spot_img
Saturday, February 14, 2026
spot_img

ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುವುದು ಅತ್ಯಂತ ಕೆಟ್ಟ ರಾಜಕೀಯ : ಜೆಪಿ ಹೆಗ್ಡೆ

ಜನಪ್ರತಿನಿಧಿ (ಕಿರಿಮಂಜೇಶ್ವರ) : ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿ ಪೂರೈಸಿದೆ. ಜನರ ಭಾವನೆಗಳನ್ನು ಕೆರಳಿಸಿ ಮತ ಕೇಳುವುದು ಅತ್ಯಂತ ಕೆಟ್ಟ ರಾಜಕೀಯ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಅವರು ಕಿರಿಮಂಜೇಶ್ವರದಲ್ಲಿ ಇಂದು(ಮಂಗಳವಾರ) ನಡೆದ ಕಾಂಗ್ರೆಸ್ ಬೃಹತ್ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಗೆದ್ದಾಗಲೂ, ಸೋತಾಗಲೂ ಜನರ ನಿರಂತರ ಸಂಪರ್ಕದಲ್ಲಿದ್ದದ್ದು ನಮ್ಮ ಕಾಂಗ್ರೆಸ್. ಕಾಂಗ್ರೆಸ್ ರಾಜ್ಯ ಹಾಗೂ ಕೇಂದ್ರದಲ್ಲಿಯೂ ಜನರಿಗೆ ಉಪಯೋಗವಾಗುವ ಗ್ಯಾರಂಟಿಗಳನ್ನು ಕೊಟ್ಟಿದೆ.‌ ಈ ಗ್ಯಾರಂಟಿಗಳನ್ನು ಜನರು ನೆನಪಿಟ್ಟುಕೊಂಡು ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ನಾವು(ಕಾಂಗ್ರೆಸ್) ಮಾಡಿದ ಯೋಜನೆಗಳ ಶ್ರೇಯ ತೆಗೆದುಕೊಳ್ಳುವುದಕ್ಕೆ ಬಿಜೆಪಿಯವರು ನಿಸ್ಸೀಮರು. ಕುಂದಾಫುರದ ಕೋಡಿ ಹಾಗೂ ಗಂಗೊಳ್ಳಿಯಲ್ಲಿ ಬ್ರೇಕ್‌ ವಾಟರ್‌ (ಸೀ ವಾಕ್‌) ನಿರ್ಮಾಣಕ್ಕೆ ೧೦೨ ಕೋಟಿ ರೂ. ಅನುಮೋದನೆ ಕೊಡಿಸಿದೆ. ಅದನ್ನೂ ಕೂಡ ತಾವೇ(ಬಿಜೆಪಿ) ಮಾಡಿಸಿದ್ದು ಎಂದು ಹೇಳಿಕೊಳ್ಳುವುದಕ್ಕೆ ಪ್ರಯತ್ನಪಟ್ಟರು. ಆದರೇ ಅದರಲ್ಲಿ ಅವರು ವಿಫಲರಾದರು. ಜನರಿಗೆ ನಾವು ಕೊಟ್ಟ ಯೋಜನೆಗಳು, ಕೆಲಸಗಳು ನೆನಪಿದೆ. ನಮ್ಮ ಅಭ್ಯರ್ಥಿ ಈ ಕ್ಷೇತ್ರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಈ ದೇಶಕ್ಕೆ ತ್ಯಾಗ, ಬಲಿದಾನ ಕೊಟ್ಟ ಪಕ್ಷ ಕಾಂಗ್ರೆಸ್‌ | ಮಹಿಳೆಯರು ನಮ್ಮ ಗ್ಯಾರಂಟಿಗಳಿಂದ ಸರಿ ದಾರಿಯಲ್ಲೇ ಹೋಗುತ್ತಿದ್ದಾರೆ : ಶೃತಿ ಹೇಳಿಕೆಗೆ ಮಮತಾ ಗಟ್ಟಿ ತಿರುಗೇಟು

ಕಾಂಗ್ರೆಸ್ ಪಕ್ಷ ಈ ದೇಶದ ಇತಿಹಾಸದಲ್ಲಿ ಒಬ್ಬ ತಾಯಿ ಇದ್ದ ಹಾಗೆ. ಈ ದೇಶದ ಎಲ್ಲರನ್ನೂ ಒಟ್ಟುಗೂಡಡಿಸಿಕೊಂಡು ಬಂದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಜನರಿಗೆ ಬದುಕನ್ನು ಕೊಟ್ಟಿದೆ. ನುಡಿದಂತೆ ನಡೆದಿದೆ ಎಂದು ಕಾಂಗ್ರೆಸ್‌ ನಾಯಕಿ ಮಮತಾ ಗಟ್ಟಿ ಹೇಳಿದರು.

