spot_img
Wednesday, April 1, 2026
spot_img

ಬಿಜೆಪಿಯವರದ್ದು ಆರ್‌ಎಸ್‌ಎಸ್‌ ಹಿಂದುತ್ವ, ನಮ್ಮದು ಪ್ಯೂರ್‌ ಹಿಂದುತ್ವ : ಬಿಜೆಪಿ ವಿರುದ್ಧ ಗೋಪಾಲ್‌ ಪೂಜಾರಿ ಅಬ್ಬರ

ಜನಪ್ರತಿನಿಧಿ (ಕಿರಿಮಂಜೇಶ್ವರ) : ನನ್ನನ್ನು ಬಿಜೆಪಿ ಭಯೋತ್ಪಾದಕ ಎಂದು ಬಿಂಬಿಸಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲುವ ಹಾಗೆ ಮಾಡಿತ್ತು. ಹಿಂದುತ್ವದ ಹೆಸರಿನಲ್ಲಿ ಕರಾವಳಿಗರ ಮತ ತೆಗೆದುಕೊಂಡು ಇಲ್ಲಿನ ಜನರಿಗೆ ಸಾಮಾಜಿಕ ನ್ಯಾಯ ಕೊಡುವ ಕನಿಷ್ಟ ಸೌಜನ್ಯ ಬಿಜೆಪಿ ಸರ್ಕಾರ ಮಾಡಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜರಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವರು ಕಿರಿಮಂಜೇಶ್ವರದಲ್ಲಿ ಇಂದು(ಮಂಗಳವಾರ) ನಡೆದ ಕಾಂಗ್ರೆಸ್ ಬೃಹತ್ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಇಡೀ ದೇಶದ ಅಭಿವೃದ್ಧಿಗೆ, ನಮ್ಮ ಕರಾವಳಿಯ ಅಭಿವೃದ್ಧಿಗೆ ದುಡಿದಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಬಿ.ವೈ ರಾಘವೇಂದ್ರರೇ ನಿಮ್ಮ ಆಡಂಬರ, ಐಶಾರಾಮಿ ಕಾರ್ಯಕ್ರಮಗಳೆಲ್ಲಾ ಬೇಕಾಗಿಲ್ಲ. ಮೂರು ಬಾರಿ ಇಲ್ಲಿ ಸಂಸದರಾಗಿದ್ದೀರಿ ಒಮ್ಮೆಯಾದರೂ ಇಲ್ಲಿನ ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದೀರಾ ? ಎಂದು ಕಟುವಾಗಿ ಪ್ರಶ್ನಿಸಿದ್ದಲ್ಲದೇ, ಇಲ್ಲಿ ಮರಿನಾ ಯೋಜನೆ ತಂದು ಇಲ್ಲಿನ ಮೀನುಗಾರರ ಬದುಕನ್ನು ಕಿತ್ತುಕೊಂಡು ಹಣ ಮಾಡುವ ನಿಮ್ಮ ಉದ್ದೇಶ ಇಲ್ಲಿ ನಡೆಯುವುದಿಲ್ಲ ಎಂದು ಬಿಜೆಪಿ ಸಂಸದ ರಾಘವೇಂದ್ರ ವಿರುದ್ಧ ಗುಡುಗಿದರು.

ಬಿಜೆಪಿಯವರದ್ದು ಆರ್‌ಎಸ್‌ಎಸ್ ಹಿಂದುತ್ವ. ನಾವೂ ಹಿಂದುಗಳೇ. ನಾವೂ ದೇವಸ್ಥಾನಗಳಿಗೆ ಅನುದಾನ ಕೊಟ್ಟಿದ್ದೇವೆ. ನಮ್ಮದು ಪ್ಯೂರ್ ಹಿಂದುತ್ವ ಎಂದು ಅವರು ಹೇಳಿದರು.

ಇನ್ನು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಮಾತನಾಡಿ, ಬೈಂದೂರು ತಾಲೂಕು ಮಾತೃ ಪ್ರಧಾನವಾದ ತಾಲೂಕು. ಈ ತಾಲೂಕಿನಲ್ಲಿ ಮಹಿಳೆಯರೇ ಯಜಮಾನಿ. ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದೆ. ಮಹಿಳೆಯರು ಕಾಂಗ್ರೆಸ್‌ ಪರವಾಗಿದ್ದಾರೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಗೆಲ್ಲುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಕಾಂಗ್ರೆಸ್‌ ರಾಜ್ಯ ವಕ್ತಾರ ನಿಕೇತ್‌ ರಾಜ್‌ ಮೌರ್ಯ, ಕಾರ್ಕಳ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ, ಕಾಂಗ್ರೆಸ್‌ ನಾಯಕಿ ಮಮತಾ ಗಟ್ಟಿ, ಶೃಂಗೇರಿ ಶಾಸಕ ಟಿ. ಡಿ ರಾಜೇ ಗೌಡ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಉಡುಪಿ‌ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ರಾಜು ಪೂಜಾರಿ, ಕಾಂಗ್ರೆಸ್‌ ಮುಖಂಡರಾದ ಕೆ. ಪ್ರಕಾಶ್ಚಂದ್ರ ಶೆಟ್ಟಿ, ಗೌರಿ ದೇವಾಡಿಗ ಸೇರಿ, ಸುಬ್ರಹ್ಮಣ್ಯ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!