spot_img
Tuesday, May 5, 2026
spot_img

ಕೃಷ್ಣಮೂರ್ತಿ ಮಂಜರಿಗೆ ಶ್ರೀ ಶಾರದಾ ಪೀಠದಿಂದ ‘ಭಾರತೀ ತೀರ್ಥ ಪುರಸ್ಕಾರ ಗೌರವ’

ಸನಾತನ ಧರ್ಮ ಸಂಸ್ಕಾರದ ಶ್ರೇಷ್ಠ ಸ್ಥಾನ-ಶ್ರೀ ವಿಧುಶೇಖರ ಭಾರತೀ ಶ್ರೀ

ಕುಂದಾಪುರ: ನಮ್ಮ ಶ್ರೇಷ್ಠ ಸನಾತನ ಧರ್ಮ ಸಂಸ್ಕಾರ ಪಾಲಿಸಿದರೆ ಶ್ರೇಷ್ಠ ಸ್ಥಾನ ಪ್ರಾಪ್ತಿಯಾಗುತ್ತದೆ. ಸಂಸ್ಕಾರಯುತವಾದ ವಿದ್ಯೆಯನ್ನು ಕಲಿಸುವುದರ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಶ್ರೀಗಳು ತಿಳಿಸಿದರು.

ಅವರು ಮೇ 4ರಂದು ಕುಂಭಾಶಿ ಭಾರತೀತೀರ್ಥ ಸಭಾಭವನದಲ್ಲಿ ಶ್ರೀ ದುರ್ಗಾಪರಮೇಶ್ವರೀ, ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಪರಿವಾರ ದೇವರ ಅಷ್ಟಬಂಧ ಪುನಃಪ್ರತಿಷ್ಠೆ ವರ್ಧಂತಿ ಪ್ರಯುಕ್ತ ಮಠದ ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ನೂತನ ರಥ ಸಮರ್ಪಣೆಯ ಸೇವಾಕರ್ತ, ದಾನಿ ಹೈದರಾಬಾದ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕೊಡಮಾಡಿದ ನೂತನ ರಥ ಸಮರ್ಪಣೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವವಚನ ನೀಡಿದರು.

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಸೇವೆ ಮಾಡುವ ಶಕ್ತಿ ಮತ್ತು ಪ್ರೇರಣೆಯನ್ನು ಭಗವಂತ ನಿರಂತರವಾಗಿ ನೀಡುತ್ತಾ ಇರುತ್ತಾನೆ. ಒಳ್ಳೆಯ ಕೆಲಸ ಆಗುವ ಪ್ರದೇಶಗಳಲ್ಲಿ ಮಂಜರು ಇರುತ್ತಾರೆ. ಸತ್ಕಾರ್ಯಗಳನ್ನು ಪ್ರೋತ್ಸಾಹಿಸುವ ಶಕ್ತಿಯನ್ನು ಮಂಜರಿಗೆ ಭಗವಂತ ನೀಡಿದ್ದಾನೆ. ಈ ಪ್ರಪಂಚದಲ್ಲಿ ಶಕ್ತಿ ಮತ್ತು ಪ್ರೇರಣೆ ಒಬ್ಬರಲ್ಲಿಯೇ ಇರುವುದು ಅಪರೂಪ. ಅಂತಹ ಅಪರೂಪದ ವ್ಯಕ್ತಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು. ಭಗವದ್ ಭಕ್ತಿ, ಗುರುಭಕ್ತಿ, ಧರ್ಮಶ್ರದ್ಧೆಯನ್ನು ಹೊಂದಿರುವ ಮಂಜರಿಂದ ಅನೇಕ ಉತ್ತಮ ಸೇವೆಗಳು ಭಗವಂತನಿಗೆ ಸಲ್ಲುತ್ತಾ ಇದೆ. ಈ ಸಂದರ್ಭದಲ್ಲಿ ನಮ್ಮ ಗುರುಗಳ ಹೆಸರಲ್ಲಿ ಪೀಠದ ಸೇವೆಗೆ ಅನುಗ್ರಹ ಪೂರ್ವಕವಾಗಿ ಶ್ರೀ ಭಾರತೀತೀರ್ಥ ಪುರಸ್ಕಾರ ಗೌರವವನ್ನು ನೀಡುವುದಾಗಿ ಸಂಕಲ್ಪ ಮಾಡಿದ್ದೇವೆ ಎಂದರು.

