Friday, April 19, 2024

ಸಾಹಿತ್ಯ ಹೊತ್ತಗೆ ಹೊತ್ತು ರಾಜ್ಯ ಸುತ್ತಿದ ಲೇಖಕಿ ಅರ್ಚನಾ ಆರ್ಯ


ಕುಂದಾಪುರ: ವೃತ್ತಿಯಲ್ಲಿ ಕನ್ನಡ ಉಪನ್ಯಾಸಕಿ, ಪ್ರವೃತ್ತಿಯಲ್ಲಿ ಲೇಖಕಿ, ಕೋರೋನಾ ದಿಗ್ಬಂಧನ ಸಮಯದಲ್ಲಿ ಕಾಲಹರಣ ಮಾಡದೇ ಸಮಯದ ಸದ್ಭಳಕೆ ಮಾಡಿಕೊಂಡ ಇವರು ಕೃತಿಯೊಂದನ್ನು ರಚಿಸಿದರು. ‘ಆಹ್ನಿಕ’ ಎನ್ನುವ ತನ್ನ ಪ್ರಥಮ ಕೃತಿಯನ್ನು ವಿಭಿನ್ನ ರೀತಿಯಲ್ಲಿ ಪರಿಚಯಿಸುವ ಸಂಕಲ್ಪ ಮಾಡಿದರು. ಅರಳಿದ ಸಾಹಿತ್ಯದ ಹೊಂಗನಸನು ವಿಕಸನಕ್ಕೆ ರಾಜ್ಯದ ಪ್ರಮುಖ ಲೇಖಕರು, ಸಾಹಿತ್ಯಸ್ತಕರ ಭೇಟಿ ಮಾಡಿ ಕೃತಿ ನೀಡಿ ಖುಷಿ ಪಟ್ಟರು.


ಆಹ್ನಿಕ ಕವನ ಸಂಕಲನ. ಲೇಖನಗಳು ಕೂಡಾ ಇದರಲ್ಲಿವೆ. ದಿನನಿತ್ಯದ ದಿನಚರಿಯಲ್ಲಿ ಕಂಡ ಅನುಭವಗಳನ್ನು ಅತ್ಯಂತ ಸುಂದರವಾಗಿ ಕ್ರತಿಯಲ್ಲಿ ಪಡಿಮೂಡಿಸಿದ್ದಾರೆ.


ಬೆಂಗಳೂರಿನವರಾದ ಅರ್ಚನಾ ಆರ್ಯ ಸಾಹಿತ್ಯದ ಪ್ರಚಾರಕ್ಕೆ ಆರಿಸಿಕೊಂಡಿದ್ದು ತನ್ನ ಸ್ಕೂಟಿಯನ್ನು. ಅಪ್ರತಿಮ ಛಲಗಾತಿ, ಧೈರ್ಯವಂತೆ, ಉತ್ಸಾಹದ ಕಾರಂಜಿಯಂತಿರುವ ಇವರು ತನ್ನ ಸ್ಕೂಟಿ ಏರಿ ಏಕಾಂಗಿಯಾಗಿ 1500ಕ್ಕೂ ಹೆಚ್ಚು ದೂರ ಕ್ರಮಿಸಿ ಗಮನ ಸಳೆದಿದ್ದಾರೆ.


ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ತುಡಿತಕ್ಕೆ ಜೊತೆಯಾಗಿದ್ದು ಸಾಹಿತ್ಯ ಪ್ರಚಾರ ಹಾಗೂ ಸ್ವತಂತ್ರ ಪರ್ಯಟನೆ. ಕೇವಲ 50 ಕಿ.ಮೀ. ದೂರ ತೆರಳಲು ಹಿಂಜರಿಯುವ ಕಾಲಘಟ್ಟದಲ್ಲಿ ಬರೋಬ್ಬರಿ 1400ರಿಂದ 1500 ಕಿ.ಮೀ ಸಂಚರಿಸುವುದು ಸುಲಭದ ಮಾತಲ್ಲ. ತನ್ನ ಸಾಹಿತ್ಯದ ಹೊತ್ತಗೆಯನ್ನು ಹೊತ್ತು ಬೆಂಗಳೂರಿನಿಂದ ಕರಾವಳಿಯ ವಿವಿಧ ಊರುಗಳಿಗೆ ಭೇಟಿ ನೀಡಿ ಕ್ಷೇತ್ರ ದರ್ಶನ, ಗಣ್ಯರ ಭೇಟಿ, ಸಾಹಿತ್ಯಿಕ ಮನಸ್ಸುಗಳ ಜೊತೆ ಚರ್ಚೆ ನಡೆಸಿದ್ದಾರೆ.


