spot_img
Sunday, April 5, 2026
spot_img

ಬೈಂದೂರು: ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ”ಕೌಶಲ್ಯ -2022″

ಬೈಂದೂರು: ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಹಾಗೂ ಕೆನರಾ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿ ”ಕೌಶಲ್ಯ -2022″ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಗುರುವಾರ ಬೈಂದೂರು ರೋಟರಿ ಭವನದಲ್ಲಿ ನಡೆಯಿತು.

ಕೊಲ್ಲೂರು ದೇವಳದ ಆಡಳಿತ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಯಾನಂದ ಹೋಬಳಿದಾರ್ ಕೌಶಲ್ಯ ವರ್ಧನೆಯ ಚಟುವಟಿಕೆಯ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು ಕೌಶಲ್ಯ ಅಭಿವೃದ್ಧಿ ಅನುಷ್ಠಾನ ಚೌಕಟ್ಟನ್ನು ರಚಿಸಲು ಇದು ಜೀವಾವಧಿಯ ಕಲಿಕೆ ಅವಕಾಶಗಳನ್ನು ಒದಗಿಸುತ್ತದೆ. ಕಾಲೇಜು ಪಠ್ಯಕ್ರಮದಲ್ಲಿ ಸ್ಕಿಲ್ಲಿಂಗ್ ಏಕೀಕರಣವನ್ನು ಲಾಭದಾಯಕ ಉದ್ಯೋಗ ನೀಡುವಲ್ಲಿ ಮತ್ತು ಇಂತಹ ತರಬೇತಿ ಆಕಾಂಕ್ಷೆಗಳನ್ನು ಸಂಧಿಸುವ ವೃತ್ತಿಜೀವನದ ಪ್ರಗತಿಗೆ ಖಾತ್ರಿಪಡಿಸಿಕೊಳ್ಳುವ ಮೂಲಕ ಗುಣಮಟ್ಟದ ದೀರ್ಘ ಮತ್ತು ಅಲ್ಪಾವಧಿಯ ಕೌಶಲ್ಯ ತರಬೇತಿ ಅವಕಾಶಗಳನ್ನು ಒಗಿಸುತ್ತದೆ ಎಂದರು.

ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಗಿರೀಶ್ ಬೈಂದೂರು ಕೌಶಲ್ಯ ವರ್ಧನೆಯ ಚಟುವಟಿಕೆಯ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ ನಾಯ್ಕ್, ಕೆನರಾ ಇಂಜಿನಿಯಂಗ್ ಕಾಲೇಜಿನ ಪ್ರಾಂಶುಪಾಲ ಡಾ ಗಣೇಶ್ ವಿ ಭಟ್, ಕೆನರಾ ಇಂಜಿನಿಯಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಬಿ ಕೃಷ್ಣ ಪ್ರಭು, ಕೆನರಾ ಇಂಜಿನಿಯಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೋ ವಿನೋದ್ ಕುಮಾರ್ ಎಂ.ವಿ, ಬೈಂದೂರು ಯುವ ಗುತ್ತಿಗೆದಾರ ಸುಜಯೇಂದ್ರ ದೀಪಕ್ ಕುಮಾರ್ ಶೆಟ್ಟಿ ಬಿ.ಇ, ಉಪಸ್ಥಿತರಿದ್ದರು.

ಕುಂದಾಪುರ ಜ್ಞಾನಜ್ಯೋತಿ ಅಕಾಡೆಮಿಯ ಎಂ.ಡಿ ಸತ್ಯನಾರಾಯಣ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರಾದ ಉದಯ್ ಕುಮಾರ್ ಎಂ.ಪಿ ಪ್ರಾಸ್ತಾವಿಕ ಮಾತನಾಡಿದರು. ಡಾ ಚಂದ್ರಶೇಖರ್ ಮೊಗೇರ್ ವಂದಿಸಿದರು. ಹರೀಶ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!