Saturday, July 27, 2024

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕೈಗಾರಿಕಾ ಸಂಸ್ಥೆ ಭೇಟಿ

ಕುಂದಾಪುರ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ, ಕುಂದಾಪುರ ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂಸ್ಥೆಯ ವೀಕ್ಷಣೆ ಹಾಗೂ ಅಧ್ಯಯನ ವಿಷಯಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಕೇಂದ್ರಗಳಿಗೆ ಬೇಟಿ ನೀಡಲಾಯಿತು.

ಉಡುಪಿ ಜಿಲ್ಲೆಯ ಉಪ್ಪೂರಿನ ಬಳಿ ಇರುವ ಕೆ.ಎಂ.ಎಫ್ ನಂದಿನಿ ಡೈರಿ ಸ್ಥಾವರಕ್ಕೆ ವಿದ್ಯಾರ್ಥಿಗಳು ಭೇಟಿ ಕೊಟ್ಟು ಹಾಲಿನ ಪಾಶ್ಚರೀಕರಣ ಮತ್ತು ಹಾಲನ್ನು ಪ್ಯಾಕೇಟುಗಳಲ್ಲಿ ಸಂಗ್ರಹಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡರು. ಹಾಲಿನಿಂದ ತಯಾರಾಗುವ ವಿವಿಧ ತಿಂಡಿ-ತಿನಿಸುಗಳು, ಸಂಗ್ರಹಿಸುವ ವಿಧಾನಗಳು ಹಾಗೂ ವಿತರಣಾ ಕ್ರಮಗಳ ಬಗ್ಗೆ ಅರಿತುಕೊಂಡರು.

ಆ ಬಳಿಕ ಪೆರ್ಡೂರಿನ ಬುಕ್ಕಿ ಗುಡ್ಡೆಯಲ್ಲಿರುವ ಶ್ರೀ ಗುರು ಆರ್ಯುವೇದಿಕ್ ಕೈಗಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ಆರ್ಯುವೇದ ಔಷಧಗಳನ್ನು ತಯಾರಿಸುವ ವಿಧಾನ ಹಾಗೂ ಅದರ ಉಪಯೋಗಗಳ ಬಗ್ಗೆ ತಿಳಿದುಕೊಂಡರು.
ಈ ಒಂದು ದಿನದ ಕೈಗಾರಿಕಾ ಸಂಸ್ಥೆಗಳಿಗೆ ಭೇಟಿ ಹಾಗೂ ವೀಕ್ಷಣೆ ಕಾರ್‍ಯಕ್ರಮದಲ್ಲಿ ವಾಣಿಜ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

Related Articles

Stay Connected

21,961FansLike
3,912FollowersFollow
21,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!