19 C
New York
Monday, June 14, 2021

Buy now

spot_img

ಮೇ.1: ವಿಶ್ವ ಕಾರ್ಮಿಕರ ದಿನ

-ವೆಂಕಟೇಶ್ ಕೋಣಿ
ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಕೃಷಿಕೂಲಿಕಾರರ ಸಂಘ

ಅಂದಿನ ಮೌನ-ಇಂದು ಶಕ್ತಿಶಾಲೀ ಧ್ವನಿಯಾಗಿದೆ. ವಿಶ್ವದ ಕಾಮಿಕರೇ ಒಂದಾಗಿ ನಿಮಗೆ ಕಳೆದುಕೊಳ್ಳಲು ಬೇರೇನೂ ಇಲ್ಲ. ನಿಮ್ಮ ಕಾಲಿಗೆ ಬಿಗಿದಿರುವ ಸಂಕಟಗಳ ಸರಪಳಿ ಹೊರತು! ಆದರೆ ಗೆಲ್ಲಲ್ಲೊಂದು ಜಗತ್ತೇ ಇದೆ! ಸಂಪತ್ತನ್ನು ಸೃಷ್ಟಿಸುವ ಕಾಮಿಕರಿಗೆ ಬೆವರಿನ ಪಾಲು ಸಿಗಲಿ. ಕಾಮಿಕರಿಲ್ಲದ ಜಗತ್ತು ಸಾಧ್ಯವೇ ಇಲ್ಲ! ಸಾಮಾಜಿಕ ನ್ಯಾಯ, ಶಾಂತಿ ಮತ್ತು ಜನಗಳಿಗೆ ಉತ್ತಮ ಜೀವನ ಪಡೆಯಲು ಹೋರಾಡುವ ಪಣ. ಮೇ ದಿನ-2021 ರಂದು ವರ್ಗ ಹೋರಾಟ ಮತ್ತು ಅಂತರ್ ರಾಷ್ಟ್ರೀಯ ಸೌಹಾರ್ದತೆಯನ್ನು ಬಲಪಡಿಸುವ ನಮ್ಮ ಪ್ರತಿಜ್ಞೆಯನ್ನು ಈಡೇರಿಸಬೇಕಾದ ಈ ದಿನದಂದು ಸಮಸ್ತ ಕಾರ್ಮಿಕ ವರ್ಗಕ್ಕೆ ಕ್ರಾಂತಿಕಾರಿ ಶುಭಾಶಯಗಳು. ಮೇ ದಿನಾಚರಣೆ ಜಗತ್ತಿನ ಎಲ್ಲಾ ದೇಶಗಳ ದುಡಿಯುವ ಜನ ಆಚರಿಸುವ ಹೆಮ್ಮೆಯ ದಿನವಾಗಿದೆ.
ಮೇ ದಿನವನ್ನು ದೇಶ, ಭಾಷೆ, ಧರ್ಮಗಳ, ಗಡಿಗಳ ಅಡೆತಡೆ ಇಲ್ಲದೆ ಆಚರಿಸಲಾಗುತ್ತಿದೆ. ಮೇ ದಿನಾಚರಣೆಯು ವಿಶ್ವದ ಕಾರ್ಮಿಕರೆಲ್ಲ ಒಂದೇ ಎಂಬ ಸಂದೇಶದ ಪರಂಪರೆಯನ್ನು ಎತ್ತಿ ಹಿಡಿಯುವಂತಾಗಿದೆ.

