spot_img
Tuesday, April 7, 2026
spot_img

ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಅತ್ಯಧಿಕ ಸಾಧನೆ

ಕುಂದಾಪುರ: ಸಿ‌ಎ/ಸಿ‌ಎಸ್ ಪ್ರೊಫೆಶನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್(ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟ್‌ರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಜೂನ್ ೨೦೨೨ರಲ್ಲಿ ನೆಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುದರ ಮೂಲಕ ಶ್ರೇಷ್ಠ ಸಾಧನೆಗೈದಿದ್ದಾರೆ.

ಸಂಸ್ಥೆಯ 6 ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುದರ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಧನುಷ್ ಶೆಟ್ಟಿ (344), ನಿಶಾ ಎಸ್ ಪೂಜಾರಿ (321), ಶ್ರವಣ್ ಕಾಮತ್ (302), ಶೀತಲ್ ಬಾಳಿಗ (298), ಧನ್ಯ ಕೆ. (292), ವಂದನ ಪೈ ಜೆ (269) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, ಸಂಸ್ಥೆಯ ವಿದ್ಯಾರ್ಥಿಗಳಾದ ನವೀನ್ ಶೆಟ್ಟಿ (249), ಶ್ರೀಜಿತ್(246)ಭಾರ್ಗವಿ ಅಡಿಗ (239), ಶ್ರೇಯಾ (239), ವಿಜೇತ (237), ನಮಿತ ವಿ ಶೇಟ್ (236), ಭುವನ (229), ಅಂಜಲಿ ಎ(227), ದೀಕ್ಷಿತ್(227), ವಿಘ್ನೇಶ್ ಎಸ್ ಬಿ (227), ಅದಿತಿ ಶೆಟ್ಟಿ(220), ಮಿಥಾಲಿ ಬಿ (219), ರತಿಕ್ ಜಿ (218), ಮನೀಷ್ ಕುಂದರ್ (216), ಸುಮನ್ (213), ಶಿವಾನಿ ಪಿ. (212), ದಿವ್ಯ ಎಸ್ ರಾವ್ (212), ಆಯೆಷಾ ನುಜಾತ್ (211), ದೀಪಿಕಾ ಶೆಟ್ಟಿ (203), ಪ್ರತ್ವಿಕ್ ಕುಮಾರ್ (205), ಸುಮಂತ್ ನಾಯಕ್ (204), ಆಕಾಂಕ್ಷ ಶೆಟ್ಟಿ (203), ಸಂಧ್ಯಾ (202), ಕಾವ್ಯಶ್ರೀ (201), ಮಹಿಮಾ ಎಸ್ ಗಾಣಿಗ (201), ಹರ್ಷಿತಾ ಬಿ ನಾಯಕ್ (200), ವಿಶಾಲ್ ಪೂಜಾರಿ (200), ಅಂಕಿತಾ ಸಿ ಶೇಟ್ (200), ಆಶಿಷ್ ಎಸ್ ಪೂಜಾರಿ (200) ಅಂಕಗಳೊಂದಿಗೆ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿ‌ಎ ಇಂಟರ್ಮೀಡಿಯೇಟ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಶಿಕ್ಷಪ್ರಭ ಸಂಸ್ಥೆಯು ಅನುಭವಿ ಬೋಧಕ ಸಿಬ್ಬಂದಿಗಳಿಂದ ನಿರಂತರ ತರಬೇತಿ ನೀಡುವುದರ ಜೊತೆಗೆ ಅತೀ ಹೆಚ್ಚು ಪೂರಕ ಪರೀಕ್ಷೆಯನ್ನು ನೆಡೆಸಿ ವಿದ್ಯಾರ್ಥಿಗಳನ್ನು ಸಿ‌ಎ ಫೌಂಡೇಶನ್ ಪರೀಕ್ಷೆಗೆ ಸನ್ನದ್ದುಗೊಳಿಸಲಾಗಿತ್ತು. ಅಖಿಲ ಭಾರತ ಮಟ್ಟದಲ್ಲಿ ಸಿ‌ಎ ಫೌಂಡೇಶನ್ ಪರೀಕ್ಷೆಯಲ್ಲಿ ಶೇಕಡ 25.28 ಫಲಿತಾಂಶ ಬಂದಿದ್ದು, ಶಿಕ್ಷಪ್ರಭ ಅಕಾಡೆಮಿಯಲ್ಲಿ ಸಿ‌ಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಶೇ. 43.75 ಬಂದಿರುವುದು ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.


344 ಅಂಕದ ನಿರೀಕ್ಷೆಯಲ್ಲಿ ಇರಲಿಲ್ಲ, ಶಿಕ್ಷಪ್ರಭ ಅಕಾಡೆಮಿಯ ಅನುಭವಿ ಭೋದಕರ ತರಬೇತಿ ಮತ್ತು ಪ್ರೇರಣೆ, ತಂದೆ ತಾಯಿಯ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ನುರಿತ ಉಪನ್ಯಾಸಕರ ಭೋದನೆ, ನಿರಂತರ ಪೂರಕ ಪರೀಕ್ಷೆ ನೆಡೆಸಿ ಬೆನ್ನೆಲುಬಾಗಿ ನಿಂತ ಶಿಕ್ಷಪ್ರಭ ಅಕಾಡೆಮಿಗೆ ಧನ್ಯವಾದಗಳು.
ಧನುಷ್ ಶೆಟ್ಟಿ (344)
ಅಖಿಲ ಭಾರತಕ್ಕೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!