13.5 C
New York
Tuesday, March 21, 2023

Buy now

spot_img

ಮಾನಸಿಕ ಕಾಯಿಲೆ ಇರುವವರು ಮದುವೆ ಆಗಬಹುದು ಆದರೆ …

ಮಾನಸಿಕ ಸಮಸ್ಯೆ ಇರುವವರು ಮದುವೆಯಾಗಬಹುದೇ? ಆಗಬಹುದು ಆದರೆ …

ಇತ್ತೀಚಿನ ದಿನಗಳಲ್ಲಿ ಪಕ್ಕದ ಜಿಲ್ಲೆ ಒಂದಕ್ಕೆ ನನ್ನ ಗ್ರಾಹಕರು ಒಬ್ಬರ  ವಿವಾಹ ವಿವಾಹ attend ಮಾಡಲೆಂದೇ ಪ್ರಯಾಣ ಮಾಡಿದೆ. ಇದಕ್ಕೊಂದು ವಿಶೇಷ ಕಾರಣವಿತ್ತು. ಗೌಪ್ಯತೆಯ ಕಾರಣ ಸಂದರ್ಭಗಳನ್ನು ಬದಲಿಸಿದ್ದೇನೆ.

ಹುಡುಗಿಗೆ ಸುಮಾರು 32 ವರ್ಷ ಹತ್ತಾರು ವರ್ಷಗಳಿಂದ ಸ್ಕಿಜೋಫ್ರೇನಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹುಡುಗಿಗೆ ಸುಮಾರು ಎರಡು ಮೂರು ಬಗೆಯ ಮಾತ್ರೆಗಳಿವೆ. ಮನೋವೈದ್ಯರ ಸಲಹೆಯಂತೆ ಹುಡುಗಿಯ ಮನೆಯವರು ಅವಳಿಗೆ ಮದುವೆ ಮಾಡುವ ಯೋಚನೆ ಅಲ್ಲಿ ಇರಲಿಲ್ಲ. ತೀವ್ರ ಬಗ್ಗೆ ಮಾನಸಿಕ ಕಾಯಿಲೆ ಇರುವುದರಿಂದ ಹಾಗೂ  ಮಾತ್ರೆ ತೆಗೆದುಕೊಳ್ಳುವುದು ಅಗತ್ಯವಾಗಿರುವುದರಿಂದ” ನಾವೇ ನಮ್ಮ ಮಗಳನ್ನು ನೋಡಿಕೊಳ್ಳುವ” ಅನ್ನುವ ನಿರ್ಧಾರಕ್ಕೆ ಬಂದಿದ್ದರು. ಹುಡುಗಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಬದುಕಿದಷ್ಟು ಕಾಲ ಅವಳಿಗೆ ತಾವೇ ಆಸರೆ ಎಂದು ಅಪ್ಪ-ಅಮ್ಮ ತಿಳಿದುಕೊಂಡಿದ್ದರು. ಹುಡುಗಿ ಅಣ್ಣ ತಮ್ಮಂದಿರಿಗೆ ಮದುವೆಯಾಗಿದ್ದು ಅವರು ಅವರ ಪಾಡಿಗೆ ಬೇರೆ ಮನೆ ಮಾಡಿಕೊಂಡಿದ್ದರು. ಆದರೆ ನಿರಾಶದಾಯಕ ದಿನಗಳು ಯಾವಾಗಲೂ ಇರುತ್ತದೆ ಎನ್ನುವುದು ಸುಳ್ಳು, ಹುಡುಗಿ ತಂದೆಯ ಕಾರ್ಖಾನೆಯಲ್ಲಿ ಹೊರಗೆ ರಿಸೆಪ್ಶನ್ ನಲ್ಲಿ ಕುಳಿತಿರುತ್ತಿದ್ದಳು. ತಂದೆಯನ್ನು ಭೇಟಿ ಮಾಡಲು ಬರುತ್ತಿದ್ದ ಹಲವರಲ್ಲಿ ಒಬ್ಬರ ಕಣ್ಣಿಗೆ ಹುಡುಗಿ ಬಿದ್ದಳು. ಅವರ ತಮ್ಮನ ಮಗನೊಬ್ಬ ಇನ್ನು ಮದುವೆಯಾಗದೆ ಇದ್ದ, ಅವನಿಗೆ ಈ ಹುಡುಗಿಯನ್ನು ಏಕೆ ನೋಡಬಾರದು? ಎಂದು ಅವರು ಯೋಚಿಸಿದರು. ಹುಡುಗಿ ನೋಡಲು ಲಕ್ಷಣವಾಗಿದ್ದಳು. ಹುಡುಗನಿಗೆ 35 ವರ್ಷ ವಯಸ್ಸು. ಈ ವಿಷಯವನ್ನು ತಂದೆಯೊಂದಿಗೆ ಪ್ರಸ್ತಾಪಿಸಿದಾಗ ಹುಡುಗಿಯ ತಂದೆ ಒಪ್ಪಲೇ ಇಲ್ಲ. ಬಂದವರು ಆತ್ಮೀಯರಾಗಿದ್ದರಿಂದ ಅವರೊಂದಿಗೆ ಇದ್ದ ವಿಷಯವನ್ನು ಮರೆಮಾಚದೆ ತಿಳಿಸಿದರು. ಅವಳು ತೀವ್ರ ಬಗ್ಗೆ ಕಾಯಿಲೆಯಿಂದ ಬಳಲುತ್ತಿದ್ದು ಗುಣಮುಖಳಾಗಿದ್ದಳು, ಆದರೆ ಮಾತ್ರೆಗಳನ್ನು ತೆಗೆದುಕೊಳ್ಳಲೇಬೇಕು ಎಂದು ವೈದ್ಯರು ತಿಳಿಸಿದ್ದಾರೆ ,ಹಾಗಿರುವಾಗ ನಾವು ಮದುವೆ ಮಾಡುವುದು ಬೇಡ ಎಂಬ ನಿರ್ಧಾರವನ್ನು ಮಾಡಿದ್ದೇವೆ ,ಆದ್ದರಿಂದ ದಯವಿಟ್ಟು ಮುಂದುವರಿಯಬೇಡಿ ಎಂದು ಹೇಳಿದರು.ಬಂದವರು ತಮ್ಮ ಕೆಲಸ ಮುಗಿಸಿ ವಾಪಸ್ ಮನೆಗೆ ಬಂದರು. ತಮ್ಮ ತಮ್ಮನ ಮಗನ ಹತ್ತಿರ ಈ ವಿಷಯವನ್ನು ಪ್ರಸ್ತಾಪಿಸಿದರು. ತಮ್ಮನ ಮಗ ಆ ಕೂಡಲೇ ಹುಡುಗಿಯನ್ನು ನೋಡಬೇಕೆಂದು ಕೇಳಿಕೊಂಡ.

ಇದರಂತೆ ಹುಡುಗಿಯನ್ನು ನೋಡಲು ತನ್ನ ದೊಡ್ಡಪ್ಪನೊಂದಿಗೆ ಬಂದ. ಹುಡುಗಿಯ ಮನೆಯವರದು ಒಂದೇ ಪಟ್ಟು. “ನೀವು ಅವಳಿಗೆ ಚಿಕಿತ್ಸೆ ನೀಡುವ ವೈದ್ಯರನ್ನು ಒಮ್ಮೆ ಭೇಟಿಯಾಗಲೇಬೇಕು. ಅದಾದ ಮೇಲೆ ನಾವೆಲ್ಲ ಮುಂದುವರಿಸುವುದು.”

