spot_img
Wednesday, April 1, 2026
spot_img

ಶಿವಮೊಗ್ಗ ಲೋಕಸಭಾ ಚುನಾವಣೆ : ಗ್ರಾಮಾಂತರ ಭಾಗಗಳಲ್ಲೇ ಹೆಚ್ಚು ಮತದಾನ !

ಜನಪ್ರತಿನಿಧಿ (ಶಿವಮೊಗ್ಗ) : ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್‌ ಕಣಗಳಲ್ಲಿ ಒಂದಾದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು(ಮಂಗಳವಾರ) ರಾಜ್ಯದ ಎರಡನೇ ಹಂತದ ಚುನಾವಣೆಯಲ್ಲಿ ನಡೆದಿದೆ.

ಪ್ರತಿಷ್ಠಿತ ಕಣ ಎನ್ನಿಸಿಕೊಂಡಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಳೆದ ಹಲವು ಚುನಾವಣೆಗಳಿಂದಲೂ ಮಾಜಿ ಮುಖ್ಯಮಂತ್ರಿಗಳ ಕುಟುಂಬದ ರಾಜಕೀಯ ಕಣವಾಗಿಯೇ ಮಾರ್ಪಟ್ಟಿದೆ. ಈ ಬಾರಿಯ ಲೋಕಸಭಾ ಕಕಣದಲ್ಲಿಯೂ ಕೂಡ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪ ಹಾಗೂ ಎಸ್‌ ಬಂಗಾರಪ್ಪ ಅವರ ಎರಡನೇ ತಲೇಮಾರುಗಳಾದ ಬಿ. ವೈ ರಾಘವೇಂದ್ರ(ಬಿಜೆಪಿ) ಹಾಗೂ ಗೀತಾ ಶಿವರಾಜ್‌ ಕುಮಾರ್‌ (ಕಾಂಗ್ರೆಸ್‌) ಅವರ ನೇರಾನೇರ ಹಣಾಹಣಿಯ ನಡುವೆ ಬಿಜೆಪಿಯಿಂದ ಬಂಡೆದ್ದು, ಉಚ್ಛಾಟನೆಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಕಣದಲ್ಲಿರುವುದು ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಈಶ್ವರಪ್ಪ ಪಡೆಯುವ ಮತಗಳ ಮೇಲೆ ಗೆಲುವಿನ ಲೆಕ್ಕಚಾರದಲ್ಲಿ ಉಭಯ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಇವೆ. ಎಲ್ಲರಿಗೂ ಈ ಕಣದಿಂದ ಬೈಂದೂರಿನಲ್ಲಿ ಎಷ್ಟು ಮತ ಹಂಚಿಕೆಯಾಗುತ್ತದೆ ಎನ್ನುವುದೇ ಕುತೂಹಲ. ಅಂತಿಮವಾಗಿ ಮತದಾನ ಪ್ರಕ್ರಿಯೆ ಮುಗಿದಿದೆ. ಎಲ್ಲೆಲ್ಲಿ ಮತದಾರರು ಯಾರಿಗೆ ಎಷ್ಟು ಮತದಾನ ಮಾಡಿದ್ದಾರೆನ್ನುವುದನ್ನು ಕಾಯುವುದೇ ಸದ್ಯದ ಕುತೂಹಲ.

ಹೌದು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ, ಶಿವಮೊಗ್ಗ ಜಿಲ್ಲೆಯ ಭದ್ರವಾತಿ, ಸಾಗರ, ಶಿಕಾರಿಪುರ, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಸೊರಬ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳ ಮತದಾರರು ಈ ಬಾರಿ ಯಾರಿಗೆ ಮತ ಚಲಾಯಿಸಿದ್ದಾರೆ ಎನ್ನುವುದು ಸದ್ಯದ ಕುತೂಹಲ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಅಭ್ಯರ್ಥಿಗೆ ವರದಾನವಾಗಲಿದೆಯೇ, ಮೋದಿ ನಾಮ ಹಾಗೂ ರಾಮ ಮಂದಿರ ಮತ್ತೆ ಜೆಡಿಎಸ್‌ ಬೆಂಬಲಿತ ಬಿಜೆಪಿಗೆ ಆಶೀರ್ವಾದವಾಗಲಿದೆಯೇ ಅಥವಾ ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದು, ಮೂರನೇ ಬಾರಿ ಮೋದಿಯೇ ಪ್ರಧಾನಿಯಾಗಬೇಕು ಎಂಬ ವಿಷಯವನ್ನೇ ಹೋದಲ್ಲೆಲ್ಲಾ ಪ್ರಸ್ತಾಪಿಸಿ ಮತಯಾಚಿಸಿದ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪಗೆ ಮತದಾರ ಒಲಿದಿದ್ದಾನೋ ಎನ್ನುವುದನ್ನು ಕಾದು ನೋಡಬೇಕಿದೆ.

ಸದ್ಯದ ಮಾಹಿತಿಯ ಪ್ರಕಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ನಡೆದ ಮತದಾನದಲ್ಲಿ ಒಟ್ಟು ಶೇ. 76.05 ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರಗಳ ಮತ ಪ್ರಮಾಣ :

ಬೈಂದೂರು – 74.00%

ಭದ್ರಾವತಿ – 69.50%

ಸಾಗರ – 78.50%

ಶಿಕಾರಿಪುರ – 81.50%

ಶಿವಮೊಗ್ಗ ನಗರ – 67.21%

ಶಿವಮೊಗ್ಗ ಗ್ರಾಮಾಂತರ – 80.25%

ಸೊರಬ – 81.10%

ತೀರ್ಥಹಳ್ಳಿ – 80.23%

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!