spot_img
Friday, May 22, 2026
spot_img

‘ಬಾಲವನದ ಜಾದೂಗಾರ’ ಕಿರು ಚಿತ್ರದ ಪೋಸ್ಟರ್-ಟೀಸರ್ ಆ.21ರಂದು ಬಿಡುಗಡೆ

ಕುಂದಾಪುರ: ವಸಂತ ಪ್ರೊಡಕ್ಷನ್ ಹೌಸ್ ಕುಂದಾಪುರ ಖ್ಯಾತ ನಿರ್ದೇಶಕ ಇ.ಎಂ.ಅಶ್ರಫ್ ನಿರ್ದೇಶನದ ಬಾಲವನದ ಜಾದೂಗಾರ ಕಿರು ಚಿತ್ರದ ಪೋಸ್ಟರ್-ಟೀಸರ್ ಬಿಡುಗಡೆ ಆ.21 ರವಿವಾರ ಸಂಜೆ 4 ಗಂಟೆಗೆ ಕುಂದಾಪುರ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಲಿದೆ.

ಸಹಾಯಕ ಆಯುಕ್ತರಾದ ಕೆ.ರಾಜು ಉದ್ಘಾಟನೆ ನೆರವೇರಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಚಂದ್ರಶೇಖರ ಶೆಟ್ಟಿ ಕೆರಾಡಿ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ.

ಹಿರಿಯ ವಕೀಲರು, ಸಾಹಿತಿ ಎ.ಎಸ್.ಎನ್ ಹೆಬ್ಬಾರ್, ಡಾ.ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಆನಂದ ಸಿ.ಕುಂದರ್, ಕುಂದಾಪುರ ಶ್ರೀ ವೆಂಕಟರಮಣ ಸ್ಕೂಲ್ ಸಂಚಾಲಕರಾದ ಕೆ.ರಾಧಾಕೃಷ್ಣ, ಹಿರಿಯ ನ್ಯಾಯಾವಾದಿ ರವಿಕಿರಣ್ ಮುರ್ಡೇಶ್ವರ, ಚಿತ್ರಕಥೆಗಾರ, ನಿರ್ಮಾಪಕ, ವಾಣಿಜ್ಯೋದ್ಯಮಿ ಮನ್ಸೂರ್ ಪಳ್ಳೂರ್, ಸಿ.ಡ್ಲ್ಯೂ.ಸಿ ನಮ್ಮಭೂಮಿ ಉಪನಿರ್ದೇಶಕ ಶಿವಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಕೆ.ಉಮೇಶ್ ಪುತ್ರನ್, ಬಿ.ಇ.ಓ ಅರುಣ್ ಕುಮಾರ್, ಕುಂದಾಪುರ ಸತ್ಯಮಾನಸದ ಮನೋವೈದ್ಯರಾದ ಡಾ.ಕೆ.ಎಸ್.ಕಾರಂತ್ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಪತ್ರಕರ್ತ ಯು.ಎಸ್.ಶೆಣೈ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದು ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!