spot_img
Saturday, May 23, 2026
spot_img

ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆಯ ಪೂರ್ವ ವಿಧಿವಿಧಾನಗಳು ಆರಂಭ : ಜನವರಿ 21 ರವರೆಗಿನ ಧಾರ್ಮಿಕ ವಿಧಿವಿಧಾನಗಳು ಇಂತಿವೆ…

ಜನಪ್ರತಿನಿಧಿ ವಾರ್ತೆ (ಅಯೋಧ್ಯೆ) : ಜನವರಿ 22ರ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಲೋಕಾರ್ಪಣೆ ಸಮಾರಂಭದ ಪೂರ್ವಭಾವಿ ಆಚರಣೆಗಳು ಇಂದಿನಿಂದ(ಮಂಗಳವಾರ) ಅಯೋಧ್ಯೆಯ ದೇವಾಲಯದ ಆವರಣದಲ್ಲಿ ಆರಂಭವಾಗಲಿಕ್ಕಿದೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಪ್ರಾಣ ಪ್ರತಿಷ್ಠಾಪನೆಯ ವಿಧಿ ವಿಧಾನಗಳು ಜನವರಿ 21 ರವರೆಗೆ ಮುಂದುವರಿಯುತ್ತದೆ. ಜನವರಿ 22 ರಂದು ರಾಮ ಮಂದಿರದಲ್ಲಿ ಶ್ರೀರಾಮನ ಬಾಲಮೂರ್ತಿ ಹಾಗೂ ರಾಮಲಲ್ಲಾ ನ ಮೂಲ ಮೂರ್ತಿ  “ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಗತ್ಯವಾದ ಕನಿಷ್ಠ ಅಗತ್ಯ ಆಚರಣೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.  

ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, “ರಾಮ ಲಲ್ಲಾ ಪ್ರತಿಷ್ಠಾಪನೆ ಅನುಷ್ಠಾನ ಆಚರಣೆಗಳು ಪ್ರಾರಂಭವಾಗಿದೆ. ಜನವರಿ 22 ರಂದು ಪವಿತ್ರೀಕರಣದ ದಿನದವರೆಗೆ ಮುಂದುವರಿಯುತ್ತದೆ. ಹನ್ನೊಂದು ಅರ್ಚಕರು ಎಲ್ಲಾ ದೇವತೆಗಳ ಆವಾಹನೆ ಮಾಡುವ ಆಚರಣೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಾಣ ಪ್ರತಿಷ್ಠಾಪನೆಯಲ್ಲಿ ಏಳು ಅಧಿವಾಸಗಳಿವೆ ಹಾಗೂ ಕನಿಷ್ಠ ಮೂರು ಅಧಿವಾಸಗಳು ಆಚರಣೆಯಲ್ಲಿವೆ ಎಂದು ಟ್ರಸ್ಟ್ ಹೇಳಿದೆ. 121 “ಆಚಾರ್ಯರು ವಿಧಿವಿಧಾನಗಳನ್ನು ನಡೆಸುತ್ತಿದ್ದಾರೆ. ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು “ಅನುಷ್ಠಾನ”ದ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ, ಸಮನ್ವಯ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

ರಾಮಮಂದಿರ “ಪ್ರಾಣ ಪ್ರತಿಷ್ಠಾ” ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಪ್ರಾರಂಭವಾಗಲಿದೆ.  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ “ಪ್ರಾಣ ಪ್ರತಿಷ್ಠಾಪನೆಯ” ಪೂರ್ವ ವಿಧಿವಿಧಾನಗಳು “ಪ್ರಾಯಶ್ಚಿತ್ತ” ಮತ್ತು “ಕರ್ಮಕುಟಿ ಪೂಜೆ” ಯೊಂದಿಗೆ ಪ್ರಾರಂಭವಾಯಿತು.

ಜನವರಿ 17 ರಂದು ವಿಗ್ರಹದ “ಪುರ ಪ್ರವೇಶ”ವಾಗಲಿದೆ, ನಂತರ ಜನವರಿ 18 ರಂದು ತೀರ್ಥ ಪೂಜೆ, ಜಲ ಯಾತ್ರೆ ಮತ್ತು ಗಂಧಧಿವಾಸ್ ಹಾಗೂ ಜನವರಿ 19ರಂದು ಔಷಧಧಿವಾಸ್, ಕೇಸರಧಿವಾಸ್, ಘೃತಾಧಿವಾಸ್ ಮತ್ತು  ಧಾನ್ಯಧಿವಾಸ್  ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಜನವರಿ 20 ರಂದು ಶರ್ಕರಾಧಿವಾಸ್, ಫಲಾಧಿವಾಸ್ ಮತ್ತು ಪುಷ್ಪಧಿವಾಸ್ ಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಜನವರಿ 21 ರಂದು ವೇಳಾಪಟ್ಟಿಯ ಪ್ರಕಾರ ಮಧ್ಯಾಧಿವಾ ಹಾಗೂ ಶೈಯಾಧಿವಾ ಆಚರಣೆಗಳು ಪೂರ್ಣಗೊಳ್ಳುತ್ತವೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!