ಹುಡುಗ ಹುಡುಗನ ತಂದೆ ದೊಡ್ಡಪ್ಪ ಎಲ್ಲರೂ ಹುಡುಗಿಯ ತಾಯಿ ತಂದೆ ಮತ್ತು ಹುಡುಗಿಯೊಂದಿಗೆ ವೈದ್ಯರ ಕ್ಲಿನಿಕ್ಕಿಗೆ ಬಂದರು.

ಹುಡುಗಿಗೆ ಈ ಸಂಬಂಧ ಇಷ್ಟವಿದೆಯೇ ?ಅನ್ನುವುದು ಮನೋವೈದ್ಯರ ಮೊದಲ ಪ್ರಶ್ನೆಯಾಗಿತ್ತು. ಹುಡುಗಿ ಇಷ್ಟವಿದೆ ಎಂಬುದನ್ನು ತಿಳಿಸಿದಾಗ ಈ ಹುಡುಗಿಯನ್ನು ನೋಡಿಕೊಳ್ಳುತ್ತಿದ್ದ ಆಪ್ತ ಸಮಾಲೋಚಕಿ ಒಬ್ಬರನ್ನು ಕರೆದು ಪುನಃ ಈ ವಿಷಯವನ್ನು ಮನೋವೈದ್ಯರು ಮನವರಿಕೆ ಮಾಡಿಕೊಂಡರು. ಹುಡುಗಿಯ ಒಪ್ಪಿಗೆಯ ನಂತರ ಎರಡೂ ಕುಟುಂಬದವರನ್ನು, ಹುಡುಗನನ್ನು ಹುಡುಗಿಯನ್ನು ಕುಳ್ಳಿರಿಸಿ ವೈದ್ಯರು

ಚಿತ್ತವಿಕಲತೆಯ ಬಗ್ಗೆ  ಸಂಪೂರ್ಣವಾಗಿ ವಿಷಯಗಳನ್ನು ತಿಳಿಸಿದರು. ಮಾತ್ರೆಗಳ ಅಗತ್ಯತೆ, ಕೆಲವೊಮ್ಮೆ ಕಾಯಿಲೆಯಿಂದ ಕೆಲವು ಚಿಹ್ನೆಗಳು ಅವಳ ಮನಸ್ಸಿನ ಮೇಲೆ ಬೀರುವ ಪರಿಣಾಮಗಳು, ಅವಳ ಲೈಂಗಿಕ ಜೀವನದಲ್ಲಿ ಬರಬಹುದಾದ ಸಮಸ್ಯೆಗಳು, ಮಾತ್ರೆ ಇರುವಾಗ ಗರ್ಭಿಣಿಯಾದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು , ಮುಂತಾದ ವಿಷಯಗಳ ಬಗ್ಗೆ ಸವಿಸ್ತಾರವಾಗಿ ವೈದ್ಯರು ತಿಳಿಸಿದರು. ಬೇಕಿದ್ದರೆ ಪರಿಚಯವಿರುವ ಬೇರೆ ಮನೋವೈದ್ಯರ ಹತ್ತಿರ ಹೋಗಿ ವಿಚಾರ ವಿನಿಮಯ ಮಾಡಬಹುದು ಎಂದು ಕೂಡ ತಿಳಿಸಿದರು.

