spot_img
Wednesday, January 22, 2025
spot_img

ನ.5 ರಿಂದ ಆರ್‌ಎಸ್‌ಎಸ್‌ ಕಾರ್ಯಕಾರಿ ಸಭೆ | ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದ ಜವಾಬ್ದಾರಿ ಬಗ್ಗೆ ಚರ್ಚೆ

ಜನಪ್ರತಿನಿಧಿ ವಾರ್ತೆ (ನವ ದೆಹಲಿ ) : ನವೆಂಬರ್‌ 5 ರಿಂದ 7ರವರೆಗೆ ಗುಜರಾತ್‌ ನ ಆರ್‌ ಎಸ್‌ ಎಸ್‌ ನ ರಾಷ್ಟ್ರೀಯ ಕಾರ್ಕಾರಿ ಸಮಿತಿಯ ವಾರ್ಷಿಕ ಸಭೆ ನಡೆಯಲಿದೆ ಎಂದು ಸಂಘಟನೆಯ ಮಾದ್ಯಮ ವಕ್ತಾರ ಸುನೀಲ್‌ ಅಂಬೇಕರ್‌ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯದಲ್ಲಿ ಆರ್‌ಎಸ್‌ಎಸ್‌ ಸಂಘದ ಪಾಲ್ಗೊಳ್ಳುವಿಕೆ, ಜವಾಬ್ದಾರಿ ಮಾತ್ರವಲ್ಲದೇ 2025ರಲ್ಲಿ ನಡೆಯಲಿರುವ ಆರ್‌ಎಸ್‌ಎಸ್‌ ಶತಮಾನೋತ್ಸವ ಸೇರಿದಂತೆ ಇತರೆ ಹಲವು ವಿಚಾರಗಳ ಚರ್ಚೆಯೂ ವಾರ್ಷಿಕ ಸಭೆಯ ಕಾರ್ಯಸೂಚಿಯಲ್ಲಿ ಇದೆ ಎಂದು ತಿಳಿಸಿದ್ದಾರೆ.

ಇನ್ನು, ಸಂಘ ಶಿಕ್ಷಾ ವರ್ಗದ ಪಠ್ಯಕ್ರಮ ಬದಲಾಯಿಸುವ ಯೋಜನೆ ಕೂಡ ಇದ್ದು, ಈ ಬಗ್ಗೆಯೂ ಕೂಡ ಸಭೆಯಲ್ಲಿ ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!