spot_img
Monday, May 4, 2026
spot_img

ಸಂಸ್ಥೆಗಳ ವಿವಿಧ ಪ್ರಕಾರಗಳ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಕಾಳಜಿ ದೊಡ್ಡದು: ಆಂಡ್ರ್ಯು ಡಿ. ಸಿಲ್ವ

ತೆಕ್ಕಟ್ಟೆ: ಇಪ್ಪತ್ತೈದು ವರ್ಷಗಳ ಕಾಲ ಯಶಸ್ವೀ ಕಲಾವೃಂದವನ್ನು ಮುನ್ನಡೆಸುವಲ್ಲಿ ಅತ್ಯುನ್ನತ ಸಹಕಾರ ನೀಡುತ್ತಾ ತಮ್ಮ ಕೇಂದ್ರದ ಮಕ್ಕಳಿಗೆ ಒಂದು ಅವಕಾಶವಾಗಲಿ ಎಂಬ ಕಾಳಜಿಯಿಂದ ಸಂಸ್ಥೆಗಳ ವಿವಿಧ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ಮಾಡುವ ಮನಸ್ಸು ಹೆರಿಯ ಮಾಸ್ಟರ್‌ರವರದ್ದು. ತನ್ನ ದುಡಿಮೆಯ ಒಂದು ಪಾಲನ್ನು ಇಂತಹ ಕಾರ್ಯಕ್ರಮಗಳಿಗೆ ವಿನಿಯೋಗಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದು ಕಲಾ ಪೋಷಕ ಆಂಡ್ರ್ಯು ಡಿ ಸಿಲ್ವಾ ಹೆರಿಯ ಮಾಸ್ಟರ್‌ರವರನ್ನು ಗೌರವಿಸಿ ಮಾತನ್ನಾಡಿದರು.

ತೆಕ್ಕಟ್ಟೆ ದೇವಾಡಿಗರ ಬೆಟ್ಟುವಿನಲ್ಲಿ ಮೇ ೧ರಂದು ಆಯೋಜಿಸಿದ ಯಶಸ್ವೀ ಕಲಾವೃಂದದ ಕಾರ್ಯಕ್ರಮದಲ್ಲಿ ಹೆರಿಯ ಮಾಸ್ಟರ್ ಹಾಗೂ ಶ್ರೀಮತಿ ಗುಲಾಬಿಯವರನ್ನು ಗೌರವಿಸಿ ಆಂಡ್ರ್ಯು ಡಿ ಸಿಲ್ವಾ ಮಾತನ್ನಾಡಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಮಾತನ್ನಾಡಿ, ಕಲೆಯು ನಿಂತ ನೀರಲ್ಲ. ಮಕ್ಕಳಿಗೆ ಕಲೆಯನ್ನು ಕಲಿಸಿ ಮುಂದಿನ ಜನಾಂಗಕ್ಕೆ ಕೈ ದಾಟಿಸುವ ಕೆಲಸ ಶ್ಲಾಘನೀಯ ಎಂದರು. ಗುರು ದೇವದಾಸ್ ರಾವ್ ಕೂಡ್ಲಿ, ಶ್ರೀನಿವಾಸ ಮಾಸ್ಟರ್, ಉದ್ಯಮಿ ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಕು| ಪ್ರಣಮ್ಯ, ಮಾ| ಮನೀಶ್ ಉಪಸ್ಥಿತರಿದ್ದರು. ಬಳಿಕ ಸಂಗೀತ ಸಂಜೆ, ಯಕ್ಷ ಗಾನ ವೈಭವ, ಯಕ್ಷಗಾನ ಸುಧನ್ವಾರ್ಜುನ ರಂಗಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!