Friday, March 29, 2024

ಸರಕಾರಿ ಶಾಲೆಗಳ ಉಳಿವಿಗೆ ಯೋಜನೆ ರೂಪಿತವಾಗಲಿ

[ಸುಬ್ರಹ್ಮಣ್ಯ ಪಡುಕೋಣೆ ಸಂಪಾದಕ]

ಕೊರೊನಾ ಬಂದು ಜನರ ಬದುಕನ್ನು ತೀರಾ ಹದಗೆಡುವಂತೆ ಮಾಡಿದೆ. ಪ್ರತಿಯೊಂದು ಹಂತದಲ್ಲೂ ಸಾಮಾನ್ಯ ಜನರನ್ನು ಯೋಚಿಸುವಂತೆ ಮಾಡಿದೆ. ದುಡಿದು ತಿನ್ನುವ ಕೈಗಳಿಂದ ಹಿಡಿದು ಸಣ್ಣ ವ್ಯವಹಾರಸ್ಥರ ಜೀವನಮಟ್ಟ ಸಂಪೂರ್ಣ ಕುಸಿದಿದೆ. ಪ್ರತಿಯೊಂದು ಹಂತದಲ್ಲೂ ಕೂಡ ಜನಸಾಮಾನ್ಯರು ಮುಂದಿನ ಬದುಕಿಗಾಗಿ ಯೋಚಿಸುವಂತೆ ಮಾಡಿದೆ. ಬೇರೆ ಬೇರೆ ಊರುಗಳಲಿ, ಪಟ್ಟಣಗಳಲ್ಲಿ ದುಡಿಮೆ ಮಾಡುತ್ತಿರುವವರು ತಮ್ಮೂರಿಗೆ ಧಾವಿಸಿದ್ದಾರೆ. ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಮಕ್ಕಳನ್ನು ಒಳ್ಳೆಯ ಶಾಲೆಯಲ್ಲಿ ಓದಿಸಬೇಕೆಂಬ ಕನಸುಗಳಿಗೆ ತಿಲಾಂಜಲಿ ಬಿದ್ದಿದೆ. ಮಕ್ಕಳ ಶಿಕ್ಷಣಕ್ಕೆ ಮಾಡಿದಸಾಲಗಳನ್ನು ತೀರಿಸಲಾಗದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಊರಿನ ಸರಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಇದೀಗ ಪ್ರತಿ ಗ್ರಾಮಗಳ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಸರಕಾರಿ ಶಾಲೆಗಳ ಮೇಲೆ ಪ್ರೀತಿ ಬರಲಾಂಬಿಸಿದೆ. ಸರಕಾರವೂ ಕೂಡ ಇದನ್ನು ಗಮನಿಸ ಬೇಕಾಗಿದೆ. ಪ್ರಾಥಮಿಕ ಹಂತದಲ್ಲಿ ಇನ್ನೂ ಕೂಡ ಸರಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಲು ಸರಕಾರ ಮುಂದಾಗಲಿಲ್ಲ, ಸಮರ್ಪಕವಾದ ಕಟ್ಟಡವನ್ನು ಒದಗಿಸಲು ಮನಸ್ಸು ಮಾಡಲಿಲ್ಲ. ಇದ್ದ ಕಟ್ಟಡಗಳನ್ನೆ ಅರೆಬರೆಯಾಗಿ ದುರಸ್ತಿ ಮಾಡುತ್ತಾ ಬಂದಿರುವ ಸರಕಾರ ಪೂರ್ಣ ಪ್ರಮಾಣದಲ್ಲಿ ಕಟ್ಟಡವನ್ನು ಒದಗಿಸಲು ಯೋಜನೆಯನ್ನು ರೂಪಿಸಲು ಬೇಕಾದ ಬೇಡವಾದ ಯೋಜನೆಯನ್ನು ರೂಪಿಸಲಿಲ್ಲ. ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುಲು ಸರಕಾರದ ಬಳಿ ಅನೇಕ ಕಾರ್ಯಕ್ರಮವಿದೆ. ಅದನ್ನು ಬಿಟ್ಟು ಸರಕಾರಿ ಶಾಲೆಗಳ ಉನ್ನತೀಕರಣ ಯೋಜನೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಇತ್ತೀಚಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ರಾಜ್ಯದ ಶಿಕ್ಷಣ ಸಚಿವರು ಶಿಕ್ಷಕರ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ. ಒಂದು ಹಂತದ ಸಮದಾನ ತರುವ ಸುದ್ದಿಯಾದರು ಈ ಪ್ರಕ್ರೀಯೆ ಪೂರ್ಣಗೊಳ್ಳಲು ಕೆಲವು ವರ್ಷಗಳೇ ಬೇಕಾಗ ಬಹುದು. ಸಾಕಷ್ಟ್ಡು ಸಂಖ್ಯೆಯಲ್ಲಿ ಶಿಕ್ಷಕರ ಕೊರತೆ ಇದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಾದರೂ ಸರಕಾರ ಭರ್ತಿ ಪ್ರಕ್ರೀಯೆಯನ್ನು ಆದಷ್ಟು ಬೇಗನೇ ಪೂರ್ತಿ ಗೊಳಿಸಬೇಕಾಗಿದೆ. ಇನ್ನು ಗ್ರಾಮಕ್ಕೊಂದು ಮಾದರಿ ಶಾಲೆಗಳನ್ನು ಮಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳ ಲಾಗುವುದು ಎಂದು ಹೇಳಿಕೆಯನ್ನು ನೀಡಿದ್ದರೆ. ಇದು ಈ ಹಿಂದಿನಿಂದಿಲೂ ಕೇಳಿ ಬರುತ್ತಿರುವ ಮಾತು, ಇದರ ಬಗ್ಗೆ ಸರಕಾರ ಚಿಂತಿಸಿ, ಸಮಾಲೋಚಿಸಿ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಒಂದು ಹಂತದಲ್ಲಿ ಇದು ಯಶಸ್ವ್ವಿಯಾಗಬಹುದು. ಗ್ರಾಮದ ಒಂದೇ ಶಾಲೆಯಲ್ಲಿ ಎಲ್ಲಾ ಮಕ್ಕಳು ಒಟ್ಟಿಗೆ ಕುಳಿತು ಶಿಕ್ಷಣ ಪಡೆಯುವ ಒಳ್ಳೆಯ ಅವಕಾಶವಾಗಲಿದೆ. ಅಲ್ಲದೆ ಸರಕಾರಕ್ಕೆ ಹಣಕಾಸಿನ ಉಳಿತಾಯವೂ ಆಗಲಿದೆ. ಒಳ್ಳೆಯ ಶಿಕ್ಷಣ ನೀಡಲು ಇದರಿಂದ ಸಾಧ್ಯವಾಗಬಹುದು. ರಾಜ್ಯದ ಆಳುವ ವರ್ಗಗಳಿಗೆ ಈ ಯೋಚನೆ ಮೊದಲಿಂದಲೂ ಇತ್ತು. ಆದರೆ ಇದನ್ನು ಜಾರಿಗೊಳಿಸಲು ಮುಂದಾಗಲಿಲ್ಲ. ಶಿಕ್ಷಣ ಸಚಿವರಾದವರೆಲ್ಲ ಪ್ರತಿ ಬಾರಿಯೂ ಈ ಹೇಳಿಕೆಯನ್ನು ನೀಡಿ ಸುಮ್ಮನಾಗಿ ಬಿಡುತ್ತಾರೆ. ಮತ್ತೆ ಅದು ಚಾಲನೆಗೆ ಬರುವುದಿಲ್ಲ. ಪ್ರತಿ ಗ್ರಾಮಗಳಲಿ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ. ಅಲ್ಲದೆ ಊರೂರಿಗೆ ಖಾಸಗಿ ಶಾಲೆಗಳ ಬಸ್ಸುಗಳು ಬರಲಾರಂಭಿಸಿವೆ. ಇದರಿಂದಾಗಿ ಸರಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಗ್ರಾಮಕ್ಕೊಂದು ಮಾದರಿ ಶಾಲೆ ಉತ್ತಮ ಯೋಜನೆಯಾಗಿದೆ. ಇದನ್ನು ಮಾದರಿಯಗಿಯೇ ಮಾಡಬೇಕು. ಆ ನಿಟ್ಟಿನಲ್ಲಿ ಸರಕಾರ ಮುಂದಾಗಲಿ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!