14.8 C
New York
Tuesday, December 7, 2021

Buy now

spot_img

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ತಾಲ್ಲೂಕು ವತಿಯಿಂದ ಸರ್ಕಾರಕ್ಕೆ ಮನವಿ


ಬೈಂದೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ತಾಲ್ಲೂಕು ಇವರ ವತಿಯಿಂದ ರಾಜ್ಯ ಶಿಕ್ಷಕರ ಸಂಘದ ನಿರ್ದೇಶನದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಶಿಕ್ಷಣ ಸಚಿವರಿಗೆ ಹಾಗೂ ಪ್ರಧಾನ ಕಾರ್ಯದರ್ಶಿಗಳು ಪ್ರಾಥಮಿಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಿಕ್ಷಣ ಆಯುಕ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೈಂದೂರು ಮುಖಾಂತರ ಮನವಿಯನ್ನು ಕಚೇರಿಯ ಮುಖ್ಯಾಧಿಕಾರಿ ಹಾಗೂ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ತಾಲ್ಲೂಕು ಶಿಕ್ಷಕ ಸಂಘದ ಅಧ್ಯಕ್ಷ ಶೇಖರ್ ಹೋರಾಟದ ರೂಪುರೇಷೆಗಳನ್ನು ಸವಿಸ್ತಾರವಾಗಿ ಹಾಗೂ ತರಬೇತಿ ಬಹಿಷ್ಕಾರ ಕಪ್ಪುಪಟ್ಟಿ ಧರಿಸಿ ಮಕ್ಕಳೊಂದಿಗೆ ಇದ್ದು ನಿರಂತರ ಹೋರಾಟ ಮಾಡಲು ಶಿಕ್ಷಕರ ಸಹಕಾರ ಕೋರಿ ಮನವಿ ಸಲ್ಲಿಸಿದರು. ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಗಣಪತಿ ಹೋಬಳಿದಾರ್ ಪದವೀಧರ ಶಿಕ್ಷಕರ ಸಮಸ್ಯೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮುಖ್ಯೋಪಾಧ್ಯಾಯರ ವೇತನ ಬಡ್ತಿ ಸಮಸ್ಯೆ ನೂತನ ಪಿಂಚಣಿ ರದ್ದತಿ ಕುರಿತು ಗ್ರಾಮೀಣ ಕೃಪಾಂಕದ ಶಿಕ್ಷಕರ ಸಮಸ್ಯೆ ದೈಹಿಕ ಶಿಕ್ಷಕರ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮನವಿ ನೀಡಲಾಗಿದೆ ಎಂದರು.

ತಾಲೂಕು ಸಂಘದ ಉಪಾಧ್ಯಕ್ಷರುಗಳಾದ ಸುನಿಲ್ ಶೆಟ್ಟಿ , ಗಿರಿಜಾ ಮೊಗವೀರ ಖಜಾಂಚಿ ಅಚ್ಯುತ ಬಿಲ್ಲವ, ಸಹಕಾರ್ಯದರ್ಶಿ ನಾಗರತ್ನ ಬಿ, ಮಂಜುನಾಥ ದೇವಾಡಿಗ ಸಂಘಟನಾ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಗಾಣಿಗ, ನಾಗರತ್ನ ಮತ್ತು ಶಿಕ್ಷಕ ಸಂಘದ ಸದಸ್ಯರು ಹಾಗೂ ವಿವಿಧ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,045FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!