spot_img
Monday, May 4, 2026
spot_img

ವಂಡಾರು ಶ್ರೀಭುವನೇಶ್ವರಿ ದೇವಿಯ ದೇವಳದ ನೂತನ ಸ್ವಾಗತ ಗೋಪುರ ಅನಾವರಣ

ಕುಂದಾಪುರ: ದೇವರ ಪ್ರೇರಣೆ ಹಾಗೂ ಭಕ್ತರ ಇಚ್ಛಾ ಶಕ್ತಿ,ಧೃಡ ಸಂಕಲ್ಪಗಳಿಂದ ಧಾರ್ಮಿಕ ಕ್ಷೇತ್ರದ ಬೆಳವಣಿಗೆಗೆ ಸಾಧ್ಯವಿದೆ.ಕರ್ನಾಟಕದಲ್ಲಿ ಅತೀ ಅಪರೂಪದ ದೇವಳಗಳಲ್ಲಿ ವಂಡಾರು ಶ್ರೀಭುವನೇಶ್ವರಿ ದೇವಿಯ ದೇವಳವು ಒಂದಾಗಿದೆ.ದೇವಳವು ಅತ್ಯಂತ ಪಾವಿತ್ರ್ಯತೆಯ ಧಾರ್ಮಿಕ ಕೇತ್ರವಾಗಿ ಭಕ್ತಾಧಿಗಳ ಸಕಲ ಇಷ್ಟಾರ್ಥಗಳನ್ನು ಇಡೇರಿಸುವ ಪವಿತ್ರ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಲಿ ಎಂದು ಉಡುಪಿ ಶ್ರೀಪೇಜಾವರ ಅಧೋಕ್ಷಜ ಮಠದ ಶ್ರೀಶ್ರೀಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಅವರು ವಂಡಾರು ಶ್ರೀಭುವನೇಶ್ವರಿ ದೇವಿಯ ದೇವಳದ ನೂತನ ಸ್ವಾಗತ ಗೋಪುರ ಅನಾವರಣಗೊಳಿಸಿ ದೇವಳದಲ್ಲಿ ಶ್ರೀಭುವನೇಶ್ವರಿ ದೇವಿಗೆ ಪೂಜೆ ನೆರವೇರಿಸಿ ಶನಿವಾರ ಆರ್ಶಿವಚಿಸಿದರು.

ವೇ.ಮೂ ರಮೇಶ ಬಾಯರಿ ವಂಡಾರು, ವಂಡಾರು ಶ್ರೀಭುವನೇಶ್ವರಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮೂಡಬೆಟ್ಟು ವಂಡಾರು, ದೇವಳದ ಟ್ರಸ್ಟ್ ಅಧ್ಯಕ್ಷ ಪ್ರವೀಣ ಶೆಟ್ಟಿ ವಂಡಾರು ಮೂಡಬೆಟ್ಟು,ಕಾರ್ಯದರ್ಶಿ ಪ್ರವೀಣ ಶೆಟ್ಟಿ ಕಟ್ಟೆಮನೆ, ಖಜಾಂಚಿ ಸವೋತ್ತಮ ಹೆಗ್ಡೆ ಸಂಕದಬಾಗಿಲು,ಸಂಚಾಲಕರಾದ ಶರತ್ ಶೆಟ್ಟಿ,ನಾಗರಾಜ ಶೆಟ್ಟಿ ಸಂಕದಬಾಗಿಲು,ಸುರೇಶ್ ಶೆಟ್ಟಿ ಮೂಡಬೆಟ್ಟು,ಅಮರ್ ಶೆಟ್ಟಿ ವಂಡಾರು, ರವೀಂದ್ರ ಶೆಟ್ಟಿ ಮೂಡಬೆಟ್ಟು, ಬೇಬಿ ಆರ್ ಶೆಟ್ಟಿ ಮೂಡಬೆಟ್ಟು,ಸೌಮ್ಯ ಪ್ರಶಾಂತ ಶೆಟ್ಟಿ,ರಕ್ಷಾ ಪ್ರವೀಣ್ ಶೆಟ್ಟಿ,ಗುಣ ರೋಹಿತ್ ಶೆಟ್ಟಿ, ಪ್ರಿಯ ಡಾ ಮಹೇಶ್ ಶೆಟ್ಟಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ, ಪ್ರಮುಖರಾದ ಪ್ರವೀಣ ಹೆಗ್ಡೆ,ಕೃಷ್ಣರಾಜ್ ಶೆಟ್ಟಿ ರಾಘವೇಂದ್ರ ಶೆಟ್ಟಿ,ಶ್ರೀನಿವಾಸ ಶೆಟ್ಟಿ ಹಾಗೂ ಇನ್ನೀತರರು,ಅರ್ಚಕರಾದ ಕೃಷ್ಣ ಭಟ್,ಶಂಕರನಾರಾಯಣ ಭಟ್,ಪರಮೇಶ್ವರ ಭಟ್ ವಂಡಾರು,ಸಹ ಅರ್ಚಕ ವೃಂದವರು,ಊರ ಪರವೂರ ಸಾವಿರಾರೂ ಭಕ್ತಾಧಿಗಳು ಪಾಲ್ಗೋಂಡಿದ್ದರು.

ಬೆಳಗ್ಗೆ ನಾಗ ಚೌಂಡಿ,ಕ್ಷೇತ್ರಪಾಲ ದೇವರ ಪ್ರತಿಷ್ಠಾ ಮಹೋತ್ಸವ,ಜೀವಕುಂಭಾಭಿಷೇಕ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಮಧ್ಯಾಹ್ನ ಅನ್ನಪ್ರಸಾದ,ಸಂಜೆ ಪ್ರಾಯಶ್ಚಿತ ಹೋಮ,ಪಂಚದುರ್ಗಾ ದೀಪ ನಮಸ್ಕಾರ,ವಿವಿಧ ಪೂಜೆಗಳು, ಸಂಜೆ ಪಟ್ಲಗುತ್ತು ಸತೀಶ್ ಶೆಟ್ಟಿಯವರ ನೇತ್ರತ್ವದಲ್ಲಿ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಮೇಳದವರಿಂದ ಭಕ್ತಿ ಪಾರಮ್ಯ ಯಕ್ಷ ವೈಭವ ನಡೆಯಿತು.

ಪ್ರಶಾಂತ ಶೆಟ್ಟಿ ಮೂಡಬೆಟ್ಟು ವಂಡಾರು ಸ್ವಾಗತಿಸಿದರು.ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.ಪ್ರವೀಣ ಶೆಟ್ಟಿ ವಂಡಾರು ಮೂಡಬೆಟ್ಟು ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!