spot_img
Monday, April 27, 2026
spot_img

ಬೈಲೂರು ಸ.ಹಿ.ಪ್ರಾ.ಶಾಲೆಯಲ್ಲಿ ಸಂಸತ್ತ್ ಮಾದರಿ ಚುನಾವಣೆ: EVM App ಮೂಲಕ ಮತ ಚಲಾಯಿಸಿದ ವಿದ್ಯಾರ್ಥಿಗಳು!


ಕುಂದಾಪುರ, ಜೂ.6: ಕುಂದಾಪುರ ಶೈಕ್ಷಣಿಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನ ಆಯ್ಕೆಗಾಗಿ ಸಂಸತ್ತ್ ಮಾದರಿಯ ಚುನಾವಣೆಯನ್ನು ಜೂ.3ರಂದು ನಡೆಸಲಾಯಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಚುನಾವಣೆ ಪ್ರಕ್ರಿಯೆಯ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವುದು, ಚಿಹ್ನೆ ನೀಡುವಿಕೆ, ಪ್ರಚಾರ ಹೀಗೆ ಎಲ್ಲಾ ಹಂತಗಳ ನಂತರ ಮಕ್ಕಳಿಗೆ EVM ಮೂಲಕ ಮೊಬೈಲ್‌ನಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಯಿತು. ಮಕ್ಕಳು ತುಂಬಾ ಸಂಭ್ರಮದಿಂದ ಮತ ಚಲಾಯಿಸಿದರು. NOTA ಕ್ಕೂ ಅವಕಾಶ ನೀಡಲಾಗಿತ್ತು.

ನಾಯಕನ ಸ್ಥಾನಕ್ಕೆ ಮೂವರು ಮತ್ತು ಉಪನಾಯಕನ ಸ್ಥಾನಕ್ಕೆ ಐವರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಶಾಲಾ ನಾಯಕಿಯಾಗಿ ೮ನೇ ತರಗತಿ ಸ್ನೇಹಾ ಮತ್ತು ಉಪನಾಯಕಿಯಾಗಿ 7ನೇ ತರಗತಿ ಅನುಷ್ಕಾ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಸಹ ಶಿಕ್ಷಕ ಆನಂದ ಕುಲಾಲ ಕರ್ತವ್ಯ ನಿರ್ವಹಿಸಿದರೆ, ಸಹ ಶಿಕ್ಷಕರಾದ ನಾರಾಯಣ ಅಡಿಗ, ಸಂತೋಷ, ಸಂಧ್ಯಾ ಕೆ, ಗೌರವ ಶಿಕ್ಷಕಿಯರಾದ ಪ್ರಮೀಳಾ ಮತ್ತು ಸಯನ ಮತಗಟ್ಟೆ ಅಧಿಕಾರಿಗಳಗಿ ಕರ್ತವ್ಯ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಗಿರಿಜಾ ಡಿ. ಮಾರ್ಗದರ್ಶನ ಮಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!