Thursday, November 21, 2024

ಪಾಲಿಟಿಕ್ಸ್‌ ಅಂದ್ರೆ ಕಿರುಚುವುದಲ್ಲ, ಜನರ ಸಮಸ್ಯೆಗಳನ್ನು ಪರಿಹರಿಸುವುದು : ಶಿವರಾಜ್‌ ಕುಮಾರ್‌

ಜನಪ್ರತಿನಿಧಿ (ಬೈಂದೂರು) : ಬೈಂದೂರಿಗೆ ಬರುವುದು ಹೊಸ ಅನುವಬವ, ಹೊಸ ಖುಷಿ. ನಮಗೆ ಮನುಷ್ಯ ಜಾತಿಗಳ ನಡುವೆ ಬೇಧಬಾವವೇ ಗೊತ್ತಿಲ್ಲ. ಎಲ್ಲರೂ ಒಟ್ಟಾಗಿ ಇರಬೇಕು ಎನ್ನುವುದು ಅಷ್ಟೆ ನಮ್ಮ ಉದ್ದೇಶ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಪತಿ ಹಾಗೂ ಕಾಂಗ್ರೆಸ್‌ ಪರ ಸ್ಟಾರ್‌ ಪ್ರಚಾರಕ ಡಾ. ಶಿವರಾಜ್‌ ಕುಮಾರ್‌ ಹೇಳಿದರು.

ಅವರು ಕಿರಿಮಂಜೇಶ್ವರದಲ್ಲಿ ಇಂದು(ಮಂಗಳವಾರ) ನಡೆದ ಕಾಂಗ್ರೆಸ್ ಬೃಹತ್ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಪಾಲಿಟಿಕ್ಸ್ ಅಂದ್ರೆ ಕಿರುಚುವುದಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸುವುದು ರಾಜಕೀಯ. ದ್ವೇಷಗಳನ್ನು ಬಿತ್ತುವುದು ರಾಜಕೀಯ ಅಲ್ಲ. ಜನರ ಜೊತೆಗೆ ಇದ್ದು ಅವರಿಗೆ ಸ್ಪಂದಿಸುವುದೇ ರಾಜಕೀಯ. ಹೊಸತನಕ್ಕೆ ಅವಕಾಶ ಕೊಡಿ. ಗೀತಾ ಅವರಿಗೆ ನಾನೇ ಗ್ಯಾರಂಟಿ ಎಂದು ಭರವಸೆ ನೀಡಿದರು.

ʼಬೇಡುವೆನು ವರವನ್ನು ಕೊಡೆ ತಾಯೆ ಜನ್ಮವನ್ನು, ಕಡೆ ತನಕ ಮರೆಯಲ್ಲ ಜೋಗಿʼ, ʼಎಲ್ಲೋಜಗಪ್ಪ  ನಿನ್ನ ಅರಮನೆʼ ಹಾಡುಗಳನ್ನು ಹಾಡಿ ಜನರನ್ನು ಶಿವಣ್ಣ ರಂಜಿಸಿದರು.

ಈ ಸಲ ಯಾಮಾರಿದರೇ ಐದು ವರ್ಷ ಸಂಕಟಪಡಬೇಕು : ದುನಿಯಾ ವಿಜಯ್‌

ಹೆಣ್ಣು ಮಹಾಶಕ್ತಿ. ಹೆಣ್ಣು ನೂರು ಮಕ್ಕಳನ್ನು ಬೇಕಾದರೂ ಸಾಕಿಯಾಳು. ಹೆಣ್ಣೊಬ್ಬಳು ಈ ಕ್ಷೇತ್ರವನ್ನು ಒಗ್ಗಟ್ಟಿನಿಂದ ಕೊಂಡೊಯ್ಯಬಲ್ಲಳು. ಹಾಗಾಗಿ ಗೀತಕ್ಕ ಇಲ್ಲಿಂದ ಗೆದ್ದು ಕ್ಷೇತ್ರದ ಸಮಸ್ಯೆಗಳನ್ನು ಧ್ವನಿಸಬೇಕಾಗಿದೆ ಎಂದು ಸಭೆಯನ್ನು ಉದ್ದೇಶಿಸಿ ಚಂದನವನದ ಖ್ಯಾತ ನಟ ದುನಿಯಾ ವಿಜಯ್ ಹೇಳಿದರು.

ಈ ಸಲ ಯಾಮಾರಿದರೇ, ಬಿಜೆಪಿ ಹಿಂದೂ ಮುಸ್ಲಿಂ ಮುಖ ನೋಡಿಕೊಳ್ಳದೇ ಇರುವ ಹಾಗೆ ವಾತಾವರಣ ಸೃಷ್ಟಿ ಮಾಡುತ್ತಾರೆ ಎನ್ನುವುದು ಖಚಿತ. ಹಿಂದೂ, ಮುಸ್ಲೀಮರು ಎಂದು ಈ ದೇಶವನ್ನು ರಾಜ್ಯವನ್ನು ವಿಭಜಿಸುವುದಕ್ಕೆ ಬಿಜೆಪಿ ಕಾಯುತ್ತಿದೆ. ಈ ಸಮಾಜ ಒಟ್ಟಾಗಿ ಇರಬೇಕು. ಈ ಸಮಾಜದಲ್ಲಿ ಸಾಮರಸ್ಯ ಕಂಡುಕೊಂಡುಬಂದಿದೆ. ಈ ಸಮಾಜದಲ್ಲಿ ಸಾಮರಸ್ಯ ಉಳಿಯಬೇಕಾದರೇ ಕಾಂಗ್ರೆಸ್‌ ಅಧಿಕಾರದಲ್ಲಿರಬೇಕು. ಇಲ್ಲಿ ಹಿಂದೂ ಮುಸ್ಲೀಮರು ಅಂತೆಲ್ಲಾ ವೈಷಮ್ಯ ನಮಗೆ ಬೇಕಾಗಿಲ್ಲ. ನಾವೆಲ್ಲಾ ಒಬ್ಬರು ಒಬ್ಬರಿಗೇ ಆಗಬೇಕಾಗಿರುವವರು ಎಂದು ಅವರು ಹೇಳಿದರು.

ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ವಕ್ತಾರ ನಿಕೇತ್‌ ರಾಜ್‌ ಮೌರ್ಯ, ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಬೈಂದೂರು ಸುಕುಮಾರ್‌ ಶೆಟ್ಟಿ, ಕಾರ್ಕಳ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ, ಕಾಂಗ್ರೆಸ್‌ ನಾಯಕಿ ಮಮತಾ ಗಟ್ಟಿ, ಶೃಂಗೇರಿ ಶಾಸಕ ಟಿ. ಡಿ ರಾಜೇ ಗೌಡ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಬಿ ನಿಂಗಯ್ಯ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಉಡುಪಿ‌ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ರಾಜು ಪೂಜಾರಿ, ಕಾಂಗ್ರೆಸ್‌ ಮುಖಂಡರಾದ ಕೆ. ಪ್ರಕಾಶ್ಚಂದ್ರ ಶೆಟ್ಟಿ, ಗೌರಿ ದೇವಾಡಿಗ ಸೇರಿ, ಸುಬ್ರಹ್ಮಣ್ಯ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!