ಇಂತಹ “ಮೇ ದಿನ” ಕಾರ್ಮಿಕರ ದಿನವಾಗಿಯೇ ಜಗತ್ತಿನ ಗಮನ ಸೆಳೆದಿದೆ. ಈ ದಿನಾಚರಣೆಗೆ ಮೂಲ ಆಧಾರ 1886 ಮೇ ಒಂದರಂದು ನಡೆದ ಐತಿಹಾಸಿಕವಾದ ಚಿಕಾಗೋ ನಗರ ಹಾಗೂ ಅಮೆರಿಕಾ ದೇಶದ ಕಾರ್ಮಿಕರ ಚಳವಳಿಯ ಮೈಲುಗಲ್ಲಾದ ಹೋರಾಟ. ಮೇ 1886 ರಲ್ಲಿ ಬಂಡವಾಳಗಾರರ ಸಂಚಿಗೆ ಬಲಿಯಾಗಿ 4 ಸಂಗಾತಿಗಳು ಹುತಾತ್ಮರಾಗಿದ್ದು, ಜಗತ್ತಿನ ಎಲ್ಲಾ ದುಡಿಯುವ ಜನರ ಬದುಕಿನ ಬದಲಾವಣೆಗಾಗಿ. 11ನೇ ನವಂಬರ್, 1887 ರಂದು ಆ ಧೀರ ಹೋರಾಟಗಾರರಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ಸಂದರ್ಭದಲ್ಲಿ ಘೋಷಣೆ ಮಾಡಿದ್ದು, “ನಮ್ಮ ಈ ಧ್ವನಿಯನ್ನು ನೀವು ಉರುಳಿಗೆ ಬಿಗಿಯಬಹುದು ಆದರೆ ಒಂದು ದಿನ ನಮ್ಮ ಈ ಮೌನವೇ, ಈ ದಿನ ನೀವು ಉರುಳು ಬಿಗಿದ ಧ್ವನಿಗಳಿಗಿಂತ ಭಾರೀ ಶಕ್ತಿಶಾಲಿಯಾಗುತ್ತದೆ.” ಎಂದು ವೀರ ಮರಣದಿಂದ ಹುತಾತ್ಮರಾಗಿದ್ದಾರೆ.

ಎಲ್ಲಾ ಬಂಡವಾಳಶಾಹಿ ಶೋಷಣೆ ವಿರುದ್ಧ ಹೋರಾಟದ ಪರಂಪರೆಯ ದಿನವಾದ ಈ ಸಂದರ್ಭ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಬಂಡವಾಳ ಶಾಹಿ ಶಕ್ತಿಗಳು ಕೋಮುವಾದದ ಮೂಲಕ ಜನತೆಯ ದುಡಿಯುವ ಜನರನ್ನು ಧರ್ಮ, ಜಾತಿ ಹೆಸರಲ್ಲಿ ಒಡೆದು ಆಳುವ ಕುತಂತ್ರ ವ್ಯಾಪಕವಾಗಿದೆ. ಕೋಮುವಾದಿ ಶಕ್ತಿಗಳು ದುಡಿಯುವ ಜನರ ಅಹಾರದ ಅಭ್ಯಾಸಗಳನ್ನು ಕೋಮುವಾದೀಕರಿಸಿ ಗಲಭೆಗಳನ್ನು ಉಂಟು ಮಾಡುತ್ತಿವೆ. ಅಲ್ಲದೇ ಬಹುರಾಷ್ಟ್ರೀಯ ಸಂಸ್ಥೆಗಳ ಲಾಭ ಹೆಚ್ಚಿಸಲು ಮುಂಗಡ ವ್ಯಾಪಾರ ನೀಡುವ ಮೂಲಕ ಬೆಲೆ ಏರಿಕೆಗೆ ನಾಂದಿ ಹಾಡಿವೆ. ಅಲ್ಲದೆ ಕಾರ್ಮಿಕ ವಿರೋಧಿ ಕಾನೂನು ತಿದ್ದುಪಡಿಗೆ ಹವಣಿಸಲಾಗುತ್ತಿದೆ. ಈ ಬಾರಿಯ ಮೇ ದಿನವು ಕಾರ್ಮಿಕ ಐಕ್ಯತೆ ಸಮಗ್ರತೆಯ ರಕ್ಷಣೆಗಾಗಿ ಕೋಮುವಾದಿ ಶಕ್ತಿಗಳನ್ನು ಪ್ರತಿನಿಧೀಕರಿಸುವ ಸರಕಾರವನ್ನು ಮೂಲೆ ಗುಂಪು ಮಾಡಲು ಹಾಗೂ ಖಾಸಗೀಕರಣ, ಬೆಲೆ ಏರಿಕೆ ನೀತಿಗಳನ್ನು ಹಿಮ್ಮೆಟ್ಟಿಸುವ ಹೋರಾಟದ ಸ್ಪೂರ್ತಿಯೊಂದಿಗೆ ಮುನ್ನಡೆಯೋಣ?

