

ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಮತ್ತು ಕುಂದಾಪುರ ಪುರಸಭೆಯ ಜಂಟಿ ಆಶ್ರಯದಲ್ಲಿ ಕುಂದಾಪುರ ಪುರಸಭೆಯ ಮುಂಭಾಗದಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಹಾಗೂ ಪುರಸಭಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಮಂಜುನಾಥ್ ವಿಶ್ವ ಪರಿಸರ ದಿನದ ಜಾಥಾಕ್ಕೆ ಚಾಲನೆ ನೀಡಿ “ಜೀವ ಜಗತ್ತಿನಲ್ಲಿ ಯಾವುದೇ ಜೀವಿಗಳಿಂದಲೂ ಪರಿಸರ ನಾಶವಾಗುತ್ತಿಲ್ಲ; ಬುದ್ದಿಜೀವಿ ಮಾನವ ಸ್ವಾರ್ಥ ಪರನಾಗಿ ಸುಂದರ ಪರಿಸರವನ್ನು ನಾಶಗೊಳಿಸುವುದರೊಂದಿಗೆ ಜೀವ ಜಗತ್ತಿಗೆ ಆಪತ್ತಾಗಿದ್ದಾನೆ ” ಎಂದರು.
ಕುಂದಾಪುರದ ಕೇಂದ್ರಭಾಗ ಪಾರಿಜಾತ ಸರ್ಕಲ್ ನಿಂದ ಜಾಥಾ ಆರಂಭವಾಗಿ ಶಿಸ್ತಿನೊಂದಿಗೆ ಪರಿಸರ ಜಾಗ್ರತಿಯ ಘೋಷಣೆಗಳೊಂದಿಗೆ ಶಾಸ್ತ್ರೀಸರ್ಕಲ್ ವರೆಗೆ ಸಾಗಿ ಅಲ್ಲಿ ಭವಿಷ್ಯದ ಸುಂದರ ಪ್ರಕೃತಿಗೆ ಕೊಡುಗೆ ಎಂಬಂತೆ ಗಿಡ ನೆಡುವುದರೊಂದಿಗೆ ಸಂಪನ್ನಗೊಂಡಿತು.
ಜಾಥಾದಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಪ್ರೊ. ಆಕಾಶ್, ಕುಂದಾಪುರ ಪುರಸಭಾ ಪರಿಸರ ಅಭಿಯಂತರ ಗುರುಪ್ರಸಾದ್, ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಹಾಗೂ ಸಿಬ್ಬಂದಿ ವರ್ಗ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಫಿರ್ದೋಸ್, ಡಾ. ಶಮೀರ್, ಡಾ. ಸುರೇಶ್ ಶೆಟ್ಟಿ. ಜಯಶೀಲ ಶೆಟ್ಟಿ, ಬೋಧಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಮೂಹದ ಪರಿಸರ ಪ್ರೇಮ ಹಾಗೂ ಶಿಸ್ತಿಗೆ ಕುಂದಾಪುರ ಪುರಸಭೆ ಹಾಗೂ ಸಮಗ್ರ ಜನತೆ ಪ್ರಶಂಸೆ ವ್ಯಕ್ತಪಡಿಸಿದೆ.