Friday, March 29, 2024

ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾದ ಸರಕಾರ


ಸುಬ್ರಹ್ಮಣ್ಯ ಪಡುಕೋಣೆ, ಸಂಪಾದಕ

ದೇಶದ ಆಳುವ ವರ್ಗಗಳು ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ಗಮನಿಸಬಹುದಾಗಿದೆ. ಕನಿಷ್ಟ ಆಮ್ಲಜನಕವನ್ನು ಪೂರೈಸಲಾಗದಷ್ಟು ಅಸಾಯಕತೆ ಹೊಂದಿದೆ. ದೇಶದ ಎಲ್ಲಾ ಕಡೆ ಕೊರೊನಾ ಬಾಧಿತರು ಅತ್ಯಂತ ಕಷ್ಟದಲ್ಲಿರುವುದನ್ನು, ಅವರಿಗೆ ಕನಿಷ್ಟ ಆರೋಗ್ಯ ಸೇವೆ ದೊರೆಯದಿರುವುದನ್ನು ನೋಡ ಬಹುದಾಗಿದೆ. ಇದಕ್ಕೆಲ್ಲ ಆಳುವ ವರ್ಗಗಳ ಬೇಜವಬ್ದಾರಿ ನೀತಿಯೆ ಕಾರಣವಾಗಿದೆ. ಕೊರೊನಾದಿಂದ ಮೃತಪಟ್ಟವರು ಬಹುತೇಕ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಅವರಿಗೆ ಸೂಕ್ತ ಸಮಯದಲ್ಲಿ ಗುಣ ಮಟ್ಟದ ಚಿಕಿತ್ಸೆ ದೊರೆಯುವುದಿಲ್ಲ. ಅವರಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ಸಾವನ್ನಪ್ಪುತ್ತಿದ್ದಾರೆ. ಸರಕಾರ ಕೊರೊನಾ ನಿಯಂತ್ರಿಸುವಲ್ಲಿ ಯಾವುದೇ ಸಿದ್ದತೆಯನ್ನು ಸಮರ್ಪಕವಾಗಿ ಮಾಡಿಕೊಂಡಿಲ್ಲ. ಕೊರೊನಾ ಒಂದನೆ ಅಲೆ ಬಂದಾಗ ದೇಶದ ನಾಗರಿಕರನ್ನು ಅಸಹ್ಯವಾಗಿ ಕಾಣಲಾಯಿತು. ಹಿಂದೆ ಮುಂದೆ ನೋಡದೆ ಲಾಕ್‌ಡೌನ್ ಹೇರಲಾಯಿತು. ಇದರಿಂದಾಗಿ ಲಕ್ಷಾಂತರ ಮಂದಿ ಸಾವನ್ನಪ್ಪಿದರು. ಹಸಿವಿನಿಂದ ಬಳಲಿದರು. ಸಾಕಷ್ಟು ಆರ್ಥಿಕ ಹೊಡೆತ ಉಂಟಾಯಿತು. ಆದರೂ ಕೂಡ ಸರಕಾರ ಕರೊನಾ ನಿಯಂತ್ರಣದ ಬಗ್ಗೆ ಯೋಚನೆ ಮಾಡಲಿಲ್ಲ. ಜನರ ನೆರವಿಗೆ ಬರಲಿಲ್ಲ. ಒಂದನೆ ಅಲೆಯನ್ನು ಸಮರ್ಪಕವಾಗಿ ಎದುರಿಸಿಲ್ಲ ಎಂಬುದನ್ನು ಸರಿಯಾದ ರೀತಿಯಲ್ಲಿ ಪರಿಣಿತರು ಹೇಳಿದ್ದಾರೆ. ಅಲ್ಲದೆ ಎರಡನೆ ಅಲೆಯ ಮಾಹಿತಿಯನ್ನು ಕೊಟ್ಟಿದ್ದಾರೆ. ಆದರೂ ಸರಕಾರ ಅದನ್ನು ಗಂಭೀರವಾಗಿ ತೆಗೆದುಕೊಲ್ಳಲಿಲ್ಲ. ಲಕ್ಷಾಂತರ ಜನರನ್ನು ಸೇರಿಸಿ ಸಭೆ ಸಮಾರಂಭಗಳನ್ನು ನೆಡೆಸಲಾಯಿತು. ಚುನಾವಣಾ ಪ್ರಕ್ರಿಯೆಗಳು ಜರುಗಿತು. ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಅದರಿಂದಾಗಿ ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಜನರ ಪ್ರಾಣ ಉಳಿಸಲು ಸಾಧ್ಯವಾಗದೆ ಅಸಾಯಕವಾಗಿ ಸರಕಾರ ಕುಳಿತಿದೆ. ಹಾದಿ ಬೀದಿಗಳಲ್ಲಿ ಜನ ಸಾವನ್ನಪ್ಪುತ್ತಿದಾರೆ. ಕರ್ನಾಟಕದಲ್ಲ್ಲೂ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಚಾಮರಾಜನಗರದ ಒಂದು ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ೨೮ ಜನ ಮೃತ ಪಟ್ಟಿದ್ದಾರೆ. ಅದು ಆಕ್ಸಿಜನ್ ಸಿಗದೆ ಒದ್ದಾಡಿ ಮೃತ ಪಟ್ಟಿದ್ದಾರೆ. ಈ ಘಟನೆ ಸರಕಾರದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಒಂದೆ ಕಡೆ ಇಷ್ಟೊಂದು ದೊಡ್ಡ ಪ್ರಮಾಣದ ಅನಾಹುತ ನೆಡೆದಿದೆ. ಇದೊಂದು ಸರಕಾರಿ ಪ್ರಾಯೋಜಿತ ಕೊಲೆ ಎಂದೇ ಬಿಂಬಿಸಲಾಗುತ್ತಿದೆ. ಅದೆ ರೀತಿ ಆಕ್ಸಿಜನ್ ಸಿಗದೆ ನೂರಾರು ಜನ ರಾಜ್ಯ ಬೇರೆ ಬೇರೆ ಜಿಲ್ಲೆಗಳಲ್ಲಿ ಅಸು ನೀಗಿದ್ದಾರೆ. ಸರಕಾರ ಕೊರೊನಾವನ್ನು ನಿಗ್ರಹಿಸುವಲ್ಲಿ ಸರಿಯಾದ ಮಾರ್ಗಗಳನ್ನು ಅನುಸರಿಸಲಿಲ್ಲ. ದಿನವೂ ನೂರಾರು ಜನರು ಆಮ್ಲಜನಕ ಸಿಗದೆ ಸಾಯುತ್ತಿದ್ದಾರೆ. ಬೆಂಗಳೂರು ನಗರ ಒಂದರೆ ರಲ್ಲೆ ದಿನಕ್ಕೆ ನೂರಕ್ಕೂ ಮಿಕ್ಕಿ ಸಾವು ಸಂಭವಿಸುತ್ತದೆ. ಸರಕಾರ ಇರುವ ವ್ಯವಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಅಲ್ಲೂ ಕೂಡ ಬೇಕಾ ಬಿಟ್ಟಿಯಾಗಿ ಲೂಟಿಯಾಗುತ್ತಿದೆ. ರಾಜ್ಯದ ಆಡಳಿತ ವರ್ಗ ಆಡಳಿತ ಯಂತ್ರವನ್ನು ಬಿಗಿಗೊಳಿಸಲಿಲ್ಲ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಪಕಲೂಟಿ ನೆಡೆಯುತ್ತಿದೆ. ಕರೊನಾ ನಿಯಂತ್ರಿಸುವಲ್ಲಿ ವಿಫಲವಾದ ಸರಕಾರ ಈಗ ಮಾತೆತ್ತಿದರೆ ಲಾಕ್‌ಡೌನ್ ಬಗ್ಗೆ ಮಾತಾಡುತ್ತಿದೆ. ಅದನ್ನು ಬಿಟ್ಟು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈಗಿರುವ ವ್ಯವಸ್ಥೆಯನ್ನು ಸಮರ್ಪಪವಾಗಿ ಬಳಸಿಕೊಂಡಿಲ್ಲ ಎಂಬುದನ್ನು ಗುರುತಿಸ ಬಹುದಾಗಿದೆ. ಈ ಗಾಗಲೇ ಜನ ಸರಕಾರದ ವಿಫಲತೆಯನ್ನು ಬೊಟ್ಟುಮಾಡಿ ತೋರಿಸುತ್ತಿದ್ದಾರೆ. ಕೂಡಲೆ ಸರಕಾರ ಸಮರೋಪಾದಿಯಲ್ಲಿ ಕರೊನಾ ಮಣಿಸಲು ಮುಂದಾಗಲಿ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!