Sunday, September 8, 2024

ಮೂರನೇ ಹಂತದ ಲೋಕಸಭಾ ಚುನಾವಣೆ : ಉತ್ತರ ಪ್ರದೇಶ, ಬಿಹಾರ, ಗುಜರಾತ್‌ಗಳಲ್ಲಿ ಶೇ. 60 ದಾಟದ ಮತ ಪ್ರಮಾಣ !

ಜನಪ್ರತಿನಿಧಿ (ನವ ದೆಹಲಿ) : ನಿನ್ನೆ(ಮಂಗಳವಾರ) ದೇಶದಾದ್ಯಂತ ಮೂರನೇ ಹಂತದ ಲೋಕಸಭಾ ಚುನಾವಣೆ ಪೂರ್ಣಗೊಂಡಿದ್ದು, ಕರ್ನಾಟಕದಲಿ ಎರಡನೇ ಹಂತದ ಚುನಾವಣೆ ಪೂರ್ಣಗೊಳ್ಳುವುದರ ಮೂಲಕ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಈ ಬಾರಿಯ ಚುನಾವಣೆ ಮುಗಿದಂತಾಗಿದೆ.

ಬಾರಿ ಬಿಸಿಲಿನ ವಾತಾವರಣ ಹಾಗೂ ವರ್ಕಿಂಗ್‌ ಡೇ ಆಗಿರುವುದರಿಂದ ದೇಶದಾದ್ಯಂತ ನಡೆದಿರುವ ಚುನಾವಣೆಯಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಒಟ್ಟು ಹನ್ನೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಹಂತದ ಚುನಾವಣೆ ನಡೆದಿದೆ. ಉತ್ತರ ಪ್ರದೇಶ, ಗುಜರಾತ್‌ ಹಾಗೂ ಬಿಹಾರ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ. ನಿನ್ನೆ ನಡೆದ ಚುನಾವಣೆಯಲ್ಲಿ ಅಸ್ಸಾಂ ನಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ ಎಂದು ಕೇಂದ್ರ ಚುನಾವಣೆಯಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಹನ್ನೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಲಾವಣೆಯಾದ ಒಟ್ಟು ಮತ ಪ್ರಮಾಣ :

ಅಸ್ಸಾಂ – 81.71%

ಬಿಹಾರ – 58.18%

ಛತ್ತೀಸ್‌ಗಡ – 71.06%

ದಾದ್ರ & ನಗರ ಹವೇಲಿ ಮತ್ತು ದಮನ್‌ & ದೀಯು – 69.87%

ಗೋವಾ – 75.20%

ಗುಜರಾತ್‌ – 59.51%

ಕರ್ನಾಟಕ – 70.41%

ಮಧ್ಯಪ್ರದೇಶ – 66.05%

ಮಹಾರಾಷ್ಟ್ರ – 61.44%

ಉತ್ತರ ಪ್ರದೇಶ – 57.34%

ಪಶ್ಚಿಮ ಬಂಗಾಳ – 76.52%

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!