16.6 C
New York
Friday, September 30, 2022

Buy now

spot_img

ಸಚಿವ ಸಂಪುಟದಲ್ಲಿ ಉಡುಪಿ ಜಿಲ್ಲೆಗೆ ಅವಕಾಶ ದೊರೆಯಲಿ


-ಸುಬ್ರಹ್ಮಣ್ಯ ಪಡುಕೋಣೆ (ಸಂಪಾದಕ)


ರಾಜ್ಯದ ರಾಜಕೀಯದಲ್ಲಿ ಬದಲಾವಣೆಯ ಘಟನೆಗಳು ಸಂಭವಿಸುತ್ತಲೇ ಇದೆ. ೧೪ನೆ ವಿಧಾನಸಭೆ ಈಗ ೩ನೆಯ ಮುಖ್ಯ ಮಂತ್ರಿಯನ್ನು ಕಾಣುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದ ಕಾರಣ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಯಿತು. ಕಾಂಗ್ರೆಸ್ ಜೆಡಿ‌ಎಸ್ ಮೈತ್ರಿಕೂಟ ಸರಕಾರ ರಚನೆ ಮಾಡಿತು. ಕಡಿಮೆ ಸ್ಥಾನವನ್ನು ಹೊಂದಿರುವ ಜೆಡಿ‌ಎಸ್‌ನ ಕುಮಾರಸ್ವಾಮಿ ಮುಖ್ಯ ಮಂತ್ರಿಯಾದರು. ಈ ಸಮ್ಮಿಶ್ರ ಸರಕಾರ ಪೂರ್ಣಾವಧಿಯನ್ನು ಪೂರೈಸಲಿಲ್ಲ. ಸರಕಾರವನ್ನು ಬೀಳಿಸಲು ಬಿಜೆಪಿ ಸತಾಯಗತಾಯ ಪ್ರಯತ್ನಿಸಿ ಅಪರೇಶನ್ ಕಮಲದ ಮೂಲಕ ಸರಕಾರವನ್ನು ಕೆಡವಲಾಯಿತು. ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪನವರು ಪ್ರಮುಖ ಕಾರಣರಾದರು. ಅದರಂತೆ ಅವರು ರಾಜ್ಯದ ಮುಖ್ಯಮಂತ್ರಿಯಾದರು. ಉಳಿದ ಅವಧಿಯನ್ನು ಅವರು ಪೂರೈಸುತ್ತಾರೆಂಬ ನಿರೀಕ್ಷೆ ಎಲ್ಲರಲ್ಲಿ ಇತ್ತು. ಆದರೆ ಬಿಜೆಪಿಯಲ್ಲೆ ಮುಖ್ಯಮಂತ್ರಿ ಬದಲಾವಣೆಗೆ ವ್ಯಾಪಕ ಕೂಗು ಕೇಳಿ ಬರಲಾರಂಭಿಸಿತು. ಈ ನಿಟ್ಟಿನಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಯ್ತು. ಯಡಿಯೂರಪ್ಪನವರನ್ನು ಬದಲಾಯಿಸಬೇಕೆಂಬ ಪಟ್ಟು ಬಿಜೆಪಿ ಗಟ್ಟಿಯಾಯಿತು. ಅದು ಬಿಜೆಪಿಯ ಹೈಕಮಾಂಡ್ ಅಂಗಳದವರೆಗೂ ಹೋಗಿ ಕೊನೆಗೂ ಅದು ಯಶಸ್ವಿಯಾಯಿತು. ಕೊನೆಗೂ ಯಡಿಯೂರಪ್ಪ ರಾಜೀನಾಮೆ ನೀಡಿದರು. ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿರು. ಅನೇಕ ಗೊಂದಲ ಮತ್ತು ಸವಾಲುಗಳ ನಡುವೆಯೇ ಬಸವರಾಜ ಬೊಮ್ಮಾಯಿಯವರ ಆಯ್ಕೆ ನೆಡೆಯಿತು. ಅದನ್ನು ಎದುರಿಸಬೇಕಾದ ಅನಿವಾರ್ಯತೆ ಬೊಮ್ಮಾಯಿಯವರಿಗಿದೆ. ಅವರು ಈ ಹಿಂದೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಅದು ಕೂಡ ಉಡುಪಿ ಜಿಲ್ಲೆಗೆ ಹೆಮ್ಮೆಯಾಗಿದೆ. ಉಡುಪಿ ಜಿಲ್ಲೆ ಬಿಜೆಪಿಯನ್ನು ವ್ಯಾಪಕವಾಗಿ ಬೆಂಬಲಿಸಿದೆ. ಜಿಲ್ಲೆಯಲ್ಲಿ ಐವರು ಶಾಸಕರುಗಳು ಬಿಜಿಪಿ ಪಕ್ಷದವರಾಗಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯರು ಇದ್ದಾರೆ. ಈಬಾರಿ ಉಡುಪಿ ಜಿಲ್ಲೆಗೆ ಸಚಿವ ಸ್ಥಾನವನ್ನು ನೀಡಬೇಕಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ಶಾಸಕರಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡ ಬೇಕಾಗಿದೆ. ಸರಕಾರದಲ್ಲಿ ಉಡುಪಿ ಜಿಲ್ಲೆಗೆ ಹೆಚ್ಚು ಪ್ರಾತಿನಿದ್ಯ ಸಿಗಲಿ. ಹಾಲಾಡಿ ಶ್ರೀನಿವಾಸ ಶೆಟ್ಟರು ಕುಂದಾಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಅವರು ಐದು ಬಾರಿ ಶಾಸಕರಾಗಿದ್ದಾರೆ. ಈವರೆಗೂ ಅವರನ್ನು ಗುರುತಿಸಲಿಲ್ಲ. ಬಿಜೆಪಿ ಸರಕಾರ ಬಂದಾಗಲೆಲ್ಲ ಅವರನ್ನು ಕಡೆಗಣಿಸಲಾಗಿದೆ. ರಾಜಕೀಯದಲ್ಲಿ ಈವರೆಗೂ ಕುಂದಾಪುರ ಕ್ಷೇತ್ರಕ್ಕೆ ಚಿವ ಸ್ಥಾನ ಸಿಗಲಿಲ್ಲ. ಈಬಾರಿಯಾದರೂ ಈ ಅವಕಾಶ ಸಿಗಬಹುದೇ ಎಂದು ಕಾಣಬೇಕಾಗಿದೆ. ಉಡುಪಿ ಜಿಲ್ಲೆಗೆ ಹೆಚ್ಚು ಅವಕಾಶಗಳು ಬೊಮ್ಮಾಯಿ ಸರಕಾರದಲ್ಲಿ ದೊರೆಯಲಿ. ಆ ನಿಟ್ಟಿನಲ್ಲಿ ಆಳುವ ಪಕ್ಷ ಉಡುಪಿ ಜಿಲ್ಲೆಯನ್ನು ಗುರುತಿಸಲಿ.

Related Articles

Stay Connected

21,961FansLike
3,505FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!