spot_img
Tuesday, April 28, 2026
spot_img

ಕುರ್ಚಿ ಉಳಿಸಿಕೊಳ್ಳುವುದೇ‌ ಸಿದ್ದರಾಮಯ್ಯರವರಿಗೆ ದೊಡ್ಡ ತಲೆ ನೋವಾಗಿದೆ : ಬಿಜೆಪಿ ಟೀಕೆ

ಜನಪ್ರತಿನಿಧಿ ವಾರ್ತೆ : ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಚರ್ಚೆಯಾಗುತ್ತಿರುವ ಸಿಎಂ ಬದಲಾವಣೆ ವಿಚಾರ ಮತ್ತು ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ ಬದಲಾವಣೆಯ ವಿಚಾರವನ್ನು ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡಬಾರದು ಎಂದು ಸೂಚನೆ ನೀಡಿದ್ದರೂ, ಅದನ್ನು ಉಲ್ಲಂಘಿಸಿ ಕೆಲವು ನಾಯಕರು ಸಿಎಂ ಬದಲಾವಣೆಯ ವಿಚಾರದ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುತ್ತಿರುವುದು ಈಗ ರಾಜ್ಯ ಬಿಜೆಪಿಗೆ ರಾಜಕೀಯ ಗ್ರಾಸವಾದಂತಾಗಿದೆ.

ಈ ಬಗ್ಗೆ ರಾಜ್ಯ ಕಾಂಗ್ರೆಸ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ ಬಿಜೆಪಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಮೀಟಿಂಗ್ ‌ಮೊರೆ ಹೋಗಿರುವುದಕ್ಕೆ ಕಾರಣಗಳು :
* ಕುರ್ಚಿಗೆ ಎದುರಾಗಿರುವ ಕಂಟಕದಿಂದ ತಪ್ಪಿಸಿಕೊಳ್ಳುವುದು..!,
* ನಾನೇ ಐದು ವರ್ಷ ಸಿಎಂ ಎಂದು ಹೇಳಿರುವುದಕ್ಕೆ ಸ್ಪಷ್ಟನೆ ನೀಡುವುದು..!
* ಮಂತ್ರಿಗಳು ತಮ್ಮ ಪರ ನಿಂತಿದ್ದಾರೆ ಎಂದು ಮನವರಿಕೆ ಮಾಡಿಸುವುದು..!
* ಹೈಕಮಾಂಡ್ ಮಾತನ್ನು ಕೇಳದಂತೆ ಸಂಪುಟದ ಮುಂದೆ ಮನವಿ ಮಾಡುವುದು..!
* ಡಿ. ಕೆ. ಶಿವಕುಮಾರ್ ಅವರು ಎರಡು ವರ್ಷ ಸುಮ್ಮನೆ ಇರುವಂತೆ ತಂತ್ರಗಾರಿಕೆ ಮಾಡುವುದು…!
* ಪಂಚ ರಾಜ್ಯ ಚುನಾವಣೆಗೆ ಕಲೆಕ್ಷನ್ ಹಣ ಕ್ರೋಢೀಕರಿಸುವುದು..!
* ತೆಲಂಗಾಣ, ಛತ್ತೀಸ್ಗಢದಲ್ಲಿ ಸಿಕ್ಕಿ ಬಿದ್ದಿರುವ #ATMSarkara ದ ಹಣದ ಪ್ರಮಾಣ ತಿಳಿಯುವುದು..! ಎಂದು ಹೇಳಿದೆ.

ಮಾತ್ರವಲ್ಲದೇ, ರಾಜ್ಯವನ್ನು ಕಾಡುತ್ತಿರುವ ಬರ, ಕುಡಿಯುವ ನೀರಿನಂಥ ಜ್ವಲಂತ ಸಮಸ್ಯೆಗಳ ನಿರ್ವಹಣೆಗಿಂತಲೂ ಮುಂದಿನ ಎರಡು ವರ್ಷ ಕಾಲದವರೆಗಾದರೂ ಕುರ್ಚಿ ಉಳಿಸಿಕೊಳ್ಳುವುದೇ‌ ಸಿದ್ದರಾಮಯ್ಯರವರಿಗೆ ದೊಡ್ಡ ತಲೆ ನೋವಾಗಿದೆ ಎಂದು ಜರೆದಿದೆ.

ಇನ್ನು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ #CongressVsCongress ಹ್ಯಾಶ್‌ ಟ್ಯಾಗ್‌ನಡಿಯಲ್ಲಿ ಅಭಿಯಾನ ಆರಂಭಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!