Wednesday, September 11, 2024

ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

ಜನಪ್ರತಿನಿಧಿ (ಬೆಳ್ತಂಗಡಿ) : ಕಾಂಗ್ರೆಸ್‌ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79) ಇಂದು (ಮೇ 8, ಬುಧವಾರ) ಸಂಜೆ 4 ಗಂಟೆ ಹೊತ್ತಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

1946ರ ಜನವರಿ 15ರಂದು ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಬಂಗೇರ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಅವರು ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1994-1999 – 1983-1985 1985-1989 ನಿರಂತರ ವಿಧಾನಸಭಾ ಸದಸ್ಯರಾಗಿ ದುಡಿದಿದ್ದರು, ನಂತರ 2008-2013 ಹಾಗೂ 2013-2018 ರವರೆಗೆ ಕ್ಷೇತ್ರದ ಶಾಸಕರಾಗಿ ಮತ್ತೆ ಆಯ್ಕೆಗೊಂಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹರೀಶ್‌ ಪೂಂಜಾ ವಿರುದ್ಧ ಸೋಲು ಕಂಡಿದ್ದರು.

ಧರ್ಮಸ್ಥಳದ ಸೌಜನ್ಯ ಅತ್ಯಚಾರ ಹಾಗೂ ಕೊಲೆ ಪ್ರಕರಣದ ವಿರುದ್ಧ ನಿಂತವರಲ್ಲಿ ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ ಕೂಡ ಒಬ್ಬರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ʼಸೌಜನ್ಯ ಪ್ರಕರಣವನ್ನು ಸಿದ್ದರಾಮಯ್ಯ ಅವರು ಸಿಬಿಐಗೆ ವಹಿಸಿದಾಗ, ಆರಂಭದಲ್ಲಿ ನ್ಯಾಯ ಸಿಗಬಹುದು ಅಂದುಕೊಂಡಿದ್ದೆ, ಆದರೆ ತನಿಖೆಯ ಅರ್ಧದಲ್ಲಿ ಆ ನಂಬಿಕೆಯೂ ಹೋಯಿತು. ಅರ್ಧ ತನಿಖೆ ನಡೆಯುವ ಹೊತ್ತಲ್ಲೇ ಮೋಸ ಇದೆ ಅನ್ನೋದು ಗೊತ್ತಾಯಿತು. ಆದರೆ ಈಗ ಅದನ್ನು ಹೇಳುವುದಿಲ್ಲ, ಹೇಳಬೇಕಾದ ಸಂದರ್ಭದಲ್ಲಿ ಹೇಳುತ್ತೇನೆ, ಆಗ ನನ್ನನ್ನೂ ಸಾಯಿಸಿಬಿಡಬಹುದು…” ಎಂದು ಸ್ಪೋಟಕ ಹೇಳಿಕೆ ನೀಡುವುದರ ಮೂಲಕ ಮತ್ತೆ ಸುದ್ದಿಯಾಗಿದ್ದರು. ಆ ಬಳಿಕೆ ವಸಂತ ಬಂಗೇರ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!