ಆಗುಂಬೆ, ಕಮಲಶಿಲೆ, ಕುಂದಾಪುರ, ಕೋಟ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿರುವ ಅರ್ಚನಾ ಆರ್ಯ, ಚಂದ್ರಗುತ್ತಿ, ಬನವಾಸಿ, ಹೊನ್ನಾವರ, ಇನ್ನೂ ಅನೇಕ ಭಾಗಗಳನ್ನು ಭೇಟಿ ನೀಡಿ ಹಾಸನದ ಕಡೆ ಪ್ರಯಾಣ ಬೆಳೆಸಿದ್ದಾರೆ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಕನ್ನಡ ಸಾಹಿತ್ಯ ಹಾಗೆ ಇಲ್ಲಿಯ ವಿಭಿನ್ನ ಸಂಪ್ರದಾಯ ತಿಳಿಯುವ ಇವರ ಆಸೆ ಮತ್ತು ಅವರಿಗೆ ಬೇಕಾದ ಸದ್ವಿಚಾರದ ಮಾಹಿತಿ ಸಂಗ್ರಹ ಅವರ ಕನಸಂತೆ.


ಅರ್ಚನಾ ಪಯಣ ಸುಲಭವಾಗಿರಲಿಲ್ಲ. ಸಾಕಷ್ಟು ಸವಾಲುಗಳಿದ್ದವು. ಮೊದಲೇ ಕೊರೋನಾ ಆತಂಕ, ಅಕಾಲಿಕ ಮಳೆ, ಹವಾಮಾನ ವೈಪರೀತ್ರ್ಯವಿದ್ದರೂ ಕೂಡಾ ಒಂಟಿ ಮಹಿಳೆ ಸ್ಕೂಟಿಯ ಮೂಲಕ ಸಾಹಿತ್ಯ ಪ್ರದಕ್ಷಿಣೆ ಮಾಡಿದ್ದಾರೆ. ಅರ್ಚನಾ ಬೆಂಗಳೂರಿನಿಂದ ಪಯಣ ಹೊರಟಿದ್ದು 2020ರ ಅಕ್ಟೋಬರ್ 25ರಂದು. ಒಟ್ಟಾರೆಯಾಗಿ ಅರ್ಚನಾ ಆರ್ಯರ ದಿಟ್ಟತೆ ಗಮನಾರ್ಹವಾದುದು.

