Sunday, September 8, 2024

ಲೋಕಸಭಾ ಚುನಾವಣೆ : ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗ್ಯಾರಂಟಿ ವರ್ಸಸ್‌ ರಾಮ ಮಂದಿರ ಸ್ಪರ್ಧೆ !

ಜನಪ್ರತಿನಿಧಿ(ಬೆಂಗಳೂರು) : ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. ಎರಡು ಹಂತದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ರಾಜ್ಯದ ಲೋಕಸಭಾ ಕ್ಷೇತ್ರಗಳಿಗೆ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ವಿರೋಧ ಪಕ್ಷದ ಸ್ಥಾನದಲ್ಲಿ ಬಿಜೆಪಿ ಇದೆ. ಈ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿವೆ.

ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸುವುದಾದರೇ ಬಿಜೆಪಿ 25, ಕಾಂಗ್ರೆಸ್‌ (ಬೆಂಗಳೂರು ಗ್ರಾಮಾಂತರ) 1, ಜೆಡಿಎಸ್‌ (ಹಾಸನ) 1 ಹಾಗೂ ಪಕ್ಷೇತರ ಅಭ್ಯರ್ಥಿ 1 (ಮಂಡ್ಯ) ಕ್ಷೇತ್ರವನ್ನು ಗೆದ್ದಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ ಈ ಬಾರಿ ಮೈತ್ರಿಯಾಗಿರುವುದಿಂದ ಕಳೆದ ಬಾರಿಯ 24 ಕ್ಷೇತ್ರಗಳು ಹಾಗೂ ಜೆಡಿಎಸ್‌ನ ಒಂದು ಕ್ಷೇತ್ರ ಹಾಗೂ ಮಂಡ್ಯದಲ್ಲಿ ಸುಮಲತಾ ಅಂಬರೀಷ್‌ ಬಿಜೆಪಿಯನ್ನು ಸೇರ್ಪಡೆಗೊಂಡಿರುವ ಕಾರಣದಿಂದ ಬಿಜೆಪಿ ಈ ಬಾರಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿರುವುದು ಒಂದೆಡೆಯಾದರೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 135 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ರಾಜ್ಯದ ಅಧಿಕಾರ ಹಿಡಿದ ಕಾಂಗ್ರೆಸ್‌ ತಾನು ನೀಡಿದ ʼಕಾಂಗ್ರೆಸ್‌ ಗ್ಯಾರಂಟಿʼ ಯೋಜನೆಗಳ ಪರಿಣಾಮಕಾರಿಯಾಗಿರುವ ವಿಶ್ವಾಸದಲ್ಲಿ ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಭರವಸೆಯಲ್ಲಿದೆ.

28 ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಂತೂ ಬಾರಿ ಪೈಪೋಟಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜಿದ್ದಾಜಿದ್ದಿನ ಹೋರಾಟ ಏರ್ಪಡುವ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಮತಗಳ ಅಂತರಗಳ ಬಗ್ಗೆ ಮಾತೇ ಆಡುತ್ತಿಲ್ಲ. ಕಾಂಗ್ರೆಸ್‌ ಗ್ಯಾರಂಟಿಗಳು ಕಾಂಗ್ರೆಸ್‌ಗೆ ಬಲವಾದರೇ, ರಾಮ ಮಂದಿರ, ಮೋದಿ ನಾಮ ಬಿಜೆಪಿಗೆ ಬಲವಾಗಿದೆ. ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ನೇಹಾ ಕೊಲೆ ಪ್ರಕರಣ ಈ ಬಾರಿ ರಾಜ್ಯದ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಇವು ಎಷ್ಟರ ಮಟ್ಟಿಗೆ ಚುನಾವಣೆಗೆ ಪ್ರಭಾವ ಬೀರಲಿವೆ ಎನ್ನುವುದು ಕಾದು ನೋಡಬೇಕಿದೆ. ಮತದಾರ ಪ್ರಭು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಗೆ ಉಪಕಾರ ಸ್ಮರಣೆ ಮಾಡಿದ್ದಾನೋ ಅಥವಾ ರಾಮ ಮಂದಿರಕ್ಕೆ ಶರಣಾಗಿದ್ದಾನೋ ಎನ್ನುವ ವಿಚಾರ ಫಲಿತಾಂಶ ಬಂದಮೇಲೆಯೇ ತಿಳಿಯಬೇಕಿದೆ.

