spot_img
Monday, April 6, 2026
spot_img

ಎಸ್.ಕೆ.ಪಿ.ಎ.ಕುಂದಾಪುರ-ಬೈಂದೂರು ವಲಯ ವತಿಯಿಂದ ವೈದ್ಯರ ದಿನಾಚರಣೆ: ಡಾ. ಗೋಪಿನಾಥ್ ನಂಬಿಯಾರ್ ಅವರಿಗೆ ಸನ್ಮಾನ

ಕುಂದಾಪುರ: ಜುಲೈ 1 ವೈಧ್ಯರ ದಿನಾಚರಣೆಯನ್ನು ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್, ಕುಂದಾಪುರ ಹಾಗೂ ಬೈಂದೂರು ವಲಯದ ವತಿಯಿಂದ ಆಚರಿಸಲಾಯಿತು.

ವೈದ್ಯರ ದಿನಾಚರಣೆ ಅಂಗವಾಗಿ ಇಳಿವಯಸ್ಸಿನಲ್ಲೂ ಹಗಲಿರುಳು ಜನಸೇವೆ ಮಾಡುತ್ತಿರುವ ಹಿರಿಯ ವೈದ್ಯರಾದ ವಂಡ್ಸೆಯ ಡಾ. ಗೋಪಿನಾಥ್ ನಂಬಿಯಾರ್ ಇವರನ್ನು ಅವರ ಸ್ವಗೃಹ ವಂಡ್ಸೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಕುಂದಾಪುರ-ಬೈಂದೂರು ಇದರ ಅಧ್ಯಕ್ಷ ದೊಟ್ಟಯ್ಯ ಪೂಜಾರಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಸಂಘದ ಉಪಾಧ್ಯಕ್ಷ ರಾಘವೇಂದ್ರ ಭಟ್ ವಂಡ್ಸೆ, ಪ್ರಕಾಶ್ ಹೆಗ್ಡೆ, ಶೀನ ದೇವಾಡಿಗ ಬೈಂದೂರು, ಛಾಯಾಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಗೋಡೆ, ಸಲಹಾ ಸಮಿತಿ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಜಿಲ್ಲಾ ಛಾಯ ಕಾರ್ಯದರ್ಶಿ ಅಮೃತ ಬೀಜಾಡಿ, ಕೋಶಾಧಿಕಾರಿ ವಿಠಲ್ ನಾಗೂರು, ಪ್ರಧಾನ ಕಾರ್ಯದರ್ಶಿ ಸುರೇಶ್ ಜಮದಗ್ನಿ, ಮಾಜಿ ಅಧ್ಯಕ್ಷರುಗಳಾದ ಗಣೇಶ್ ಗಂಗೊಳ್ಳಿ, ಗ್ರೇಶನ್ ಡಯಾಸ್ , ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಇಡೂರು, ದಂತ ವೈದ್ಯ ಡಾ.ಜಯರಾಮ ನಂಬಿಯಾರ್ ಹಾಗೂ ಅವರ ಕುಟುಂಬಸ್ಥರು ಮತ್ತು ಛಾಯಾಗ್ರಾಹಕರ ಸಂಘದ ಸದಸ್ಯರುಗಳು, ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!