Sunday, September 8, 2024

ತೋಟಗಾರಿಕೆಯಲ್ಲಿ ಯಾಂತ್ರೀಕರಣಕ್ಕೆ ಸಹಾಯಧನ


ಉಡುಪಿ: ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಉಪ ಅಭಿಯಾನದಡಿ ಕರ್ನಾಟಕ ರಾಜ್ಯದಲ್ಲಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಇದರನ್ವಯ ಪ.ಜಾತಿ/ಪ.ಪಂಗಡ, ಮಹಿಳಾ ಫಲಾನುಭವಿಗಳು, ಸಣ್ಣ ಮತ್ತು ಅತೀ ಸಣ್ಣ ರೈತ ಫಲಾನುಭವಿಗಳು ತಾವು ಅನುಮೋದಿತ ಸಂಸ್ಥೆಯಿಂದ ಖರೀದಿಸಿದ ಉಪಕರಣ ಹಾಗೂ ಯಂತ್ರಗಳಿಗೆ ಶೇ.50 ಹಾಗೂ ಇತರೇ ವರ್ಗದ ಫಲಾನುಭವಿಗಳು ಶೇ.40 ರಷ್ಟು ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.


ಹಿಂದಿನ ವರ್ಷಗಳಲ್ಲಿ ತೋಟಗಾರಿಕೆ, ಕೃಷಿ, ರೇಷ್ಮೆ ಪಶುಪಾಲನೆ ಇಲಾಖೆಯಿಂದ ಮತ್ತು ಕಾಫಿಬೋರ್ಡ್ ಹಾಗೂ ಇತರೇ ಸಂಸ್ಥೆಗಳಿಂದ ಇದೇ ಯೋಜನೆಯಡಿ ಅಥವಾ ಇನ್ನಿತ್ತರ ರೀತಿಯಾದ ಯೋಜನೆಗಳಡಿ ಸಹಾಯಧನ ಪಡೆದಿದ್ದಲ್ಲಿ ಅಂತಹ ರೈತರು ಮತ್ತೊಮ್ಮೆ ಸಹಾಯಧನ ಪಡೆಯಲು ಅರ್ಹರಾಗಿರುವುದಿಲ್ಲ.


ಸಹಾಯಧನ ಪಡೆಯಲು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಉಡುಪಿ 0820-2531950/0820-2522837, ಕುಂದಾಪುರ 08254-230813, ಕಾರ್ಕಳ 08258-230288 ನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!