28 ಲೋಕಸಭಾ ಕ್ಷೇತ್ರಗಳಲ್ಲಿ ಯಾರ ಯಾರ ನಡುವೆ ಹಣಾಹಣಿ :

ಬೆಂಗಳೂರು ಕೇಂದ್ರ – ಮನ್ಸೂರ್‌ ಅಲಿ ಖಾನ್‌ (ಕಾಂಗ್ರೆಸ್‌) V/s ಪಿಸಿ ಮೋಹನ್‌ (ಬಿಜೆಪಿ)
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ -24

 ಬೆಂಗಳೂರು ಉತ್ತರ – ಪ್ರೊ. ಎಂ.ವಿ ರಾಜೀವ್‌ ಗೌಡ(ಕಾಂಗ್ರೆಸ್)  V/s‌ ಶೋಭಾ ಕರಂದ್ಲಾಜೆ(ಬಿಜೆಪಿ)
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 21

 ಬೆಂಗಳೂರು ಗ್ರಾಮಾಂತರ – ಡಾ. ಸಿ. ಎನ್‌ ಮಂಜುನಾಥ್‌(ಬಿಜೆಪಿ) V/s‌ ಡಿ.ಕೆ ಸುರೇಶ್‌ (ಕಾಂಗ್ರೆಸ್‌) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 15

 ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ (ಕಾಂಗ್ರೆಸ್‌) V/s‌ ತೇಜಸ್ವಿ ಸೂರ್ಯ (ಬಿಜೆಪಿ)
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 22

ಚಾಮರಾಜನಗರ – ಬಾಲರಾಜ್‌ ಎಸ್‌ (ಬಿಜೆಪಿ) V/s‌ ಸುನೀಲ್‌ ಬೋಸ್‌(ಕಾಂಗ್ರೆಸ್)‌
ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದಿರುವರ ಸಂಖ್ಯೆ – 14

ಚಿಕ್ಕಬಳ್ಳಾಪುರ – ಎಮ್‌.ಎಸ್‌ ರಕ್ಷಾ ರಾಮಯ್ಯ(ಕಾಂಗ್ರೆಸ್‌) V/s‌ ಡಾ. ಕೆ. ಸುಧಾಕರ್‌ (ಬಿಜೆಪಿ)
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 29

 ಚಿತ್ರದುರ್ಗ – ಗೋವಿಂದ ಎಂ ಕಾರಜೋಳ(ಬಿಜೆಪಿ) V/s‌ ಬಿ.ಎನ್‌. ಚಂದ್ರಪ್ಪ (ಕಾಂಗ್ರೆಸ್‌)
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 20 

ದಕ್ಷಿಣ ಕನ್ನಡ – ಪದ್ಮರಾಜ್‌ ಆರ್.‌ ಪೂಜಾರಿ V/s‌ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ -9

ಹಾಸನ – ಪ್ರಜ್ವಲ್‌ ರೇವಣ್ಣ (ಜೆಡಿಎಸ್‌, ಬಿಜೆಪಿ ಮೈತ್ರಿ)(ಜೆಸಿಎಸ್‌ನಿಂದ ಉಚ್ಛಾಟನೆ)  V/s‌ ಶ್ರೇಯಸ್‌ ಎಂ ಪಟೇಲ್‌ (ಕಾಂಗ್ರೆಸ್)‌
ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 15

ಕೋಲಾರ – ಕೆ.ವಿ ಗೌತಮ್‌ (ಕಾಂಗ್ರೆಸ್‌) V/s‌ ಎಂ ಮಲ್ಲೇಶ್‌ ಬಾಬು (ಜೆಡಿಎಸ್, ಬಿಜೆಪಿ ಮೈತ್ರಿ)
ಕೋಲಾರ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 18

 ಮಂಡ್ಯ – ವೆಂಕಟರಮಣೇ ಗೌಡ (ಸ್ಟಾರ್‌ ಚಂದ್ರು) (ಕಾಂಗ್ರೆಸ್‌) V/s‌ ಹೆಚ್‌. ಡಿ. ಕುಮಾರಸ್ವಾಮಿ(ಜೆಡಿಎಸ್‌, ಬಿಜೆಪಿ ಮೈತ್ರಿ)
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಳಿದವರ ಸಂಖೆ – 14

 ಮೈಸೂರು – ಎಂ ಲಕ್ಷ್ಮಣ (ಕಾಂಗ್ರೆಸ್‌) V/s‌ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (ಬಿಜೆಪಿ)
ಮೈಸೂರು ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 18

 ತುಮಕೂರು – ಎಸ್‌. ಪಿ ಮುದ್ದಹನುಮೇಗೌಡ V/s‌ ವಿ. ಸೋಮಣ್ಣ (ಬಿಜೆಪಿ)
ತುಮಕೂರು ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 18

 ಉಡುಪಿ ಚಿಕ್ಕಮಗಳೂರು – ಕೆ. ಜಯಪ್ರಕಾಶ್‌ ಹೆಗ್ಡೆ(ಕಾಂಗ್ರೆಸ್‌)  V/s ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ)
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 10 ‌

 ಚಿಕ್ಕೋಡಿ – ಅಣ್ಣಾ ಸಾಹೇಬ್‌ ಜೊಲ್ಲೆ (ಬಿಜೆಪಿ) V/s ಪ್ರಿಯಾಂಕಾ ಸತೀಶ್‌ ಜಾರಕಿಹೊಳಿ (ಕಾಂಗ್ರೆಸ್‌) ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 18

ಬೆಳಗಾವಿ – ಜಗದೀಶ್‌ ಶೆಟ್ಟರ್‌ (ಬಿಜೆಪಿ) V/s ಮೃಣಾಲ್‌ ಆರ್‌ ಹೆಬ್ಬಾಳ್ಕರ್‌ (ಕಾಂಗ್ರೆಸ್‌)
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 13

