spot_img
Thursday, June 18, 2026
spot_img

ಉಪ್ಪುಂದ : ಎಸ್ ಜನಾರ್ದನ್‌ರಿಗೆ ನುಡಿನಮನ

ಕುಂದಾಪುರ ತಾಲೂಕು ಹವ್ಯಕ ಸಭಾ (ರಿ.) ಇದರ ವತಿಯಿಂದ ಭಾನುವಾರ ಸಂಜೆ ಉಪ್ಪುಂದದಲ್ಲಿ ಇತ್ತಿಚೆಗೆ ನಿಧನರಾದ ನಿವೃತ್ತ
ಉಪನ್ಯಾಸಕ, ಪತ್ರಕರ್ತರಾದ ಎಸ್. ಜನಾರ್ದನ್ ಮರವಂತೆ ಇವರ ಶೃದ್ಧಾಂಜಲಿ ಸಭೆ ನಡೆಯಿತು.
ನಿವೃತ್ತ ಉಪನ್ಯಾಸಕರಾದ ಪ್ರೋ. ಎಮ್.ವಿ ನಾರಾಯಣ ಸ್ವಾಮೀ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಎಸ್. ಜನಾರ್ದನ್ ಅವರು ಮೃದು ಸ್ವಭಾವದವರು, ಸರಳ ಜೀವನ ಶೈಲಿ ಹೊಂದಿದ್ದರು, ಹಾಗೂ ಶಿಕ್ಷಣ, ಸಾಮಾಜಿಕ ಸೇವೆ, ಪಂಚಾಯತ್‌ರಾಜ್, ಪತ್ರಕರ್ತರಾಗಿ ಕಾರ್ಯನಿರ್ವಹಿಸಿ ಈ ಎಲ್ಲಾ ಕ್ಷೇತ್ರದ ಘನತೆಯನ್ನು ಹೆಚ್ಚಿಸಿ ರಾಜ್ಯ ಮಟ್ಟದ ಸಂಪನ್ಮೂಲ
ವ್ಯಕ್ತಿಯಾಗಿರುವುದು ನಮಗೆ ಹಾಗೂ ಜಿಲ್ಲೆಗೆ ಹೆಮ್ಮೆಯಾಗಿರುತ್ತದೆ ಎಂದು ಹೇಳಿದರು.
ಹವ್ಯಕ ಸಭಾ (ರಿ.) ಸಂಘದ ಅಧ್ಯಕ್ಷರಾದ ಎಮ್. ನಾಗರಾಜ್ ಭಟ್ ಮಕ್ಕಿದೇವಸ್ಥಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ
ಗುರಿಕಾರರಾದ ಗಣೇಶ್ ಪುರಾಣಿಕ್, ಶ್ರೀಧರ ಜೋಶಿ, ಉಮೇಶ್‌ಚಂದ್ರ ಭಟ್, ಕೋಶಾಧಿಕಾರಿ ಬೇಳೂರು ಗಣೇಶ್ ರಾವ್,
ಕೃಷ್ಣಮೂರ್ತಿ ಕರ್ಣಿಕ್, ವರದಾಂಭಿಕಾ ಭಟ್ ಉಪಸ್ಥಿತರಿದ್ದರು. ಮೃತರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಪುಷ್ಪಾರ್ಚನೆ ನಡೆಸಲಾಯಿತು. ವಿದ್ವಾನ್ ಯು ಶಂಕರನಾರಾಯಣ ಭಟ್ ಸ್ವಾಗತಿಸಿ, ವಂದಿಸಿದರು. ಹವ್ಯಕ ಸಭಾ ಕಾರ್ಯದರ್ಶಿ ಸಂದೇಶ ಭಟ್ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು..

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!