spot_img
Wednesday, March 25, 2026
spot_img

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಂದ ಮರವಂತೆ ಗ್ರಾ.ಪಂ. ಜಮಾಬಂದಿ

ಬೈಂದೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಬಯಸುವವರಿಗೆ ಉದ್ಯೋಗ ನೀಡದಿರುವುದು ಅಪರಾಧವೆನಿಸುತ್ತದೆ. ಗ್ರಾಮ ಪಂಚಾಯಿತಿಯು ಹೆಚ್ಚು ಜನರಿಗೆ ಉದ್ಯೋಗ ನೀಡುವ ಮೂಲಕ ಸಾಮುದಾಯಿಕ ಹಾಗೂ ವೈಯಕ್ತಿಕ ಆಸ್ತಿ ಸೃಷ್ಟಿಗೆ ಆದ್ಯ ಗಮನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಹೇಳಿದರು.


ಶನಿವಾರ ಮರವಂತೆ ಗ್ರಾಮ ಪಂಚಾಯಿತಿ ಜಮಾಬಂದಿ ನಡೆಸಿದ ಅವರು ಈ ಸೂಚನೆ ನೀಡಿದರು. ಮರವಂತೆ ಗ್ರಾಮ ಪಂಚಾಯಿತಿಯ ಒಟ್ಟು ಕಾರ್ಯನಿರ್ವಹಣೆಯನ್ನು ಮೆಚ್ಚಿಕೊಂಡ ಅವರು ಖಾತೆ ಬದಲಾವಣೆ ವಿಳಂಬ, ವಿವಿಧ ಯೋಜನೆಗಳ ಖಾತೆಗಳಲ್ಲಿ ಹಣದ ಉಳಿಕೆ, ಗ್ರಂಥಾಲಯ ಸಹಾಯಕಿಯ ವೇತನ ಬಾಕಿ, ಆಡಿಟ್ ಆಕ್ಷೇಪಗಳ ಪರಿಹಾರ ಕ್ರಮದ ವಿಳಂಬದಂತಹ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದರು. ಲೆಕ್ಕ ಪತ್ರಗಳನ್ನು ಓದುವ ಬದಲಿಗೆ ಹಾಜರಿರುವ ಸಾರ್ವಜನಿಕರಿಗೆ ಮನದಟ್ಟಾಗುವಂತೆ ಎಲ್‌ಇಡಿ ಪರದೆಯಲ್ಲಿ ಪ್ರದರ್ಶಿಸುವಂತೆ ಮಾಡಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ ಶೇರುಗಾರ್ ಜಮಾಬಂದಿ ವರದಿಯ ವಿವಿಧ ಭಾಗಗಳನ್ನು ಸಭೆಯ ಮುಂದಿರಿಸಿದರು.


ಹಾಜರಿದ್ದ ಮಾಜಿ ಅಧ್ಯಕ್ಷರಾದ ಎಸ್. ಜನಾರ್ದನ ಮರವಂತೆ, ಎಂ. ವಿನಾಯಕ ರಾವ್ ರಾಜ್ಯ ಸರ್ಕಾರನೀಡುವ ಶಾಸನ ಬದ್ಧ ಅನುದಾನ ಪೂರ್ಣ ಬಿಡುಗಡೆಯಾಗಬೇಕು, ಪಂಚಾಯಿತಿ ಅಂಗಡಿ ಕೋಣೆಗಳ ಬಾಡಿಗೆ ಅವಧಿ ಮುಗಿದಾಗ ಅವುಗಳನ್ನು ತೆರವು ಮಾಡುವ ಅಧಿಕಾರದ ಬಗ್ಗೆ ನಿಯಮ ರೂಪಿಸಬೇಕು, ಆಯವ್ಯಯ ಪತ್ರವನ್ನು ಮಾರ್ಚ್ ಅಂತ್ಯದೊಳಗೆ ತಾಲ್ಲೂಕು ಪಂಚಾಯಿತಿ ಅನುಮೋದಿಸಬೇಕು. ಎಸ್ಕ್ರೋ ಖಾತೆಯಿಂದ ಮಿಗತೆ ಹಣ ಹಿಂಪಡೆಯುವ ವಿಧಾನವನ್ನು ಸರಳಗೊಳಿಸಬೇಕು. ಗ್ರಾಮ ಪಂಚಾಯಿತಿ ನೇಮಕ ಮಾಡಿಕೊಂಡ ಸಿಬ್ಬಂದಿಗೆ ಅಗತ್ಯಕ್ಕೆ ತಕ್ಕಂತೆ ವೇತನ ನೀಡುವ ಅವಕಾಶ ಗ್ರಾಮ ಪಂಚಾಯಿತಿಗೆ ಇರಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಅವಕಾಶ ಕಲ್ಪಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇಲಾಖೆಯ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.


ಉಪಾಧ್ಯಕ್ಷ ಲೋಕೇಶ ಖಾರ್ವಿ, ಸದಸ್ಯರು, ತಾ. ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಶ್ರೀಕಾಂತ ನಾಯಕ್, ಉದ್ಯೋಗ ಖಾತರಿ ಎಂಜಿನಿಯರ್ ಪ್ರದೀಪ ಹೆಗ್ಡೆ, ಕಿರಿಮಂಜೇಶ್ವರ ಅಭಿವೃದ್ಧಿ ಅಧಿಕಾರಿ ರಾಜೇಶ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!