spot_img
Tuesday, April 28, 2026
spot_img

ಜನರು ಪರ ರಾಜ್ಯಗಳಿಗೆ ಸಾಮೂಹಿಕ ಗುಳೆ ಹೊರಟಿರುವುದು ಶೋಚನೀಯ : ಬಿಜೆಪಿ ಖೇದ

ಜನಪ್ರತಿನಿಧಿ ವಾರ್ತೆ :  ರಾಜ್ಯದಲ್ಲಿ ದುಡಿಮೆಗಾಗಿ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬ ಪತ್ರಿಕಾ ವರದಿಯೊಂದನ್ನು ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಕಿಡಿ ಕಾರಿದೆ.

ತನ್ನ ಅಧಿಕೃತ ಮೈಕ್ರೋ ಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯ ಮೂಲಕ ಕಾಂಗ್ರೆಸ್‌ ನನ್ನು ಟೀಕಿಸಿದ ಬಿಜೆಪಿ,  ರಾಜ್ಯದೆಲ್ಲೆಡೆ ಭೀಕರ ಬರ ತಾಂಡವವಾಡುತ್ತಿದ್ದು, ಜನತೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರ ರಾಜ್ಯಗಳಿಗೆ ಸಾಮೂಹಿಕ ಗುಳೆ ಹೊರಟಿರುವುದು ಅತ್ಯಂತ ಶೋಚನೀಯ ಎಂದು ಹೇಳಿದೆ.

ಮುಖ್ಯಮಂತ್ರಿ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮಲ್ಲಿ ನಿಜಕ್ಕೂ ಮಾನವೀಯತೆಯ ಅಂತಃಕರಣವಿದ್ದರೆ, ಮೊದಲು ರಾಜ್ಯದ ಜನತೆ ಗುಳೆ ಹೋಗುವುದನ್ನು ತಪ್ಪಿಸಿ ಎಂದು ಖೇದ ವ್ಯಕ್ತ ಪಡಿಸಿದೆ.  

ಇನ್ನು, ರಾಜ್ಯದ ಸಿಎಂ ಮತ್ತು ಡಿಸಿಎಂ ಗಳಿಗೆ ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುವಲ್ಲಿರುವ ಮುತುವರ್ಜಿಯಲ್ಲಿ, ಕೊಂಚವಾದರೂ ರಾಜ್ಯದ ಜನತೆಯ ಬಗೆಗಿದ್ದರೆ, ಗ್ರಾಮೀಣ ಭಾಗದ ಜನತೆ ಗುಳೆ ಹೋಗುವುದು ನಿಲ್ಲುತ್ತಿತ್ತು ಅಲ್ಲವೇ ಕಾಂಗ್ರೆಸ್‌ ಎಂದು ಪ್ರಶ್ನೆ ಮಾಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!