spot_img
Monday, April 6, 2026
spot_img

ಬಹುಮುಖ ಪ್ರತಿಭಾನ್ವಿತೆ, ಶಯದೇವಿಸುತೆ ಮರವಂತೆಯವರಿಗೆ ಹುಟ್ಟೂರ ಸನ್ಮಾನ

ಬೈಂದೂರು: ಮರವಂತೆ ಗ್ರಾಮದ ಸಾಧನಾ ಸಮಾಜ ಸೇವಾ ವೇದಿಕೆಯ ವಿ.ಕೆ. ಕಾಮತ್ ಸಭಾಗೃಹದಲ್ಲಿ, ಮರವಂತೆ ದೇವಾಡಿಗ ಸಂಘದ ತೃತೀಯ ವರ್ಷದ ಪುಸ್ತಕ ವಿತರಣೆ ಸಮಾರಂಭವು ಇತ್ತೀಚೆಗೆ ನಡೆಯಿತು. ಇದೇ ಸಂದರ್ಭದಲ್ಲಿ ಸಮುದಾಯದ, ಬಹುಮುಖ ಯುವ ಪ್ರತಿಭಾನ್ವಿತೆ, ಶಯದೇವಿಸುತೆ ಮರವಂತೆ ಯವರನ್ನು ಸನ್ಮಾನಿಸಲಾಯಿತು.

ಪುಸ್ತಕ ಕೊಡುಗೆಯನ್ನಿತ್ತ ಶಿವಮೊಗ್ಗ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯ ಪ್ರತ್ರಾಂಕಿತ ವ್ಯವಸ್ಥಾಪಕರು ಹಾಗೂ ಬೆಂಗಳೂರಿನ ಅರಣ್ಯ ಇಲಾಖಾ ನೌಕರರ ಮಹಾಮಂಡಳಿಯ ರಾಜಾಧ್ಯಕ್ಷರೂ ಆದ ರಘುರಾಮ ದೇವಾಡಿಗ ಆಲೂರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಮರವಂತೆ ದೇವಾಡಿಗ ಸಂಘದ ಅಧ್ಯಕ್ಷ ಗಿರೀಶ್ ದೇವಾಡಿಗ ಮರವಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ, ಕರ್ನಾಟಕ ಸರಕಾರ ಯೋಜನಾ ಆಯೋಗದ ಸದಸ್ಯರು ಹಾಗೂ ಕೊಲ್ಲೂರು ಡಾಟ್ ಕಾಂ.ನ ಸಂಯೋಜಕರಾದ ಪ್ರಿಯದರ್ಶಿನಿ ದೇವಾಡಿಗ ಬಿಜೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ, ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯರಾದ ತಮ್ಮಯ್ಯ ದೇವಾಡಿಗ, ದೇವಾಡಿಗ ಸಂಘ ಮರವಂತೆಯ ಗೌರವಾಧ್ಯಕ್ಷರಾದ ನಾರಾಯಣ ದೇವಾಡಿಗ ಮರವಂತೆ ಹಾಗೂ, ಮತ್ತಿತ್ತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಈ ಬಾರಿಗೆ ೨೦೨೧-೨೨ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ೯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!