Sunday, September 8, 2024

ಕಸ್ಟಂ ಅಧಿಕಾರಿ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಕುಂದಾಪುರದ ವ್ಯಕ್ತಿಯ ಬಂಧನ

ಶಿರಸಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ
ಕುಂದಾಪುರ: ತಾನು ಕಸ್ಟಮ್ ಅಧಿಕಾರಿ, ಪ್ರಸ್ತುತ ಹುಬ್ಬಳ್ಳಿ ಕಸ್ಟಂ ವಿಭಾಗದಲ್ಲಿ ಕರ್ತವ್ಯದಲ್ಲಿರುವುದಾಗಿ ಸುಳ್ಳು ಹೇಳಿ ಸಾರ್ವಜನಿಕರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂದಾಪುರ ಮಂಗಲಪಾಂಡೆ ರಸ್ತೆ ಕಲ್ಲಾಗರದ ಮನೋಜ್ ಎನ್ನುವ ವ್ಯಕ್ತಿಯನ್ನು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶಿರಸಿಯ ವಿನಾಯಕ ಮಂಜುನಾಥ ಹೆಗಡೆ ಹಾಗೂ ಅವರ ಸ್ನೇಹಿತರಲ್ಲಿ ತಾನು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 7,70,000 ರೂ ಹಣವನ್ನು ಪಡೆದು ಮೋಸ ಮಾಡಿದ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜು. 4 ರಂದು ಖಚಿತ ಮಾಹಿತಿ ಮೇರೆಗೆ ಆರೋಪಿತನಾದ ಮನೋಜ ನರಸಿಂಹ ಪೂಜಾರಿ ಕುಂದಾಪುರ ಈತನನ್ನು ವಶಕ್ಕೆ ಪಡೆದು ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಡಾ.ಸುಮನ .ಡಿ. ಪೆನ್ನೇಕರ, ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಎಸ್.ಬದರಿನಾಥ, ಪೊಲೀಸ್ ಉಪಾಧೀಕ್ಷಕರಾದ ರವಿ ಡಿ ನಾಯ್ಕ, ಶಿರಸಿ ರವರ ಮಾರ್ಗದರ್ಶನದಲ್ಲಿ ರಾಮಚಂದ್ರ ನಾಯಕ ಸಿ.ಪಿ.ಐ ಶಿರಸಿ ವೃತ್ತ ರವರ ನೇತೃತ್ವದಲ್ಲಿ ಪಿ.ಎಸ್.ಐ. ಈರಯ್ಯ.ಡಿ.ಎನ್, ಪ್ರೋ. ಪಿ‌ಎಸ್‌ಐ ದೇವೇಂದ್ರನಾಯ್ಕ ಸಿಬ್ಬಂದಿಯವರಾದ ಚೇತನ.ಎಚ್ .ಗಣಪತಿ ನಾಯ್ಕ, ಮಹಾದೇವ ನಾಯ್ಕ, ಕುಬೇರಪ್ಪ, ಪ್ರದೀಪ ರೇವಣಕರ, ಶ್ರೀಧರ, ಅರುಣ, ಲಕ್ಷಮಪ್ಪ ಇವರು ಆರೋಪಿತನನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!