spot_img
Monday, April 6, 2026
spot_img

‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಕೆರೆ ಪುನಶ್ಚೇತನಕ್ಕೆ ಹೊಂಬಾಡಿ-ಮಂಡಾಡಿಯ ಕ್ಯಾಸನ್ ಮಕ್ಕಿ ಮದಗ ಆಯ್ಕೆ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಕುಂದಾಪುರ-2 ತಾಲೂಕಿನ ಯೋಜನಾ ಕಚೇರಿಗೆ ಸಂಬಂಧಿಸಿದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆ ಪುನಶ್ಚೇತನ ಮಾಡುವ ಉದ್ದೇಶದಿಂದ ಬಿದ್ಕಲ್‌ಕಟ್ಟೆ ವಲಯದ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಲೂರು ಕ್ಯಾಸನ್ ಮಕ್ಕಿ ಮದಗ ಕೆರೆಯನ್ನು ಆಯ್ಕೆ ಮಾಡಲಾಗಿದೆ.

ಈ ಕುರಿತು ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕೆರೆ ಪುನಶ್ಚೇತನ ಸಮಿತಿ ರಚನೆ, ಪೂರ್ವಭಾವಿ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಜಯಂತಿ ಶೆಟ್ಟಿ, ಉಪಾಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ, ಕುಂದಾಪುರ-2 ತಾಲೂಕಿನ ಯೋಜನಾಧಿಕಾರಿ ನಾರಾಯಣ ಪಾಲನ್, ಗ್ರಾಮ ಪಂಚಾಯಿತಿನ ಎಲ್ಲಾ ಸದಸ್ಯರು, ರೈತಾಪಿ ಕುಟುಂಬದ ಸದಸ್ಯರು, ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರು, ಸ್ಥಳೀಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕುಂದಾಪುರ-2 ಯೋಜನಾ ಕಚೇರಿಯ ಕೃಷಿ ಅಧಿಕಾರಿ ಅರ್ಪಿತ್ ಸ್ವಾಗತಿಸಿದರು. ಯೋಜನಾಧಿಕಾರಿ ನಾರಾಯಣ ಪಾಲನ್ ಪ್ರಾಸ್ತಾವಿಕ ಮಾತನಾಡಿ ಕೆರೆಯ ಮಹತ್ವ, ಮತ್ತು ಕೆರೆ ಸಮಿತಿಯ ರಚನೆಯ ನಂತರದ ಜವಾಬ್ದಾರಿಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕೆರೆ ಪುನಶ್ಚೇತನ ಸಮಿತಿಯನ್ನು ರಚನೆ ಮಾಡಲಾಯಿತು.ಸಮಿತಿಯ ಅಧ್ಯಕ್ಷರಾಗಿ ಅರುಣ್ ಕುಮಾರ್ ಹೆಗ್ಡೆ, ಉಪಾಧ್ಯಕ್ಷರಾಗಿ ದಿನೇಶ್ ಮೊಗವೀರ, ಕಾರ್ಯದರ್ಶಿಯಾಗಿ ನಾರಾಯಣ ಪಾಲನ್, ಖಜಾಂಜಿಯಾಗಿ ಗಣೇಶ್, ಸದಸ್ಯರುಗಳಾಗಿ ಶಂಕರ್ ಮೊಗವೀರ್, ರಮೇಶ್ ಪೂಜಾರಿ,ಬಾಲಕೃಷ್ಣ ಶೆಟ್ಟಿ, ಲಕ್ಷ್ಮಿ ಕುಲಾಲ್ತಿ, ಯಶೋಧ, ಕಮಲ ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಕುಮಾರ್ ಹೆಗ್ಡೆ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆ ಪುನಶ್ಚೇತನ ಕಾರ್ಯಕ್ರಮದಲ್ಲಿ ನಮ್ಮ ಗ್ರಾಮದ ಕೆರೆ ಆಯ್ಕೆಯಾಗಿರುವುದರ ಸಂತಷ ವ್ಯಕ್ತ ಪಡಿಸಿದರು. ಕೆರೆ ಪುನಶ್ಚೇತನ ಕಾಮಗಾರಿಯ ಬಗ್ಗೆ ಬಗ್ಗೆ ಚರ್ಚೆ ನಡೆಸಲಾಯಿತು.
ಯಡಾಡಿ ಸೇವಾ ಪ್ರತಿನಿಧಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!