spot_img
Monday, April 27, 2026
spot_img

ಗಿಡ ನೆಡುವ ಪ್ರಕ್ರಿಯೆ ‘ಹಳೆಯ ಗುಂಡಿ, ಹೊಸ ಗಿಡ’ ಆಗಬಾರದು-ಸಚಿವೆ ಶೋಭಾ ಕರಂದ್ಲಾಜೆ


ಕುಂದಾಪುರ: ಅರಣ್ಯ ಇಲಾಖೆ ಪ್ರತಿವರ್ಷ ಪರಿಸರ ದಿನಾಚರಣೆ ಸಂದರ್ಭದಲ್ಲಿ ಸಾವಿರಾರು ಗಿಡಗಳನ್ನು ನೆಡುತ್ತಿದೆ. ಅದರಲ್ಲಿ ಎಷ್ಟು ಗಿಡಗಳು ಉಳಿದಿದ್ದಾವೆ ಎನ್ನುವುದು ಪ್ರಾಮುಖ್ಯವಾಗುತ್ತದೆ. ಹಳೆಯ ಗುಂಡಿ, ಹೊಸ ಗಿಡ ಎನ್ನುವ ವ್ಯಂಗ್ಯೋಕ್ತಿಯಂತಾಗದೆ ನೆಟ್ಟ ಗಿಡವನ್ನು ಸಂರಕ್ಷಣೆ ಮಾಡಬೇಕಾಗುದ್ದು ಕೂಡ ನಮ್ಮ ಕರ್ತವ್ಯವಾಗಿದೆ. ಗಿಡ ನೆಟ್ಟ ಮಾತ್ರಕ್ಕೆ ಕರ್ತವ್ಯ ಮುಗಿಯುವುದಿಲ್ಲ. ಆ ಗಿಡದ ಪಾಲನೆ ಪೋಷಣೆ ಮಾಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಸೋಮವಾರ ಕೋಡಿ ಶ್ರೀ ನಾಗ ಜಟ್ಟಿಗಲಿಂಗೇಶ್ವರ ದೇವಸ್ಥಾನದ ಸಮೀಪ ನಡೆದ ಮಂಗಳೂರು ವೃತ್ತ, ಕುಂದಾಪುರ ವಿಭಾಗ “ವಿಶ್ವ ಪರಿಸರ ದಿನಾಚರಣೆ -2023” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇವತ್ತು ನಮ್ಮ ದೇಶದಲ್ಲಿ 20%ದಷ್ಟು ಅರಣ್ಯ ಉಳಿದುಕೊಂಡಿದೆ. ಕಾಡ್ಗಿಚ್ಚು, ಅನಧಿಕೃತವಾಗಿ ಮರಗಳ್ಳತನದಿಂದ ಅರಣ್ಯ ನಾಶವಾಗುತ್ತಿದೆ. ಅರಣ್ಯವನ್ನು ಉಳಿಸಬೇಕು, ಪರಿಸರ ಸಂರಕ್ಷಣೆ ಮಾಡಬೇಕು ಎನ್ನುವ ದೃಷ್ಟಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಟಾನಿಸಿವೆ. ಅರಣ್ಯ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು, ಯುವಸಮುದಾಯ ಸಕ್ರಿಯವಾಗಿ ತೊಡಗಿಸಿಕೊಂಡು ಭವಿಷ್ಯದಲ್ಲಿ ಅರಣ್ಯಸಂವರ್ಧನೆಗೆ ಮುಂದಾಗಬೇಕು ಎಂದರು

ಕೆಲವೊಂದು ಪ್ರದೇಶಗಳಲ್ಲಿ ಗೃಹಪ್ರವೇಶ, ಮದುವೆ ಇತ್ಯಾದಿ ಶುಭಸಂದರ್ಭಗಳಲ್ಲಿ ಮನೆಯ ಮುಂದೆ ಗಿಡಗಳನ್ನು ನೆಡುತ್ತಾರೆ. ಇಂಥಹ ಶ್ರೇಷ್ಠ ಸಂಪ್ರದಾಯಗಳು ಪರಿಸರ ರಕ್ಷಣೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಕಾಡು ಹೆಚ್ಚಾದಾಗ ಮಳೆ ಹೆಚ್ಚಾಗುತ್ತದೆ ಎಂದು ನಮ್ಮ ಹಿರಿಯರು, ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಆ ಹಿನ್ನೆಲೆಯಲ್ಲಿ ಅರಣ್ಯ ಬೆಳೆಸುವುದು, ಪರಿಸರ ಸಂರಕ್ಷಿಸುವುದು, ಕಾಡಿನ ಸ್ಪಚ್ಚತೆ ನಮ್ಮ ಸಾರ್ವಜನಿಕ ಆದ್ಯತೆಗಳಾಗಬೇಕು ಎಂದು ಹೇಳಿದ ಅವರು, ಕಾಂಡ್ಲಾವನದ ವಿಸ್ತರಣೆಗೆ ಒತ್ತು ನೀಡುವ ಕೆಲಸ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು.

ಈ ಸಂದರ್ಭದಲ್ಲಿ ಸುರೇಶ್ ದೇವಾಡಿಗ ತೆಕ್ಕಟ್ಟೆ, ಬಾಬು ಮೊಗವೀರ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಕಳ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಗಣಪತಿ ಕೆ., ಉಡುಪಿ ಕರಾವಳಿ ನಿಯಂತ್ರಣ ವಲಯದ ಪ್ರಾರ್ದೇಶಿಕ ನಿರ್ದೇಶಕ ಶ್ರೀಪತಿ ಬಿ.ಎಸ್., ಕುಂದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೊಬೋ ಉಪಸ್ಥಿತರಿದ್ದರು.
ಕುಂದಾಪುರ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ.ನಾಯಕ್ ಸ್ವಾಗತಿಸಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು ಟಿ ವಂದಿಸಿದರು. ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮೊದಲು ಸಂಸದೆ ಶೋಭಾ ಕರಂದ್ಲಾಜೆ ಕೋಡಿ ಕಾಂಡ್ಲಾವನವನ್ನು ವೀಕ್ಷಿಸಿದರು. ನಂತರ ಕಾಂಡ್ಲಾ ಗಿಡ ನೆಟ್ಟು ವಿಶ್ವ ಪರಿಸರ ದಿನಕ್ಕೆ ಚಾಲನೆ ನೀಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!