spot_img
Sunday, April 5, 2026
spot_img

ಲಯನ್ ಕ್ಲಬ್ ಕುಂದಾಪುರ: ನೂತನ ಪದಾಧಿಕಾರಿಗಳ ಪದಗ್ರಹಣ

ಕುಂದಾಪುರ: ಜಗತ್ತಿನ ಅತಿ ದೊಡ್ಡ ಸೇವಾ ಸಂಘಟನೆಯಾದ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ಅಗತ್ಯವಿರುವವರಿಗೆ ಬೇಕಾದ ಸೇವೆಯನ್ನು ನೀಡುವುದು. ಕುಂದಾಪುರ ಲಯನ್ಸ್ ಕ್ಲಬ್ ಕಳೆದ 50 ವರ್ಷಗಳಿಂದ ವಿವಿಧ ಸೇವೆಗಳನ್ನು ಸೇವೆಗಳನ್ನು ನೀಡುತ್ತಾ ನೊಂದವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತಾ ಬಂದಿದೆ. ಇನ್ನು ಮುಂದೆಯು ಕೂಡಾ ಒಳ್ಳೆಯ ಸೇವೆ ಜನತೆಗೆ ಈ ಕ್ಲಬಿನಿಂದ ಸಿಗುವಂತಾಗಲಿ ಎಂದು ಲಯನ್ಸ್ 317ಸಿ ಜಿಲ್ಲೆಯ ಮಾಜಿ ಗವರ್ನರ್ ಪ್ರಕಾಶ ಟಿ. ಸೋನ್ಸ್ ಹೇಳಿದರು.

ಅವರು ಲಯನ್ ಕ್ಲಬ್ ಕುಂದಾಪುರದ ನೂತನ ಪದಾಧಿಕಾರಿಗಳಗೆ ಪದಗ್ರಹಣ ನೆರವೇರಿಸಿ ಮಾತನಾಡಿದರು.

ನೂತನ ಅಧ್ಯಕ್ಷರಾಗಿ ನವೀನ ಕುಮಾರ ಶೆಟ್ಟಿ, ಕಾರ್ಯದರ್ಶಿ ಡಾ. ರಾಜೇಂದ್ರ ಕೆ., ಕೋಶಾಧಿಕಾರಿ ಬಿ. ಶಂಕರ ಶೆಟ್ಟಿಯವರಿಗೆ ಪ್ರಮಾಣ ವಚನ ಭೋದಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ 317ಸಿ ಜಿಲ್ಲೆಯ ಮಾಜಿ ಗವರ್ನರ್ ಜಯಕರ ಶೆಟ್ಟಿಯವರು ಲಯನ್ಸ್ ಸಂಸ್ಥೆಯ ಧ್ಯೇಯೋದ್ದೇಶ ಹಾಗೂ ಕಾರ್ಯಕ್ರಮಗಳ ಕುರಿತು ಮಾತನಾಡಿ ಪದಾಧಿಕಾರಿಗಳಿಗೆ ಶುಭಕೋರಿದರು. ಪ್ರಾಂತೀಯ ಅಧ್ಯಕ್ಷ ಕಿರಣ್ ಕುಂದಾಪುರ ಉಪಸ್ಥಿತರಿದ್ದರು.

ಅಧ್ಯಕ್ಷ ರಾಧಾಕೃಷ್ಣ ನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಜ್ಞೇಶ್ ಪ್ರಭು ಹಾಗೂ ಕೋಶಾಧಿಕಾರಿ ಡಾ. ರವೀಂದ್ರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಉಮೇಶ್ ಭಟ್‌ರವರನ್ನು ಸನ್ಮಾನಿಸುವುದರ ಮೂಲಕ ವೈದ್ಯ ದಿನಾಚರಣೆ ಆಚರಿಸಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!