನ್ನು ಕಗ್ಗೊಲೆ ಮಾಡಲು ಮುಂದಾಗಿದ್ದೇ? ಇಂತಹ ಹಸಿ ಸುಳ್ಳು ಹೇಳುವ ಆತ್ಮವಂಚನೆಯ ಬದುಕು ಬಿಜೆಪಿಗರಿಗೆ ಬೇಕೇ? ಎಂದು ಖಂಡಿಸಿ ಪ್ರಶ್ನೆ ಮಾಡಿದೆ.

ಸಂಸದ ತೇಜಸ್ವಿ ಸೂರ್ಯ ತಮ್ಮ ಅಧಿಕೃತ ʼಎಕ್ಸ್‌ʼ ಖಾತೆಯ ಮೂಲಕ ಕಾಂಗ್ರೆಸ್‌ ಪ್ರತಿಭಟನೆಯನ್ನು ವಿರೋಧಿಸಿ ಮಾತನಾಡಿದ್ದರು. ಕೇಂದ್ರ ಸರ್ಕಾರದ ಮೇಲೆ ಕರ್ನಾಟಕ ಕಾಂಗ್ರೆಸ್‌ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!