ಬಾಗಲಕೋಟೆ – ಪಿಸಿ ಗದ್ದಿಗೌಡರ್‌ (ಬಿಜೆಪಿ) V/s ಸಂಯುಕ್ತ ಶಿವಾನಂದ ಪಾಟೀಲ್‌(ಕಾಂಗ್ರೆಸ್‌)
ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 22

ಬಿಜಾಪುರ(ಎಸ್ಸಿ ಮೀಸಲು) ರಮೇಶ್‌ ಜಿಗಜಿಣಗಿ (ಬಿಜೆಪಿ) V/s ರಾಜು ಅಲಗೂರು(ಕಾಂಗ್ರೆಸ್)‌
ಬಿಜಾಪುರ(ಎಸ್ಸಿ ಮೀಸಲು) ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 8

ಗುಲ್ಬರ್ಗ (ಎಸ್ಸಿ) ಡಾ. ಉಮೇಶ್‌ ಜಿ. ಜಾದವ್‌(ಬಿಜೆಪಿ) V/s ರಾಧಾಕೃಷ್ಣ(ಕಾಂಗ್ರೆಸ್‌)
ಗುಲ್ಬರ್ಗ  ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ  – 14

ರಾಯಚೂರು(ಎಸ್ಟಿ ಮೀಸಲು) ಜಿ. ಕುಮಾರ್‌ ನಾಯ್ಕ್‌ (ಕಾಂಗ್ರೆಸ್‌) V/s ರಾಜಾ ಅಮರೇಶ್ವರ್‌ ನಾಯ್ಕ್‌ (ಬಿಜೆಪಿ)
ರಾಯಚೂರು ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ  – 8

ಬೀದರ್ – ಭಗವಂತ ಖೂಬಾ (ಬಿಜೆಪಿ) V/s ಸಾಗರ್‌ ಈಶ್ವರ್‌ ಖಂಡ್ರೆ (ಕಾಂಗ್ರೆಸ್)‌
ಬೀದರ್‌ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ  – 18

ಕೊಪ್ಪಳ – ಡಾ ಬಸವರಾಜ್‌ ಕೆ ಶರಣಪ್ಪ (ಬಿಜೆಪಿ) V/s ಕೆ. ರಾಜಶೇಖರ್‌ ಬಸವರಾಜ್‌ ಹಿಟ್ನಾಳ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ  – 19

ಬಳ್ಳಾರಿ(ಎಸ್ಟಿ) – ಈ. ತುಕಾರಾಮ್‌ (ಕಾಂಗ್ರೆಸ್‌) V/s ಬಿ. ಶ್ರೀರಾಮುಲು (ಬಿಜೆಪಿ)
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ -10

ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ್‌ (ಕಾಂಗ್ರೆಸ್‌) V/s ಬಸವರಾಜ್‌ ಬೊಮ್ಮಾಯಿ(ಬಿಜೆಪಿ) ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 14

ಧಾರವಾಡ – ಪ್ರಹ್ಲಾದ ಜೋಶಿ (ಬಿಜೆಪಿ) V/s ವಿನೋದ್‌ ಅಸೂಟಿ(ಕಾಂಗ್ರೆಸ್)‌
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 17

 ಉತ್ತರ ಕನ್ನಡ – ಡಾ. ಅಂಜಲಿ ನಿಂಬಾಳ್ಕರ್‌ (ಕಾಂಗ್ರೆಸ್‌) V/s ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ)
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 13

ದಾವಣಗೆರೆ – ಡಾ. ಪ್ರಭಾ ಮಲ್ಲಿಕಾರ್ಜುನ್‌ (ಕಾಂಗ್ರೆಸ್‌) V/s ಗಾಯತ್ರಿ ಸಿದ್ದೇಶ್ವರ(ಬಿಜೆಪಿ) V/s  ಜಿ.ಬಿ ವಿನಯ್‌ ಕುಮಾರ್‌(ಪಕ್ಷೇತರ, ಬಂಡಾಯ)
ದಾವಣಗೆರೆ  ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 30

ಶಿವಮೊಗ್ಗ – ಗೀತಾ ಶಿವರಾಜ್‌ ಕುಮಾರ್‌ (ಕಾಂಗ್ರೆಸ್‌) V/s ಬಿ. ವೈ ರಾಘವೇಂದ್ರ(ಬಿಜೆಪಿ) V/s  ಕೆ.ಎಸ್‌ ಈಶ್ವರಪ್ಪ (ಪಕ್ಷೇತರ, ಬಂಡಾಯ)
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧೆಗಿಳಿದವರ ಸಂಖ್ಯೆ – 23

 ಒಟ್ಟು ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಸಂಸದ ಸ್ಥಾನಕ್ಕೆ ಬರೋಬ್ಬರಿ 474 ಮಂದಿ ಸ್ಪರ್ಧೆಗೆ ಇಳಿದಿದ್ದಾರೆ.

ಆಧಾರ : ಕೇಂದ್ರ ಚುನಾವಣಾ ಆಯೋಗ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!