spot_img
Wednesday, January 22, 2025
spot_img

ಕೋವಿಡ್‌ ಲಸಿಕೆ ಹಿಂಪಡೆಯುವುದಾಗಿ ಆಸ್ಟ್ರಾಜೆನಿಕಾ ಸಂಸ್ಥೆ ಘೋಷಣೆ !

ಜನಪ್ರತಿನಿಧಿ (ನವ ದೆಹಲಿ) : ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕೋವಿಡ್‌ ಲಸಿಕೆಯನ್ನು ಹಿಂಪಡೆಯಲು ನಿರ್ಧರಿಸುವುದಾಗಿ ಕೋವಿಶೀಲ್ಡ್‌ ಲಸಿಕೆ ತಯಾರಕ ಕಂಪೆನಿ ಆಸ್ಟ್ರಾಜೆನಿಕಾ ಹೇಳಿದೆ.

ಮಾತ್ರವಲ್ಲದೇ, ಯೂರೋಪ್‌ನಿಂದ ವಾಕ್ಸ್‌ಜೆವ್ರೀಯಾ ಕೋವಿಡ್‌ ಲಸಿಕೆಗಳಿರುವುದರಿಂದ ತಮ್ಮ ಲಸಿಕೆ ಹಿಂಪಡೆಯುತ್ತಿರುವುದಾಗಿಯೂ ಸಂಸ್ಥೆ ಹೇಳಿದೆ.

ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕೋವಿಡ್‌ ಲಸಿಕೆಗಳಿರುವುದರಿಂದ ತಮ್ಮ ಲಸಿಕೆ ಹಿಂದೆ ತೆಗೆದುಕೊಳ್ಳುತ್ತಿರುವುದಾಗಿ ಅದು ಮಾಹಿತಿ ನೀಡಿದೆ.

ತಮ್ಮ ಕಂಪೆನಿಯ ಕೋವಿಡ್‌ ಲಸಿಕೆಯ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತದಲ್ಲಿ ಪ್ಲೇಟ್‌ಲೆಟ್ಸ್‌ ತಗ್ಗುವಿಕೆಯಂತಹ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಆಂಗ್ಲೀ ಸ್ವೀಡನ್‌ ಔಷಧ ತಯಾರಿಕಾ ಸಂಸ್ಥೆ ಆಸ್ಟ್ರಾಜೆನಿಕಾ ಲಂಡನ್‌ ಕೋರ್ಟ್‌ಗೆ ಸಲ್ಲಿಸಿದ ದಾಖಲೆಯಲ್ಲಿ ಉಲ್ಲೇಖಿಸಿದೆ.

ಮಾರ್ಚ್‌ 5 ರಂದೇ ಲಸಿಕೆ ಹಿಂಪಡೆಯುವುದಕ್ಕಾಗಿ ಕಂಪೆನಿ ಅರ್ಜಿ ಸಲ್ಲಿಕೆಯಾಗಿದ್ದು, ನಿನ್ನೆ(ಮಂಗಳವಾರ, ಮೇ.7) ದಿಂದ ಜಾರಿಗೆ ಬಂದಿದೆ ಎಂದು ಈ ಬೆಳವಣಿಗೆಗಳ ಕುರಿತಾಗಿ ಮೊದಲ ವರದಿ ಮಾಡಿರುವ ಟೆಲಿಗ್ರಾಫ್‌ ಹೇಳಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!