spot_img
Saturday, April 4, 2026
spot_img

ಜೇಸಿ‌ಐ ಕುಂದಾಪುರ ಸಿಟಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ

ಕುಂದಾಪುರ: ಜೆಸಿ‌ಐನ ವಲಯ XV ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನವು ವಿಟ್ಲದಲ್ಲಿ ನಡೆದಿದ್ದು, ಜೇಸಿ‌ಐ ಕುಂದಾಪುರ ಸಿಟಿ ಘಟಕವು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಗೆ ಭಾಜನವಾಗಿದೆ. ಸುಮಾರು ಒಂದೂವರೆ ಲಕ್ಷದಷ್ಟು ದೇಣಿಗೆಯನ್ನು ಜೇಸಿ‌ಐ ಇಂಡಿಯಾ ಫೌಂಡೇಶನ್‌ಗೆ ನೀಡುವುದರ ಮೂಲಕ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ವಲಯದಲ್ಲೇ ಟಾಪ್ ಒನ್ ಘಟಕವಾಗಿ ಮೂಡಿಬಂದಿದೆ.

ಈ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಜೇಸಿ‌ಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆ ಸಿ ಪೊನ್ನರಾಜ್, ವಲಯ ಹದಿನೈದರ ವಲಯಾಧ್ಯಕ್ಷರಾದ ಜೆಸಿ ರಾಯನ್ ಉದಯ ಕ್ರಾಸ್ತಾ ನಿಕಟಪೂರ್ವ ವಲಯಾಧ್ಯಕ್ಷ ಸೌಜನ್ಯ ಹೆಗ್ಡೆ ಪೂರ್ವ ವಲಯಾಧ್ಯಕ್ಷ ಅಲನ್ ರೋಹನ್ ವಾಜ್ ಸೀನಿಯರ್ ಮೆಂಬರ್ ಅಸೋಸಿಯೇಷನ್ ಛೇರ್ಮನ್ ಜಗನಾಥ್ ರೈ, ಉಪ ಛೇರ್ಮನ್ ಅಬ್ದುಲ್ ಜಬ್ಬಾರ್ ಸದ್ಯಸ್ಯರಾದ ಆಶಾ ಅಲನ್ ವಲಯ ಉಪಾಧ್ಯಕ್ಷ ದಿನೇಶ್ ಶೆಟ್ಟಿ ವಲಯ 15 ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾದ ಮರಿಯಪ್ಪ ವಿತರಿಸಿದರು.

ಪೂರ್ವ ವಲಯ ಅಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ಘಟಕಾಧ್ಯಕ್ಷ ಅಭಿಲಾಷ್ ಬಿ ಎ ಸ್ಥಾಪಕಾಧ್ಯಕ್ಷರಾದ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ನಾವಡ, ಜಯಚಂದ್ರ ಶೆಟ್ಟಿ, ಚಂದ್ರಕಾಂತ್, ಪ್ರಶಾಂತ್ ಹವಲ್ದಾರ್, ಸದಸ್ಯರಾದ ಗುರುರಾಜ್ ಕೊತ್ವಾಲ್, ನಾಗರಾಜ್ ಪಟ್ವಾಲ್ ಪೂರ್ವ ವಲಯಾಧ್ಯಕ್ಷರು, ವಲಯ ಉಪಾಧ್ಯಕ್ಷರು ವಲಯ 15 ರ ವಲಯ ಆಡಳಿತ ಮಂಡಳಿಯ ಸದಸ್ಯರು ವಲಯ 15 ರ ಎಲ್ಲ ಘಟಕದ ಅಧ್ಯಕ್ಷರು ಘಟಕದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!