spot_img
Friday, March 27, 2026
spot_img

ವಂಡ್ಸೆ ಸ. ಮಾ. ಹಿ. ಪ್ರಾ.ಶಾಲೆಗೆ ಕಂಪ್ಯೂಟರ್ ಕೊಡುಗೆ

ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಸಹಯೋಗದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ವಂಡ್ಸೆ ಶಾಲಾ ಪೂರ್ವ ವಿದ್ಯಾರ್ಥಿ ಲ. ಡಾ.ಜಯರಾಮ್ ನಂಬಿಯಾರ್ ಸಹಕಾರದಲ್ಲಿ ಎರಡು ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು.

ಲಯನ್ ಕ್ಲಬ್ ಕುಂದಾಪುರ ಇದರ ಅಧ್ಯಕ್ಷ ಲ. ರಾಧಾಕೃಷ್ಣ ಮಾತನಾಡಿ 2 ಕಂಪ್ಯೂಟರ್ ನೀಡುವಲ್ಲಿ ಡಾ. ಜಯರಾಮ್ ನಂಬಿಯಾರ್ ಅವರ ಸಹಕಾರ ಶ್ಲಾಘಿಸಿದರು. ನಮ್ಮ ಟಿ.ವಿಯ ಡಾ. ಶಿವಶರಣ್, ಲಯನ್ಸ್ ಕ್ಲಬ್‌ನ ರಾಜೀವ ಕೋಟ್ಯಾನ್, ಶಾಲಾ ಪೂರ್ವ ವಿದ್ಯಾರ್ಥಿ ಡಾ.ಜಯರಾಮ ನಂಬಿಯಾರ್, ರೋಟರಿ ಕ್ಲಬ್ ಅಧ್ಯಕ್ಷ ಎಂ.ಜಿ ರಾಜೇಶ್, ಗ್ರಾಮ ಪಂಚಾಯತ್ ಸದಸ್ಯ, ಈ ಕೊಡುಗೆ ಪಡೆಯುವಲ್ಲಿ ತುಂಬು ಸಹಕಾರ ನೀಡಿದ ಗೋವರ್ಧನ ಜೋಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ ಜಿ ಅಧ್ಯಕ್ಷತೆ ವಹಿಸಿ ಲಯನ್ಸ್ ಕ್ಲಬ್ ಕುಂದಾಪುರ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರಿಗೆ ಕೃತಜ್ಞತೆ ಸಲ್ಲಿಸಿದರು.

ಅತಿಥಿಗಳನ್ನು ಶಾಲಾ ಪರವಾಗಿ ಗೌರವಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್ ಎಚ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಆಶಾ ವಂದಿಸಿದರು. ದೈ.ಶಿ.ಶಿಕ್ಷಕ ರಾಜು ಎನ್., ಶಿಕ್ಷಕ ರವಿಚಂದ್ರ, ಸದಾಶಿವ ಸಹಕರಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!