spot_img
Wednesday, April 29, 2026
spot_img

ವಂಡ್ಸೆ ಅಂಚೆ ಕಛೇರಿಯಿಂದ ವರ್ಗಾವಣೆಗೊಂಡ ಸುರೇಖಾ ಜೆ.ಶೆಟ್ಟಿ, ವಾತ್ಸಲ್ಯ ಅವರಿಗೆ ಬೀಳ್ಕೊಡುಗೆ


ಕುಂದಾಪುರ: ವಂಡ್ಸೆ ಉಪ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ಕುಂದಾಪುರ ಪ್ರಧಾನ ಅಂಚೆ ಕಚೆರಿಗೆ ವರ್ಗಾವಣೆಗೊಂಡಿರುವ ಸುರೇಖಾ ಜೆ.ಶೆಟ್ಟಿ ಹಾಗೂ ಬ್ರಹ್ಮಾವರ ಉಪ ಅಂಚೆ ಕಛೇರಿಗೆ ವರ್ಗಾವಣೆಗೊಂಡಿರುವ ವಾತ್ಸಲ್ಯ ಅವರಿಗೆ ಬೀಳ್ಕೊಡುವ ಕಾರ್ಯಕ್ರಮ ವಂಡ್ಸೆ ಅಂಚೆ ಕಚೆರಿ ಹಾಗೂ ಶಾಖಾ ಅಂಚೆ ಕಚೇರಿ ಸಿಬ್ಬಂದಿಗಳ ವತಿಯಿಂದ ಶುಕ್ರವಾರ ನಡೆಯಿತು.

ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಜಿ.ಶ್ರೀಧರ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ವಾತ್ಸಲ್ಯ ಕಾಂಪ್ಲೆಕ್ಸ್ ವಂಡ್ಸೆ ಇದರ ಮಾಲಕರಾದ ಆನಂದ ಶೆಟ್ಟಿ ಸಬ್ಲಾಡಿ, ವೈದ್ಯರಾದ ಡಾ.ಗೋಪಾಲಕೃಷ್ಣ ಐತಾಳ್ ಉಪಸ್ಥಿತರಿದ್ದರು.

ವಂಡ್ಸೆ ಅಂಚೆ ಕಚೆರಿ ಹಾಗೂ ಶಾಖಾ ಕಚೇರಿ ಸಿಬ್ಬಂದಿಗಳು, ಸ್ಥಳೀಯ ಗಣ್ಯರು ಹಾಜರಿದ್ದರು. ಶ್ರೇಯಾಂಕ್ ಪಿ.ಅಮೀನ್ ಪ್ರಾರ್ಥನೆ ಮಾಡಿದರು. ಪೋಸ್ಟಲ್ ಅಸಿಸ್ಟೆಂಟ್ ಗೋವಿಂದ ಶೆಟ್ಟಿ ಸ್ವಾಗತಿಸಿದರು. ಇಡೂರು ಬಿಪಿ‌ಎಂ ಪ್ರಸನ್ನ ವಂದಿಸಿದರು. ಪೋಸ್ಟಲ್ ಅಸಿಸ್ಟೆಂಟ್ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!