ಹುಡುಗನ ಮನೆಯವರು ಒಂದೆರಡು ದಿನ ಯೋಚನೆ ಮಾಡಿ ತಿಳಿಸುತ್ತೇನೆ ಎಂದರು. ಅದರಂತೆ ಹುಡುಗನ ಮನೆಯವರು ತಮ್ಮ ಒಪ್ಪಿಗೆ ಸೂಚಿಸಿದರು ಮತ್ತು ತಮಗೆ ಪರಿಚಯವಿರುವ ಮನೋವೈದ್ಯರ ಒಟ್ಟಿಗೆ ಸಮಾಲೋಚನೆ ನಡೆಸಿದ ಬಗ್ಗೆ ಕೂಡ ತಿಳಿಸಿದರು. ಇದಾದ ಮೇಲೆ ವೈದ್ಯರು ಹುಡುಗಿಯ ಆಪ್ತ ಸಮಾಲೋಚಕಿಗೆ ಹುಡುಗಿಯೊಂದಿಗೆ ವಿವಾಹ ನಂತರದ ಜೀವನ, ಲೈಂಗಿಕತೆ, ಅತ್ತೆ ಮಾವನೊಂದಿಗೆ ಹೊಂದಿಕೊಂಡು ಬದುಕುವ ರೀತಿ ಮುಂತಾದ ವಿಷಯಗಳ ಬಗ್ಗೆ ಕೌನ್ಸೆಲಿಂಗ್ ಮಾಡಲು ತಿಳಿಸಿದರು. ಹೀಗೆ ಆಕಸ್ಮಿಕವಾಗಿ ಮದುವೆ ನಿಶ್ಚಯವಾಯಿತು.

ಮನೋವೈದ್ಯನಾಗಿ ನಾನು ಇಲ್ಲಿ ನೋಡಿದ್ದೇನೆಂದರೆ ಹುಡುಗಿಯ  ಮುಗ್ದತೆ ಮತ್ತು ತಾಯಿ ತಂದೆಯರ ಪ್ರಾಮಾಣಿಕತೆ ಹಾಗೆಯೇ ಹುಡುಗನ ಕಡೆಯವರ ವಿಶಾಲ ಹೃದಯ ಮತ್ತು ಪ್ರಾಮಾಣಿಕತೆ. ಮದುವೆ ನಡೆದು ಹೋಯಿತು ದೂರದ ಪ್ರಯಾಣ ಮುಗಿಸಿ ಮನೆಗೆ ಬಂದೆ. ಮರುದಿನ ಕ್ಲಿನಿಕ್ಕಿಗೆ ಹೋದಾಗ ಮೊದಲು ನೋಡಲು ಸಿಕ್ಕಿದ್ದೆ ಕಳೆದ 14 ವರ್ಷಗಳಿಂದ ನಾನು ನೋಡುತ್ತಿದ್ದ ಇಂಜಿನಿಯರ್ ದಂಪತಿಗಳು. ಇಲ್ಲಿ ಇಂಜಿನಿಯರ್ ಗಂಡ ಬೈ ಪೋಲಾರ್ ಕಾಯಿಲೆಯಿಂದ ಬಳಲುತ್ತಿದ್ದ. ತನ್ನ ಕಾಯಿಲೆಯ ಕಾರಣ ಮದುವೆಯಾಗುವುದಿಲ್ಲ ಎಂದು ನಿರ್ಧಾರ ಮಾಡಿದ್ದ. ಆದರೆ ಆತನ ಸಹೋದ್ಯೋಗಿ ಈ ಹುಡುಗಿ ಇವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಅವಳಿಗೂ ಕೂಡ 14 ವರ್ಷಗಳ ಹಿಂದೆ ಬೈ ಪೋಲಾರ್ ಕಾಯಿಲೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದೆ. ಹುಡುಗ ಬಹಳ ಶ್ರೀಮಂತ ಮನೆತನಕ್ಕೆ ಸೇರಿದವನು. ಹುಡುಗಿ ಒಂದು ಬಡ ಕುಟುಂಬದ ಆಶಾದೀಪವಾಗಿದ್ದಳು. ಹುಡುಗಿಯ ತಾಯಿ ತಂದೆಗೆ ಸ್ವಲ್ಪವೂ ಇಷ್ಟವಿರದ ಈ ಮದುವೆ ಹುಡುಗಿಯ ಹಠದಿಂದ ಸಂಪನ್ನಗೊಂಡಿತ್ತೂ. 14 ವರ್ಷದಿಂದ ಚಿಕಿತ್ಸೆ ಪಡೆಯುತ್ತಿರುವ ಹುಡುಗ ಯಾವುದೇ ಸಮಸ್ಯೆ ಇಲ್ಲದೆ ವೈವಾಹಿಕ ಜೀವನದಲ್ಲಿ ಮುಂದೆ ಬಂದಿದ್ದ. ಎರಡು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರು ಮತ್ತು ಅತ್ತೆ ಮಾವರನ್ನು ಕೂಡ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ.

