Friday, March 29, 2024

ಕುಂದಾಪುರ ಫ್ಲೈ ಓವರ್ ಕೆಳಗೆ ರಾಶಿ ಹಾಕಿದ ಗುಜುರಿ ವಸ್ತುಗಳ ತೆರವಿಗೆ ನಾಲ್ಕು ದಿನ ಗಡುವು


ಕುಂದಾಪುರ: ಶಾಸ್ತ್ರೀ ಸರ್ಕಲ್ ಬಳಿಯ ಮೇಲ್ಸೇತುವೆ ಕೆಳಗೆ ರಾಶಿ ಹಾಕಿದ ನಿರ್ಮಾಣ ಕಾಮಗಾರಿಯ ಗುಜುರಿ ವಸ್ತುಗಳ ತೆರವು ಮಾಡಲು ಕಂಪೆನಿಗೆ ಸೂಚಿಸಿದ್ದರೂ ಕೂಡಾ ತೆರವು ಮಾಡಿರಲಿಲ್ಲ. ಇವತ್ತು ತೆರವು ಮಾಡಿಸಲು ಮುಂದಾಗಿದ್ದು 4 ದಿನಗಳ ಕಾಲಾವಕಾಶ ನೀಡಲಾಗಿದೆ. ಸೆ.21ರ ಒಳಗೆ ಇಲ್ಲಿನ ಮೇಲ್ಸೇತುವೆಯ ಕೆಳಗೆ ರಾಶಿ ಹಾಕಲಾದ ಎಲ್ಲ ಗುಜುರಿ ವಸ್ತುಗಳನ್ನು ತೆರವು ಮಾಡಲು ಸೂಚಿಸಲಾಗಿದೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ. ತಿಳಿಸಿದರು.


ಕುಂದಾಪುರ ಮಿನಿವಿಧಾನಸೌಧದಲ್ಲಿ ನವಯುಗ ಸಂಸ್ಥೆಯ ಎಂಜಿನಿಯರ್, ಸಿಬಂದಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಫ್ಲೈ‌ಓವರ್, ಅಂಡರ್ ಪಾಸ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕುರಿತ ಕೆಲವೊಂದು ಸಮಸ್ಯೆಗಳ ಕುರಿತಂತೆ ನಡೆದ ಸಭೆ ನಡೆಸಿದ ಬಳಿಕ ಮಾತನಾಡಿದರು.


ಶಾಸ್ತ್ರಿ ಸರ್ಕಲ್ ಸುತ್ತಮುತ್ತಲಿನ ಹೆದ್ದಾರಿಯ ಮರು ಡಾಮರೀಕರಣ ಹಾಗೂ ಅಂಡಾರ್ ಪಾಸ್ ಗೆ ಸಂಬಂಧಿಸಿದ ಸಮಸ್ಯೆಗಳೆಲ್ಲವೂ ಈ ತಿಂಗಳಾಂತ್ಯದೊಳಗೆ ಇತ್ಯರ್ಥಪಡಿಸುವ ಭರವಸೆಯನ್ನು ನವಯುಗ ಸಂಸ್ಥೆಯ ಎಂಜಿನಿಯರ್ ಹಾಗೂ ಅಧಿಕಾರಿಗಳು ನೀಡಿದ್ದಾರೆ. ಶಾಸ್ತ್ರಿ ಸರ್ಕಲ್ ಆಸುಪಾಸಿನ ಹೆದ್ದಾರಿಯು ಸಂಪೂರ್ಣ ಹೊಂಡ- ಗುಂಡಿಗಳಿಂದ ಕೂಡಿದ್ದು, ಕೂಡಲೇ ಮರು ಡಾಮರೀಕರಣ ಮಾಡಲು ಸೂಚಿಸಲಾಗಿದೆ. ಅದಕ್ಕೆ ಮಳೆ ಕಡಿಮೆಯಾದ ಕೂಡಲೇ ಅಂದರೆ ಈ ತಿಂಗಳಾಂತ್ಯದೊಳಗೆ ಮರು ಡಾಮರೀಕರಣ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ ಎಂದರು.


ಸಭೆಯಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ತಹಶೀಲ್ದಾರ್ ಕಿರಣ್ ಗೌರಯ್ಯ, ಡಿವೈ‌ಎಸ್‌ಪಿ ಶ್ರೀಕಾಂತ್, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಎಸ್‌ಐಗಳಾದ ಸದಾಶಿವ ಗವರೋಜಿ, ಸುದರ್ಶನ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕಂದಾಯ ಅಧಿಕಾರಿ ದಿನೇಶ್, ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಮುಖಂಡರಾದ ಕಾಡೂರು ಸುರೇಶ್ ಶೆಟ್ಟಿ, ಸುನೀಲ್ ಶೆಟ್ಟಿ, ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ, ಸಂತೋಷ್ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿಯ ಕೆಂಚನೂರು ಸೋಮಶೇಖರ್ ಶೆಟ್ಟಿ, ಬಂಟರ ಸಂಘದ ಆವರ್ಸೆ ಸುಧಾಕರ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!