Sunday, September 8, 2024

ಕುಂದಾಪುರ: ಎಸ್‌ಡಿ‌ಎಂಸಿ ಸದಸ್ಯರಿಗೆ ಸಾಮರ್ಥ್ಯ ವರ್ಧನ ತರಬೇತಿ ಕಾರ್ಯಗಾರ

ಕುಂದಾಪುರ: ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆ, ಪುರಸಭಾ ಘಟಕ ಕುಂದಾಪುರ, ತಾಲೂಕು ಘಟಕ ಕುಂದಾಪುರ, ಬೈಂದೂರು, ಪುರಸಭೆ ಕುಂದಾಪುರ, ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಕುಂದಾಪುರ, ಇವರ ಸಹಯೋಗದಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯ ಸರಕಾರಿ ಶಾಲೆಗಳ ಎಸ್‌ಡಿ‌ಎಂಸಿ ಸದಸ್ಯರಿಗೆ ಸಾಮರ್ಥ್ಯ ವರ್ಧನ ತರಬೇತಿ ಕಾರ್ಯಗಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆಯಿತು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಘಟಕದ ಅಧ್ಯಕ್ಷರಾದ ಅಶ್ವತ್ ಕುಮಾರ್ ವಹಿಸಿದ್ದರು, ಕುಂದಾಪುರ ಪುರಸಭೆಯ ಅಧ್ಯಕ್ಷರಾದ ವೀಣಾ ಭಾಸ್ಕರ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರಂಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಶಾಲೆಗಳ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅನುಭವ ಇರುವುದಿಲ್ಲ, ಆದ್ದರಿಂದ ಈ ತರಬೇತಿ ಬಹಳ ಪ್ರಮುಖವಾದದ್ದು, ಹಾಗಾಗಿ ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ಆಯೋಜಿಸಿದ್ದ ಸಾಮರ್ಥ್ಯ ವರ್ಧನ ತರಬೇತಿ ಕಾರ್ಯಗಾರ ಶ್ಲಾಘನೀಯವಾದದ್ದು ಎಂದರು,

ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಅವನೀಶ ಹೊಳ್ಳರು ಮಾತನಾಡಿ, ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ನೀಡಿರುವ ಶಿಕ್ಷಣದ ಹಕ್ಕನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಆ ಕಾರಣದಿಂದಾಗಿಯೇ ಎಸ್ ಡಿ ಎಂ ಸಿ ತರಬೇತಿಯಲ್ಲಿ ತಮಗೆ ನೀಡುವ ಹಕ್ಕು ಮತ್ತು ಕರ್ತವ್ಯದ ಬಗ್ಗೆ ತಿಳಿದುಕೊಂಡು ಶಾಲೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ಸಲಹೆ ನೀಡಿದರು,

ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್, ಉಬಯ ತಾಲೂಕು ಕಾರ್ಯದರ್ಶಿಗಳಾದ ಪ್ರಮೋದ ಕೆ. ಶೆಟ್ಟಿ, ಜ್ಯೋತಿ ಜೆ. ಶೆಟ್ಟಿ, ತಾಲೂಕು ಕೋಶಾಧಿಕಾರಿ ಕೃಷ್ಣಾನಂದ ಶಾನುಭಾಗ್, ಉಪಾಧ್ಯಕ್ಷರುಗಳಾದ ರಾಜಶೇಖರ್ ಹಾಗೂ ರವಿ ಮರವಂತೆ, ಪುರಸಭಾ ಘಟಕದ ಕಾರ್ಯದರ್ಶಿ ಪುಷ್ಪಾ, ಕೋಶಾಧಿಕಾರಿ ರಫೀಕ್ ಕೋಡಿ, ಖಾಸಗಿ ವಾಹಿನಿಯ ಸತೀಶ್ ಕುಮಾರ್, ಪುರಸಭಾ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆಗಳ ಎಸ್‌ಡಿ‌ಎಂಸಿ ಅಧ್ಯಕ್ಷರುಗಳಾದ ಸದಾನಂದ ಖಾರ್ವಿ, ಪ್ರದೀಪ ಮಡಿವಾಳ, ಮಾಲತಿ ಎಂ. ಸತೀಶ್ ಪಟೇಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು,

ತರಬೇತಿ ಕಾರ್ಯಗಾರದ ನಂತರ ಪುರಸಭಾ ಘಟಕದ ಸಮಿತಿಯನ್ನು ಪುನರ್ ರಚಿಸಲಾಯಿತು, ನೂತನ ಉಪಾಧ್ಯಕ್ಷರಾಗಿ ಬೋರ್ಡ್ ಹೈಸ್ಕೂಲು ಇದರ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸತೀಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಸಹ ಕಾರ್ಯದರ್ಶಿಯಾಗಿ ಜ್ಯೋತಿ ಡಿ. ನಾಯ್ಕ್ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಕುಂದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮನಾ ಮೇಡಂ, ಪತ್ರಿಕಾ ಕಾರ್ಯದರ್ಶಿ ಶಶಿ ಬಳ್ಕೂರು, ಸಹ ಕಾರ್ಯದರ್ಶಿ ಹರೀಶ್ಚಂದ್ರ ಆಚಾರ್, ಸಂಘಟನಾ ಕಾರ್ಯದರ್ಶಿಗಳಾದ ವರದ ಅಂಕದ ಕಟ್ಟೆ, ಗೀತಾ ಕೋಟೇಶ್ವರ, ಸುಮಾ ಆಚಾರ್ಯ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಿಕಾ ಶಾನುಬಾಗ್, ದೀಪಾ ವೆಂಕಟೇಶ್, ಗೀತಾ ಕೋಣಿ, ಶೋಭಾ ಶಾಂತರಾಜ್, ಅಶೋಕ್ ಪೂಜಾರಿ ಕೋಡಿ, ರಾಘವೇಂದ್ರ ಹುಂಚಾರ್ ಬೆಟ್ಟು, ಪವಿತ್ರ ಬಳ್ಕೂರು, ಜ್ಯೋತಿ ಬಿದ್ಕಲ್‌ಕಟ್ಟೆ , ರವಿ ಬೀಜಾಡಿ, ಹೇಮಾ ಬೀಜಾಡಿ, ಗೀತಾ ಎಸ್. ಆನಗಳ್ಳಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,

ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಎಸ್ .ವಿ ನಾಗರಾಜ್ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉತ್ತಮವಾಗಿ ನಿರ್ವಹಿಸಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಾರ್ಯದರ್ಶಿ ಪ್ರಮೋದ ಕೆ. ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣಾನಂದ ಶ್ಯಾನುಬಾಗ್ ಪ್ರಾರ್ಥನೆ ನೆರವೇರಿಸಿದರು, ದೀಪಾ ಮಹೇಶ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!