ತೀವ್ರ ಬಗ್ಗೆ ಮಾನಸಿಕ ಸಮಸ್ಯೆಗಳು ಇರುವವರು ಮದುವೆಯಾದಂತಹ ಹಲವು ಪ್ರಸಂಗಗಳು ಇವೆ. ಯಾರು ಪ್ರಾಮಾಣಿಕವಾಗಿ ಕಾಯಿಲೆಯ ಬಗ್ಗೆ ಸಂಪೂರ್ಣ ಮಾಹಿತಿ ಹೇಳಿ ಮದುವೆಯಾಗುತ್ತಾರೋ ಅಂತಹ ಮದುವೆಗಳು ಬಾಳುತ್ತವೆ. ಹೇಳದೆ ಮರೆಮಾಚಿ ಮದುವೆ ಮಾಡಿ ಕೊನೆಗೆ ಮಾತ್ರೆಯು ಕೊಡದೆ ಮದುವೆ ಮಾಡುವವರು ಕಾಯಿಲೆ ಮದುವೆಯ ನಂತರ ಜಾಸ್ತಿಯಾಗಿ ವಿಚ್ಛೇದನದತ್ತ ಹೋದದ್ದನ್ನು ನೋಡಿದ್ದೇನೆ. ಆದ್ದರಿಂದ ಮಾನಸಿಕ ಕಾಯಿಲೆ ಇರುವವರನ್ನು ಮದುವೆ ಮಾಡುವ ಮುನ್ನ ಈ ವಿಷಯ ನೆನಪಿನಲ್ಲಿಟ್ಟುಕೊಳ್ಳಿ.

ಕಾಯಿಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮದುವೆಯಾಗುವ ಸಂಗಾತಿಗೆ ತಿಳಿಸಬೇಕು. ಮಾನಸಿಕ ಸಮಸ್ಯೆ ಇರುವವರು ಮದುವೆಯಾಗಬಾರದು ಎಂದು ಕಾನೂನಿನಲ್ಲಿ ಇಲ್ಲ. ಮಾನಸಿಕ ಕಾಯಿಲೆಗೆ ತೆಗೆದುಕೊಳ್ಳುವ ಮಾತ್ರೆಗಳು ಲೈಂಗಿಕ ಶಕ್ತಿಯ ಮೇಲೆ, ಲೈಂಗಿಕ ಆಸಕ್ತಿಯ ಮೇಲೆ ಹಾಗೂ ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರಬಹುದು ಎಂಬುದು ವೈಜ್ಞಾನಿಕ ಸತ್ಯ. ಹಲವೊ ಮ್ಮೆ ಕಾಯಿಲೆಯಿಂದ ಬಳಲುತ್ತಿದ್ದವರ ಮನೆಯವರು ಸ್ವಲ್ಪ ರಾಜಿ ಮಾಡಿಕೊಂಡು ತಮಗಿಂತ ಕೆಳ ಅಂತಸ್ತಿನ ಸಂಬಂಧಗಳನ್ನು ಹುಡುಕಿಕೊಂಡು ಹೋಗಿ ವೈಜ್ಞಾನಿಕವಾಗಿ ಕಾಯಿಲೆಯ ಬಗ್ಗೆ ಮಾಹಿತಿಯನ್ನು ತಿಳಿಸಿ ಮದುವೆ ಮಾಡಿದ್ದನ್ನು ನೋಡಿದ್ದೇನೆ. ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

Related Articles

Stay Connected

21,961FansLike
3,745FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!