Friday, March 29, 2024

ಕಾಸರಗೋಡಿನ ಕಲಾವಿದರಿಂದ ಯಕ್ಷಗಾನಕ್ಕೆ ದೊಡ್ಡ ಕೊಡುಗೆ- ಭುಜಬಲಿ ಧರ್ಮಸ್ಥಳ

ಕಾಸರಗೋಡು: ತೆಂಕುತಿಟ್ಟು ಯಕ್ಷಗಾನಕ್ಕೆ ಗಡಿನಾಡು ಕಾಸರಗೋಡು ಬಹುದೊಡ್ಡ ಕೊಡುಗೆ ನೀಡಿದೆ. ಪಾರ್ತಿಸುಬ್ಬನಿಂದ ಮೊದಲ್ಗೊಂಡು ಹಲವಾರು ಮಹನೀಯರು ಮಹಾನ್ ಕೊಡುಗೆ ನೀಡಿದ್ದಾರೆ. ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಹಿಂದಿನಿಂದಲೂ ಹೆಚ್ಚಿನ ಕಲಾವಿದರು ಗಡಿನಾಡಿನವರು ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಪುಣ್ಯ ಭೂಮಿಯಲ್ಲಿ ಸಿರಿಬಾಗಿಲು ಪ್ರತಿಷ್ಠಾನ ಸಾಂಸ್ಕೃತಿಕ ಭವನ ರಚಿಸಿ ಕಲೆ-ಸಾಹಿತ್ಯ ಬೆಳವಣಿಗೆ ಪ್ರಯತ್ನಿಸುವುದು ಉತ್ತಮ ಕಾರ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನಿವೃತ್ತ ಪಾರುಪತ್ಯಗಾರರಾದ ಭುಜಬಲಿ ಧರ್ಮಸ್ಥಳ ಹೇಳಿದರು.

ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಸಾರ್ವಜನಿಕ ಲೋಕಾರ್ಪಣೆಯ ವರೆಗೆ ನಡೆಯುವ ಕಲಾ ಸಾಂಸ್ಕೃತಿಕ ಸಾಹಿತ್ಯ ವೈಭವ ಎರಡನೇ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಪರಮೇಶ್ವರ ಆಚಾರ್ಯ ಕಲಾ ಪ್ರತಿಷ್ಠಾನದಿಂದ ದಿ.ಪರಮೇಶ್ವರ ಆಚಾರ್ಯ ಸಂಸ್ಮರಣೆ ನಡೆಯಿತು. ಲಕ್ಷ್ಮಣ ಪ್ರಭು ಕರಿಂಬಿಲ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಆ ಬಳಿಕ ಯಕ್ಷಗಾನ ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ಅತಿಕಾಯ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು. ಅತಿಕಾಯನಾಗಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ರಾವಣನಾಗಿ ಪಕಳಕುಂಜ ಶ್ಯಾಮ್ ಭಟ್, ರಾವಣ ದೂತನಾಗಿ ಡಾ. ಬೇ. ಸಿ.ಗೋಪಾಲಕೃಷ್ಣ ಭಟ್ಟ, ಲಕ್ಮಣನಾಗಿ ಬಾಲಕೃಷ್ಣ ಆಚಾರ್ಯ ನೀರ್ಚಾಲ್, ವಿಭೀಷಣನಾಗಿ ವಿಷ್ಣು ಪ್ರಕಾಶ್ ಪೆರ್ವ, ರಾಮ ನಾಗಿ ಲಕ್ಮಣ ಪ್ರಭು ಕರಿಂಬಿಲ ಭಾಗವಹಿಸಿದರು.

ಸುರೇಶ ಆಚಾರ್ಯ ನೀರ್ಚಾಲ್, ವೆಂಕಟರಾಜ ಕುಂಠಿಕಾನ ಮಠ ಭಾಗವತರಾಗಿ, ಗೋಪಾಲಕೃಷ್ಣ ನಾವಡ ಮಧೂರು, ಮುರಳಿ ಮಾಧವ ಮಧೂರು ಹಿಮ್ಮೇಳದಲ್ಲಿ ಸಹಕರಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ಜಗಧೀಶ ಕೂಡ್ಲು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!