Thursday, November 21, 2024

ವಿಶೇಷಚೇತನ ಸಾಧಕಿಯಿಂದ ವಿಶೇಷ ಶಾಲೆಗೆ ರೂ.1.ಲಕ್ಷ ಕೊಡುಗೆ

ಕುಂದಾಪುರ: ಕುಂದಾಪುರ ಸಮೀಪದ ಕೋಣಿಯಲ್ಲಿರುವ ಮಾನಸ ಜ್ಯೋತಿ ವಿಶೇಷ ಶಾಲೆಗೆ ವಿಶೇಷಚೇತನ ಸಾಧಕಿ ಮಾಳವಿಕ ಅವರು ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿ ಮಾದರಿಯಾಗಿದ್ದಾರೆ.

ವಿಶೇಷಚೇತನರಾಗಿದ್ದ ಮಾಳವಿಕ ನಿರಂತರ ಪರಿಶ್ರಮ ಸಾಧನೆಯ ಮೂಲಕ ವಿಶೇಷವಾಗಿ ಪದವಿ ಪಡೆದು, ಕೋಟಕ್ ಇದರಲ್ಲಿ ಮೂರು ಬಾರಿ ಎಮ್.ಡಿ.ಆರ್.ಟಿ. ಆಗಿ ಹೊರಹೊಮ್ಮಿದ್ದಾರೆ. ವಿಶೇಷಚೇತನರಲ್ಲಿಯೂ ವಿಶೇಷವಾದ ಸಾಮಾರ್ಥ್ಯ, ಪ್ರತಿಭೆ ಇರುತ್ತದೆ ಎನ್ನುವುದಕ್ಕೆ ಮಾಳವಿಕಾ ಸಾಕ್ಷಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ವಿಶೇಷ ಮಕ್ಕಳಿಗೆ ಪ್ರತ್ಯೇಕವಾದ ನಿಯಮವನ್ನು ಸರಕಾರ ರಚನೆ ಮಾಡಬೇಕು. ಅವರ ಪ್ರತಿಭೆಯನ್ನು ವಿಶೇಷವಾಗಿ ಗುರುತಿಸಬೇಕು ಎಂದು ಹೇಳಿದ ಅವರು, ಪೋಷಕರ ಒಂದು ತಪಸ್ಸಿನ ಫಲವಾಗಿ ಮಾಳವಿಕ ಬೆಳೆಯಲು ಸಾಧ್ಯ. ಎಲ್ಲಾ ಪೋಷಕರಿಗೆ ಇವರ ತಂದೆ ತಾಯಿ ಆದರ್ಶ ಎಂದರು.

ಮಾನಸ ಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಡಾ.ಬಿ.ವಿ.ಉಡುಪ ವಿಶೇಷ ಮಗು ಮಾಳವಿಕ ಇವರ ಸಾಧನೆ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿಶೇಷ ಮಗು ಮಾಳವಿಕ ಇವರನ್ನು ಮಾನಸ ಜ್ಯೋತಿ ವಿಶೇಷ ಮಕ್ಕಳ ಶಾಲಾ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಳವಿಕ ಇವರ ಪೋಷಕರಾದ ಎಮ್.ಎಸ್. ಎನ್. ಸೌಮ್ಯಾಜಿ ಹಾಗೂ ಪ್ರೇಮ, ಮಾನಸ ಜ್ಯೋತಿ ವಿಶೇಷ ಮಕ್ಕಳ ಶಾಲೆಯ ಟ್ರಸ್ಟಿಗಳು, ಶಾಲಾ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.

ಮಾನಸ ಜ್ಯೋತಿ ವಿಶೇಷ ಶಾಲೆಯ ಟ್ರಸ್ಟಿ ಕೆ.ಕೆ.ಕಾಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!