ಭಾರತದಲ್ಲಿ ಮೇ ದಿನದ ಆರಂಭ: ಭಾರತದಲ್ಲಿ “8 ಗಂಟೆಗಳ ದಿನ”ದ ಹೋರಾಟ ದೀರ್ಘ ಮತ್ತು ಕಷ್ಟಕರ ವಾಗಿತ್ತು-ತೀವ್ರ ಹೋರಾಟಗಳಿಂದ ಕೆಲಸದ ಗಂಟೆಗಳನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡಲು ಸಾಧ್ಯವಾಯಿತು. 1884ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ರೈಲು ಹಳಿ ಹಾಕಲ್ಪಟ್ಟಿತು. ಆದರೆ 8 ವರ್ಷದೊಳಗೆ ಅಂದರೆ 1892 ರಲ್ಲಿ ಹೌರಾ ನಿಲ್ದಾಣದಲ್ಲಿ 1200 ರೈಲ್ವೆ ಕಾರ್ಮಿಕರು “8 ಗಂಟೆ ಕೆಲಸದ ದಿನ” ಬೇಡಿಕೆಯ ಮೇಲೆ ಮುಷ್ಕರ ನಡೆಸಿದರು.ಈ ಮುಷ್ಕರ ಭಾರತೀಯ ಕಾರ್ಮಿಕರ ಮೊಟ್ಟ ಮೊದಲ ಮುಷ್ಕರ ಹಾಗೂ ಅಂತರ್ ರಾಷ್ಟ್ರೀಯ ಅಂದೋಲನದಲ್ಲೇ 8 ಗಂಟೆ ಕೆಲಸದ ಕುರಿತಾದ ಎರಡನೇ ಮುಷ್ಕರವಾಗುತ್ತದೆ. ಭಾರತದಲ್ಲಿ ಮೊತ್ತ ಮೊದಲ ಮೇ ದಿನಾಚರಣೆ ನಡೆದದ್ದು 1923 ರಲ್ಲಿ ಮದ್ರಾಸ್ ಕಡಲ ತೀರದಲ್ಲಿ ಕಾರ್ಮಿಕರ ಮುಖಂಡ ಸಿಂಗಾರವೇಲು ಚೆಟ್ಟಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಮೇ ದಿನಾಚರಣೆ, ಈ ಮಹಾನ್ ದಿನವನ್ನು ಅಧಿಕೃತ ರಜಾ ದಿನವಾಗಿ ಘೋಷಿಸ ಬೇಕು ಎಂದು ಒತ್ತಾಯಿಸಿತು. 1925 ರ ಮೇ ದಿನದಂದು ಲಂಡನ್‍ನ ಹೈಡ್ ಪಾರ್ಕ್‍ನಲ್ಲಿ ನಡೆದ ಮೇ ದಿನಾಚರಣೆಯಲ್ಲಿ ಏಷ್ಯನ್ ರ ಒಂದು ಗುಂಪು ಭಾಗವಹಿಸಿತು.ಅಲ್ಲಿ ಭಾರತ ವಿಮೋಚನೆಯ ಬೇಡಿಕೆಯೂ ಕೇಳಿ ಬಂತು. 1926 ರಲ್ಲಿ ಅದೇ ಸ್ಥಳದಲ್ಲಿ ನಡೆದ ಮೇ ದಿನಾಚರಣೆಯಲ್ಲಿ ಭಾರತದ ಹಡಗು ಕಾರ್ಮಿಕರ ಸಂಘಗಳ ಪ್ರತಿನಿಧಿಗಳೂ ಭಾಗವಹಿಸಿದರು. ಏಐಟಿಯುಸಿ ಕರೆಯ ಮೇರೆಗೆ 1929 ರಲ್ಲಿ ಕಲ್ಕತ್ತ, ಮುಂಬೈ, ಮದ್ರಾಸ್ ಮುಂತಾದ ಹಲವು ದೊಡ್ಡ ನಗರಗಳಲ್ಲಿ ಮೇ ದಿನಾಚರಣೆ ನಡೆಯಿತು. ಅಂದಿನಿಂದ ಪ್ರತೀ ವರ್ಷ ದೇಶದ ಎಲ್ಲೆಡೆ ಮೇ ದಿನಾಚರಣೆಯ ಪರಂಪರೆ ಬೆಳೆಯಿತು.

