14.9 C
New York
Tuesday, December 7, 2021

Buy now

spot_img

ಕುಂದಾಪುರ: 1.800 ಕೆ.ಜಿ ಗಾಂಜಾ, ಬ್ರೌನ್ ಶುಗರ್ ವಶ: ಒಬ್ಬನ ಬಂಧನ

ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ರವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಶ್ರೀಕಾಂತ್ ಕೆ ರವರು ಅ.21ರಂದು ರಾತ್ರಿ ಕರ್ತವ್ಯದಲ್ಲಿದ್ದ ಸಮಯ ಕುಂದಾಪುರ ಶಾಸ್ತ್ರೀಪಾರ್ಕ್ ಬಳಿ ಅನುಮಾನಸ್ಪದವಾಗಿ ಕಂಡು ಬಂದ ಮಹಮ್ಮದ್ ಜಾಫರ್ ಗುಡುಮಿಯಾ, (28 ವ) ಕಾರವಾರ, ಎಂಬವನನ್ನು ದಸ್ತಗಿರಿ ಮಾಡಿ ಒಟ್ಟು 1 ಕೆ.ಜಿ 800 ಗ್ರಾಂ ತೂಕದ ಗಾಂಜಾ ಅಂದಾಜು ಮೌಲ್ಯ 40,000 ರೂಪಾಯಿ ಹಾಗೂ ೦೧ ಗ್ರಾಂ ಬ್ರೌನ್ ಶುಗರ್ ಅಂದಾಜು ಮೌಲ್ಯ 10,000 ರೂಪಾಯಿ, 2 ಮೊಬೈಲ್ ಫೋನ್, 1,500 ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡು ಕುಂದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಚರಣೆಯಲ್ಲಿ ಕುಂದಾಪುರ ಪೊಲೀಸ್ ಉಪಾಧೀಕ್ಷಕರ ಕಛೇರಿಯ ಅಪರಾಧ ವಿಭಾಗದ ಸಿಬ್ಬಂದಿಯವರಾದ ರಾಘವೇಂದ್ರ ಉಪ್ಪುಂದ, ರಾಮು ಹೆಗ್ಡೆ, ವಿಜಯ ಕುಮಾರ್, ರಮೇಶ ಕುಲಾಲ್, ಕುಂದಾಪುರ ಪೊಲೀಸ್ ಠಾಣೆಯ ರಾಘವೇಂದ್ರ ಮೊಗೇರ ಮತ್ತು ವಿಜೇತ್ ಹಾಗೂ ಜೀಪು ಚಾಲಕರಾದ ರಾಜು ಭಾಗವಹಿಸಿದ್ದರು.

Related Articles

Stay Connected

21,961FansLike
3,046FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!