ನಮ್ಮಲ್ಲಿ ಕರ್ತವ್ಯ ಪ್ರಜ್ಞೆ ಜಾಗೃತವಾಗಿರಬೇಕು. ನಾಳೆ ಮಾಡುತ್ತೇವೆ, ಆಮೇಲೆ ಮಾಡುತ್ತೇವೆ ಎನ್ನುವ ಮನಸ್ಥಿತಿ ಇರಬಾರದು. ಕಾಲಹರಣ ಮಾಡದೇ ಕೆಲಸದ ಕಡೆ ಒತ್ತು ನೀಡಬೇಕು, ಕಾಯಕ ಶ್ರದ್ದೆ ಬೆಳೆಸಿಕೊಳ್ಳಬೇಕು ಎಂದು ಭಕ್ತ ಸಮೂಹಕ್ಕೆ ಆಶೀರ್ವದಿಸಿದರು.

ಶೃಂಗೇರಿ ಶ್ರೀ ಶಾರದಾ ಪೀಠದಪ್ರಾಂತೀಯ ಧರ್ಮಾಧಿಕಾರಿ ಹಾಗೂ ನಾಗಪಾತ್ರಿ ವೇ| ಮೂ| ಬಡಾಕೆರೆ ಲೋಕೇಶ ಅಡಿಗ, ಕೋಟೇಶ್ವರದ ರಥ ಶಿಲ್ಪಿ ರಾಜಗೋಪಾಲ ಆಚಾರ್ಯ, ಶ್ರೀ ಶೃಂಗೇರಿ ಶಂಕರ ಮಠದ ಪ್ರಮುಖರಾದ ಲಕ್ಷ್ಮೀಶ ಅಡಿಗ ಬಡಾಕೆರೆ, ನಾಗೇಂದ್ರ ಅಡಿಗ ಬಡಾಕೆರೆ, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಠದ ಭಕ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀಗಳು ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು-ಶಾಂತಿ ಕೃಷ್ಣಮೂರ್ತಿ ಮಂಜರು ದಂಪತಿಗೆ ಶೃಂಗೇರಿ ಶ್ರೀ ಶಾರದಾ ಪೀಠದಿಂದ ಭಾರತೀ ತೀರ್ಥ ಪುರಸ್ಕಾರ ಗೌರವ ಪ್ರದಾನ ಮಾಡಿದರು. ಹಾಗೂ ವಿದ್ಯಾರ್ಥಿಗಳಿಗಾಗಿ ನಡೆದ ಶ್ರೀ ಶಾರದಾ ಸದ್ವಿದ್ಯಾ ವಸಂತ ವೇದ ಸಮಾರೋಪ, ಶಂಕರ ಜಯಂತಿ ಆಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆಸಲಾದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶ್ರೀಗಳು ಬಹುಮಾನ ವಿತರಿಸಿದರು.

ವೇ| ಮೂ| ಬಡಾಕೆರೆ ಲೋಕೇಶ ಅಡಿಗ ಸ್ವಾಗತಿಸಿದರು. ಯಕ್ಷಗಾನ ಪ್ರಸಂಗಕರ್ತ ಪವನ್ ಕಿರಣಕೆರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರ್ವಹಿಸಿದರು. ಶಂಕರನಾರಾಯಣ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ| ವೆಂಕಟರಾಮ್ ಭಟ್ ನೆಂಪು ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!