ಕಾಂಗ್ರೆಸ್ ಮಹಿಳೆಯರ ಮನಸ್ಸನ್ನು ಗೆದ್ದಿದೆ. ಮಹಿಳೆಯರು ಸ್ವಾವಲಂಬಿ ಆಗುವ ಹಾಗೆ ಯೋಜನೆಗಳನ್ನು ಕಾಂಗ್ರೆಸ್‌ ಕೊಟ್ಟಿದೆ. ಮಹಿಳೆಯರ ತಾಳಿ ಸ್ವಾಭಿಮಾನದ ಬದುಕು. ಪ್ರಧಾನಿ ಭಾವನಾತ್ಮಕವಾಗಿ ಮಾತನಾಡಿ ಜನರನ್ನು ಮರಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಮಹಿಳೆಯರಿಗೆ ಕೊಟ್ಟ ಯೋಜನೆಗಳಿಂದ ನೀವು ಇಷ್ಟು ಹತಾಶೆಯಿಂದ ಮಹಿಳೆಯರ ಬಗ್ಗೆ ಇಷ್ಟು ಕೇವಲವಾಗಿ ಮಾತನಾಡುತ್ತಿದ್ದೀರಿ. ಬಿಜೆಪಿಯವರಿಗೆ ತಾಕತ್ತಿದ್ದರೇ ಮಹಿಳಾ ಪರ ಯೋಜನೆಗಳನ್ನು ತರಲಿ, ಉದ್ಯೋಗ ಸೃಷ್ಟಿ ಮಾಡಲಿ, ಬೆಲೆ ಏರಿಕೆ ನಿವಾರಿಸಿ ಎಂದು ಅವರು ಆಗ್ರಹಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ದಾರಿ ತಪ್ಪಿಲ್ಲ. ಸರಿ ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ಬಿಜೆಪಿ ನಾಯಕ ಶೃತಿ ಅವರ ಹೇಳಿಕೆಗೆ ಅವರು ಪರೋಕ್ಷವಾಗಿ ಟೀಕೆ ಮಾಡಿದ್ದಲ್ಲದೇ, ಈ ದೇಶಕ್ಕೆ ತ್ಯಾಗ, ಬಲಿದಾನ ಕೊಟ್ಟ ಪಕ್ಷ ಎಂದರೇ ಕಾಂಗ್ರೆಸ್ ಪಕ್ಷದ ಕುಟುಂಬ. ಯಾವುದೇ ಒಬ್ಬ ಬಿಜೆಪಿಯ ನಾಯಕ ದೇಶಕ್ಕೆ ಪ್ರಾಣಾರ್ಪಣೆ ಮಾಡಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಪರ ಪಕ್ಷ ಅಧಿಕಾರ ಬರದಿದ್ದರೇ ಹಿಂದುಳಿದ ವರ್ಗದವರು, ಮಹಿಳೆಯರು ಹಿಂದೆ ಉಳಿಯಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಬೈಂದೂರು ಸುಕುಮಾರ್‌ ಶೆಟ್ಟಿ, ಕಾರ್ಕಳ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ, ಶೃಂಗೇರಿ ಶಾಸಕ ಟಿ. ಡಿ ರಾಜೇ ಗೌಡ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಬಿ ನಿಂಗಯ್ಯ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಉಡುಪಿ‌ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ರಾಜು ಪೂಜಾರಿ, ಕಾಂಗ್ರೆಸ್‌ ಮುಖಂಡರಾದ ಕೆ. ಪ್ರಕಾಶ್ಚಂದ್ರ ಶೆಟ್ಟಿ, ಗೌರಿ ದೇವಾಡಿಗ ಸೇರಿ, ಸುಬ್ರಹ್ಮಣ್ಯ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!