ಮೇ ದಿನ ಬಗ್ಗೆ ಲೆನಿನ್ 1, ಮೇ, 1900ರಂದು ಎಂಟು ಗಂಟೆಯ ದುಡಿಯುವ ದಿನದ ಬೇಡಿಕೆ ಎಲ್ಲಾ ಕಾರ್ಮಿಕ ವರ್ಗದ ಬೇಡಿಕೆ. ಇದು ಕೆಲವು ಮಾಲಕರೆದುರು ಕೆಲವು ಕಾರ್ಮಿಕ ಇಟ್ಟಿರುವ ಬೇಡಿಕೆಯಲ್ಲ. ಸದ್ಯದ ಸಮಸ್ತ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯ ಪ್ರತಿನಿಧಿಗಳಾದ ಪ್ರಭುತ್ವದ ಅಧಿಕಾರಿಗಳ ಸಮಸ್ತ ಬಂಡವಾಳಶಾಹಿ ವರ್ಗದ ಉತ್ಪಾದನಾ ಸಾಧನಗಳ ಒಡೆಯರ ಎದುರು ಇಟ್ಟಿರುವ ಬೇಡಿಕೆ ಇದು. ಇದು ಅಂತರ್ ರಾಷ್ಟ್ರೀಯ ಸಮಾಜವಾದೀ ಅಂದೋಲನದೊಂದಿಗೆ ಐಕ್ಯ ವಾಗುವ ಒಂದು ಘೋಷಣೆ. ಕಾರ್ಮಿಕರು ಈ ಬೇಡಿಕೆಯನ್ನು ಪುಕ್ಕಟೆ ರೈಲು ಟಿಕೇಟು ಕಾವಲುಗಾರನ ವಜಾ ಮುಂತಾದ ಬೇಡಿಕೆಯ ಮಟ್ಟಕ್ಕೆ ಇಳಿಸದಂತೆ ಮಾಡಬೇಕಾದರೆ ಅವರು ಈ ವ್ಯತ್ಯಾಸವನ್ನು ಅರ್ಥಮಾಡಿ ಕೊಳ್ಳುವಂತೆಮಾಡಬೇಕು.

ವರ್ಷವಿಡೀ ಕಾರ್ಮಿಕರು ಒಂದೆಡೆ ಒಮ್ಮೆ, ಇನ್ನೊಂದೆಡೆ ಇನ್ನೊಮ್ಮೆ ವಿಧ ವಿಧವಾದ ಭಾಗಶಃ ಬೇಡಿಕೆಗಳನ್ನು ತಮ್ಮ ಮಾಲೀಕರ ಮುಂದಿಟ್ಟು ಅದಕ್ಕಾಗಿ ಹೋರಾಡುತ್ತಾರೆ. ಕಾರ್ಮಿಕರಿಗೆ ಈ ಹೋರಾಟಗಳಲ್ಲಿ ನೆರವು ನೀಡುವಾಗ ಸಮಾಜವಾದಿಗಳು ಸದಾ ಈ ಹೋರಾಟಗಳಿಗೂ ಎಲ್ಲಾ ದೇಶಗಳ ಕಾರ್ಮಿಕ ವರ್ಗದ ವಿಮೋಚನಾ ಹೋರಾಟಗಳಿಗೂ ಇರುವ ಸಂಬಂಧವನ್ನು ವಿವರಿಸಬೇಕು. ಮತ್ತು ಮೇ ದಿನ, ತಾವು ಈ ಸಂಬಂಧವನ್ನು ಅರಿತುಕೊಂಡಿದ್ದೇವೆ ಎಂದು ಕಾರ್ಮಿಕರು ಘೋಷಿಸುವ ಹಾಗೂ ಧೃಡ ನಿರ್ಧಾರದಿಂದ ಈ ಹೋರಾಟದಲ್ಲಿ ಸೇರಿಕೊಳ್ಳುತ್ತೇವೆ ಎಂದು ಸಾರುವ ದಿನವಾಗಬೇಕು.

Related Articles

Stay Connected

21,961FansLike
2,812FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!