spot_img
Tuesday, April 28, 2026
spot_img

ವಿರೋಧ ಪಕ್ಷದ ನಾಯಕನಿಲ್ಲದೆ ನಾಯಕತ್ವದ ಬರ ಎದುರಿಸುತ್ತಿರುವ ಬಿಜೆಪಿ ಬರ ಅಧ್ಯಯನಕ್ಕೆ ಹೋಗುತ್ತಿದೆಯಂತೆ : ಕಾಂಗ್ರೆಸ್‌ ವ್ಯಂಗ್ಯ

ಜನಪ್ರತಿನಿಧಿ ವಾರ್ತೆ : ರಾಜ್ಯದೆಲ್ಲೆಡೆ ಭೀಕರ ಬರ ತಾಂಡವವಾಡುತ್ತಿದ್ದು, ಜನತೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರ ರಾಜ್ಯಗಳಿಗೆ ಸಾಮೂಹಿಕ ಗುಳೆ ಹೊರಟಿರುವುದು ಅತ್ಯಂತ ಶೋಚನೀಯ ಎಂದು ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದ ಬಿಜೆಪಿಗೆ ಈಗ ಕಾಂಗ್ರೆಸ್‌ ತಿರುಗೇಟು ನೀಡಿದೆ.

ವಿರೋಧ ಪಕ್ಷದ ನಾಯಕನಿಲ್ಲದೆ ನಾಯಕತ್ವದ ಬರ ಎದುರಿಸುತ್ತಿರುವ ಬಿಜೆಪಿ ರಾಜ್ಯದ ಬರ ಅಧ್ಯಯನಕ್ಕೆ ಹೋಗುತ್ತಿದೆಯಂತೆ ಎಂದು ವ್ಯಂಗ್ಯ ಮಾಡಿದೆ.

ಕೇಂದ್ರ ಅಧ್ಯಯನ ತಂಡ ಬಂದಾಗ ಅವರಿಗೆ ಮನವರಿಕೆ ಮಾಡಿಕೊಡಲು ಯಾವೊಬ್ಬ ಬಿಜೆಪಿ ಸಂಸದರೂ ಬರಲಿಲ್ಲ, ಬಿಜೆಪಿಯ ಯಾವ ನಿಯೋಗ, ನಾಯಕರೂ ಕೇಂದ್ರ ಅಧ್ಯಯನ ತಂಡವನ್ನು ಭೇಟಿಯಾಗಲಿಲ್ಲ ಎಂದು ಹೇಳಿದ್ದು ಮಾತ್ರವಲ್ಲದೇ, ಈಗ ಬೂಟಾಟಿಕೆ ಮಾಡಲು ಹೊರಡುವ ಬದಲು ಬರ ಪರಿಹಾರ ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!