ಅರ್ಚನಾ ಆರ್ಯ ಸಾಹಸ ಗಮನಿಸುವಾಗ ಸವಾಲುಗಳನ್ನು ಸ್ವೀಕರಿಸಿದ ರಾಷ್ಟ್ರೀಯ ಕ್ರೀಡಾ ಪಟು ಅರುಣೀಮಾ ಸಿನ್ನಾ ನೆನಪಿಗೆ ಬರುತ್ತಾರೆ.
ಅರುಣೀಮಾ ಕ್ರೀಡೆಯಲ್ಲಿ ಮುಂಚೂಣಿ ಇರುವ ಕಾರಣ ರಾಷ್ಟ್ರೀಯ ವಾಲಿಬಾಲ್ ಕ್ರೀಡೆಗೆ ಆಯ್ಕೆಗೊಳ್ಳುತ್ತಾಳೆ.ಈ ಸಂತಸದ ಸುದ್ದಿಯನ್ನು ಮನೆಯಲ್ಲಿ ತಿಳಿಸುತ್ತಾಳೆ. ಬಡತನದ ಕಷ್ಟಗಳನ್ನು ಅನುಭವಿಸಿದ ಈಕೆ ತನ್ನ ತಂದೆಯ ಅನುಮತಿ ಪಡೆದು ಕ್ರೀಡಾ ತರಭೇತಿ ಪಡೆಯಲು ದೆಹಲಿಗೆ ಹೋಗಲು ತಯಾರಾಗಿ ರೈಲ್ವೆ ನಿಲ್ದಾಣಕ್ಕೆ ಬರುತ್ತಾಳೆ.ರೈಲಿನಲ್ಲಿ ಸ್ವಲ್ಪ ದೂರ ಪ್ರಯಾಣಿಸಿದ ನಂತರ ಡಕಾಯತರು ಒಮ್ಮಿಂದೊಮ್ಮೆಲೇ ಆಕ್ರಮಣದ ಮಾಡುತ್ತಾರೆ.ರೈಲಿನಲ್ಲಿ ಇರುವವರೆಲ್ಲಾ ದಂಗಾಗಿ ತನ್ನಲ್ಲಿ ಇರುವ ಒಡವೆ,ವಸ್ತುಗಳನ್ನೆಲ್ಲಾ ಡಕಾಯಿತರ ಕೈಗೆ ನೀಡುತ್ತಾರೆ. ಆದರೆ ಅರುಣಿಮಾ ಯಾವುದೇ ಕಾರಣಕ್ಕೂ ತನ್ನಲ್ಲಿರುವ ವಸ್ತುಗಳನ್ನು ಮುಟ್ಟಲು ಬಿಡುವುದಿಲ್ಲಾ, ಸಿಟ್ಟಿನಿಂದ ಡಕಾಯತರು ಅರುಣೀಮಾನನ್ನು ರೈಲಿನಿಂದ ದಬ್ಬುತ್ತಾರೆ. ದಬ್ಬಿದ ನಂತರ ಸುಮಾರು 40 ರಿಂದ 50 ರೈಲುಗಳು ದೇಹದ ಮೇಲೆ ಹಾದು ಹೋದರೂ ಪ್ರಜ್ನೆಯೇ ಇಲ್ಲದೇ ಇರುವಾಗ ಬೆಳಿಗ್ಗಿನ ಹೊತ್ತಿನಲ್ಲಿ ಕೂಲಿ ಕೆಲಸ ಮಾಡುವ ವ್ಯಕ್ತಿ ನೋಡಿ ಸರಕಾರಿ ಆಸ್ಪತ್ರೆಗೆ ಸೇರಿಸುತ್ತಾರೆ. ಸೇರಿಸುವಾಗಲೇ ತನ್ನ ಕಾಲಿನ ಶಕ್ತಿ ಕುಗ್ಗಿದ್ದು ತಿಳಿಯದ ಸ್ಥಿತಿಯಲ್ಲಿ ಆಕೆ. ಮರು ದಿನ ಆಕೆ ಯಾರೆಂದು ಪತ್ರಿಕೆಯಲ್ಲಿ ವರದಿ ಆದಾಗ ,ಉನ್ನತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗೆ ಸೇರಿಸಲಾಗುತ್ತೆ.ಅರೆ ಪ್ರಜ್ನೆ ಸ್ಧಿತಿಯಲ್ಲಿ ಇರುವಾಗ ವೈದ್ಯರು ಪ್ರಜ್ನೆ ತಪ್ಪಿಸುವ ತಜ್ನ ವೈದ್ಯರಿಲ್ಲ ಎಂದೂ ಹೇಳುವಾಗ ಅರೆ ಪ್ರಜ್ಞೆಯಲ್ಲಿ ನನ್ನ ಆಪರೇಷನ್ ಮಾಡಿ ಎಂದು ವೈದ್ಯರಿಗೆ ತಿಳಿಸಿ ಹೇಳುತ್ತಾರೆ.
ಆಕೆಯ ಆಪರೇಷನ್ ಪ್ರಜ್ಞೆ ತಪ್ಪಿಸದೇ ನಡೆಯಿತು. ನಂತರ ವೈದ್ಯರ ಸಲಹೆಯಂತೆ ಸ್ವಲ್ಪ ಸಮಯಗಳ ಕಾಲ ವಿಶ್ರಾಂತಿ ಪಡೆಯಲು ಹೇಳಿ ಮನೆಗೆ ತೆರಳಿ ಅಂದಾಗ ಈಕೆ ಹೋಗಿದ್ದು ಮನೆಗಲ್ಲಾ ಭಾರತದ ಕೀರ್ತಿ ಪತಾಕೆಯನ್ನು ಸಾಧನೆಯ ಮೂಲಕ ಹಿಮಾಲಯ ಪವ9ತವನ್ನೇರಿದ ರಾರಾಜಿಸುವಂತೆ ಮಾಡಿದ ಮಹಿಳಾ ಸಾಧಕಿ ಬಚ್ಚೇಂದ್ರಿ ಪಾಲ್ ಮನೆಗೆ ತೆರಳುತ್ತಾಳೆ. ಸಾಧಕಿಯ ಮುಂದೆ ಒಂದು ಕಾಲು ಕಳೆದು ಕೊಂಡ ಅರುಣೀಮಾ ಸಿನ್ನಾ ಬರುವಾಗಲೇ ವೀಲ್‍ಚೇರ್‍ನಲ್ಲಿ ಈಕೆಯ ಬಳಿ ಬರುತ್ತಾಳೆ. ಅರುಣೀಮಾಳ ಧೃಡತೆಗೆ ಹಾಗೂ ಸಾಧನೆಯ ಹಂಬಲಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಯಿತು.

-ಪ್ರದೀಪ ಕುಮಾರ್ ಬಸ್ರೂರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!