ಕುಂದಾಪುರದ ರೋಟರಿ ಕ್ಲಬ್ ರಿವರ್‌ಸೈಡ್‌ನ 2022-23ನೇ ಸಾಲಿನ ಅಧ್ಯಕ್ಷರಾಗಿ ಕೆ.ಎಸ್.ಮಂಜುನಾಥ ಆಯ್ಕೆಗೊಂಡಿದ್ದಾರೆ. ಇವರು ಬಸ್ರೂರು ಹಿಂದೂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಯದರ್ಶಿಯಾಗಿ ಉಲ್ಲಾಸ ಕ್ರಾಸ್ತ, ಕೋಶಾಧಿಕಾರಿಯಾಗಿ ಜಗನ್ನಾಥ ಮೊಗೇರ್, ಉಪಾಧ್ಯಕ್ಷರಾಗಿ ರೋನಾಲ್ಡ್ ಡಿಮೆಲ್ಲೊ, ಕ್ಲಬ್ ಸರ್ವೀಸ್‌ನಲ್ಲಿ ಡಾ.ಸಂದೀಪ ಕುಮಾರ್ ಶೆಟ್ಟಿ, ಓಕೇಶನಲ್ ಸರ್ವೀಸ್ ಕೌಶಿಕ್ ಯಡಿಯಾಳ್, ಕಮ್ಯುನಿಟ್ ಸರ್ವೀಸ್ ರಾಜು ಪೂಜಾರಿ, ಅಂತರಾಷ್ಟ್ರೀಯ ಸೇವೆ ಡಾ ದಿನಕರ್ ಶೆಟ್ಟಿ, ಕ್ಲಬ್ ಬುಲೇಟಿನ್ ಸಂಪದಕರಾಗಿ ನರಸಿಂಹ ಹೋಳ್ಳ, ಮೆಂಬರ್‌ಶಿಪ್ ಡೆವಲಪ್ ಮೆಂಟ್ ಸದಾನಂದ ಉಡುಪ ಆಯ್ಕೆಗೊಂಡಿದ್ದಾರೆ.
ಜುಲೈ 3ರಂದು ಪದಪ್ರದಾನ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಮಂಗಳೂರು ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಎಂ.ಬಾಲಕೃಷ್ಣ ಶೆಟ್ಟಿ ಮತ್ತು ಪದಪ್ರಧಾನ ಅಧಿಕಾರಿಯಾಗಿ ಡಾ.ಉಮೇಶ್ ಪುತ್ರನ್ ಮತ್ತು ಜೋನಲ್ ಲೆಫ್ಟಿನೆಂಟ್ ಡಾ.ಸಂದೀಪ ಕುಮಾರ್ ಶೆಟ್ಟಿ ಭಾಗವಹಿಸುತ್ತಿದ್ದಾರೆ.